ಮಧ್ಯಪ್ರದೇಶದ ಆಸ್ಪತ್ರೆಯೊಂದರ ಐಸಿಯು ವಾರ್ಡ್​ನಲ್ಲಿ ತಿರುಗಾಡುತ್ತಿರುವ ಹಸುವಿನ ಆರೋಗ್ಯದ ಬಗ್ಗೆ ನೆಟ್ಟಿಗರ ಕಳವಳ

Madhyapradesh : ಬಿಜೆಪಿ ಆಡಳಿತಾವಧಿಯಲ್ಲಿ ಇಂಥ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ ಒಬ್ಬರು. ಗೋರಕ್ಷಕರೆಲ್ಲ ಈಗೆಲ್ಲಿ ಹೋಗಿದ್ದಾರೆ ಎಂದು ಮಗದೊಬ್ಬರು ಕೇಳಿದ್ದಾರೆ. ಇದರಲ್ಲೂ ಬಿಜೆಪಿ? ಎಂದಿದ್ದಾರೆ ಇನ್ನೂ ಒಬ್ಬರು.

ಮಧ್ಯಪ್ರದೇಶದ ಆಸ್ಪತ್ರೆಯೊಂದರ ಐಸಿಯು ವಾರ್ಡ್​ನಲ್ಲಿ ತಿರುಗಾಡುತ್ತಿರುವ ಹಸುವಿನ ಆರೋಗ್ಯದ ಬಗ್ಗೆ ನೆಟ್ಟಿಗರ ಕಳವಳ
ಮಧ್ಯಪ್ರದೇಶದ ಆಸ್ಪತ್ರೆಯ ಐಸಿಯು ವಾರ್ಡ್​ನೊಳಗೆ ತಿರಗಾಡುತ್ತಿರುವ ಹಸು
Updated By: ಶ್ರೀದೇವಿ ಕಳಸದ

Updated on: Nov 21, 2022 | 12:56 PM

Viral Video : ಕೆಲದಿನಗಳ ಹಿಂದೆ ತೆಲಂಗಾಣದ ಸರ್ಕಾರಿ ಆಸ್ಪತ್ರೆಯ ವಾರ್ಡ್​ನೊಳಗೆ ಹಾವು ಹರಿದಾಡಿದ್ದನ್ನು ನೋಡಿದಿರಿ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಧ್ಯಪ್ರದೆಶದ ರಾಜ್​ಗಢ್​ನ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದ (ICU)ಕ್ಕೆ ಹಸುವೊಂದು ನುಗ್ಗಿದೆ. ಒಳಗಿರುವ ಕಸದ ಬುಟ್ಟಿಗಳನ್ನೆಲ್ಲ ತಡಕಾಡಿಕೊಂಡು ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿದೆ. ನೆಟ್ಟಿಗರು ಈ ಅವ್ಯವಸ್ಥೆಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಕಿಡಿಕಾರುತ್ತಿದ್ದಾರೆ.

ಸಿವಿಲ್ ಸರ್ಜನ್​ ಡಾ. ರಾಜೇಂದ್ರ ಕಟಾರಿಯಾ, ‘ಇದು ಹಳೆಯ ಕೋವಿಡ್ ಐಡಿಯು ವಾರ್ಡ್​. ವಾರ್ಡ್​ ಬಾಯ್​ ಮತ್ತು ಭದ್ರತಾ ಸಿಬ್ಬಂದಿಯ ಅಚಾತುರ್ಯದಿಂದ ಈ ಘಟನೆ ನಡೆಇದೆ. ಈ ವಿಷಯವಾಗಿ ಕ್ರಮ ಗೈಗೊಳ್ಳಲಾಗುವುದು’ ಎಂದಿದ್ದಾರೆ.

ಹೀಗೆ ಮನಬಂದಂತೆ ಈ ಹಸು ಐಸಿಯು ಒಳಗೆ ತಿರುಗಾಡಿಕೊಂಡಿದ್ದರೂ ಯಾವೊಬ್ಬ ಸಿಬ್ಬಂದಿಯೂ ಇತ್ತ ಗಮನ ಕೊಟ್ಟಿಲ್ಲ. ವಿಡಿಯೋ ವೈರಲ್ ಆದ ನಂತರ ಪೊಲೀಸರಿಗೆ ಈ ವಿಷಯ ತಲುಪಿದೆ. ಆಡಳಿತ ಸಿಬ್ಬಂದಿರ ವಿರುದ್ಧ ಕ್ರಮವನ್ನು ಕೈಗೊಂಡಿದ್ದಾರೆ.

ನೆಟ್ಟಿಗರು ಈ ಬಗ್ಗೆ ಕುಪಿತರಾಗಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ಇಂಥ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ ಒಬ್ಬರು. ಇದರಲ್ಲೂ ಬಿಜೆಪಿ! ಎಂದು ಮರುಪ್ರಶ್ನಿಸಿದ್ದಾರೆ ಇನ್ನೊಬ್ಬರು. ಗೋರಕ್ಷಕರೆಲ್ಲ ಈಗೆಲ್ಲಿ ಹೋಗಿದ್ದಾರೆ ಎಂದು ಮಗದೊಬ್ಬರು ಕೇಳಿದ್ದಾರೆ. ಅದ್ಭುತ! ಇದು ಪ್ರಾಣಿಚಿಕಿತ್ಸಾಲಯ ಎಂದುಕೊಂಡಿದ್ದೆ ಎಂದಿದ್ದಾರೆ ಒಬ್ಬರು. ಆಕೆ ಐಸಿಯು ಪ್ರವೇಶಿಸಿದ್ದು ನನಗೆ ಬೇಸರ ತಂದಿಲ್ಲ. ಆದರೆ ಆಸ್ಪತ್ರೆಯ ತ್ಯಾಜ್ಯವನ್ನು ತಿನ್ನುತ್ತಿರುವ ಆಕೆಯ ಆರೋಗ್ಯದ ಪರಿಸ್ಥಿತಿ ಏನಾಗಬಹುದು ಎಂದು ಕಳವಳಕ್ಕೀಡಾಗಿದ್ದೇನೆ ಎಂದಿದ್ದಾರೆ ಇನ್ನೊಬ್ಬರು.

ಒಂದು ಘಟನೆಗೆ ಎಷ್ಟೊಂದು ಮುಖಗಳಿರುತ್ತವಲ್ಲ?

ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ