Elephant: ಅನೇಕ ವಿಡಿಯೋಗಳಲ್ಲಿ ಆನೆಗಳು ವಾಹನಗಳ ಮೇಲೆ ದಾಳಿ ಮಾಡಿರುವುದನ್ನು ನೋಡಿದ್ದೀರಿ. ಅದರಲ್ಲೂ ಕಬ್ಬು (Sugarcane) ತುಂಬಿದ ಟ್ರಕ್ ಕಂಡರೆ ತನ್ನದೇ ಸ್ವತ್ತು ಎಂಬಂತೆ ಟ್ರಕ್ ತಡೆದುಬಿಡುತ್ತವೆ. ಡ್ರೈವರ್ ಗಾಬರಿಯಾಗದೆ ಟ್ರಕ್ ನಿಲ್ಲಿಸಿದರೆ ತನಗೆ ಬೇಕಾದಷ್ಟು ಕಬ್ಬು ತೆಗೆದುಕೊಂಡು ಪಕ್ಕದಲ್ಲಿ ಸರಿಯುತ್ತವೆ ಇಲ್ಲವೇ ದಾರಿಯನ್ನು ಅಡ್ಡಗಟ್ಟುತ್ತವೆ. ಒಟ್ಟಿನಲ್ಲಿ ಸಹಕಾರ ತತ್ವ ಇದ್ದಲ್ಲಿ ಎಲ್ಲವೂ ಸುಗಮ. ಇದೀಗ ವೈರಲ್ ಆಗಿರುವ ವಿಡಿಯೋ ಕಾಂಬೋಡಿಯಾ ಮತ್ತು ಥೈಲ್ಯಾಂಡ್ನದು. ರಸ್ತೆಬದಿ ನಿಂತಿರುವ ಆನೆ ಕಬ್ಬು ತುಂಬಿಕೊಂಡು ಬರುವ ಒಂದೊಂದೇ ಟ್ರಕ್ಗಳನ್ನು ತಡೆದು ತನಗೆ ಬೇಕಾದಷ್ಟು ಕಬ್ಬನ್ನು ತೆಗೆದುಕೊಂಡು ಟ್ರಕ್ ಮುಂದೆ ಹೋಗಲು ಅನುವು ಮಾಡಿ ಕೊಡುತ್ತಿದೆ.
ಇದನ್ನೂ ಓದಿ : Viral Brain Teaser: ಈ ಮೋಜಿನ ಗಣಿತದೊಂದಿಗೆ ನಿಮ್ಮ ದಿನವನ್ನು ಆರಂಭಿಸಿ
ಈ ವಿಡಿಯೋವನ್ನು ನವೆಂಬರ್ 7ರಂದು Xನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ 4.7 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. ಸುಮಾರು 60,000 ಜನರು ಲೈಕ್ ಮಾಡಿದ್ದು, 7,300 ಜನರು ರೀಪೋಸ್ಟ್ ಮಾಡಿದ್ದಾರೆ. ಸುಮಾರು 800 ಜನರು ಪ್ರತಿಕ್ರಿಯಿಸಿದ್ದಾರೆ.
In Cambodia and Thailand, elephants have learned to stop sugar cane trucks to grab a snack
pic.twitter.com/qyyGq2qnGB— Science girl (@gunsnrosesgirl3) November 7, 2023
ಇರಿ, ಆನೆಗಳೆಲ್ಲ ಗುಂಪಿನಲ್ಲಿ ಬಂದರೆ ನಿಮ್ಮ ಟ್ರಕ್ ಗತಿ ಅಷ್ಟೇ ಎಂದಿದ್ದಾರೆ ಒಬ್ಬರು. ಟೋಲ್ ಕಲೆಕ್ಟ್ ಮಾಡುತ್ತಿರುವ ಆನೆ ಎಂದಿದ್ದಾರೆ ಒಬ್ಬರು. ದಾಳಿಮಾಡುವ ಆನೆ ನೋಡಿದ್ದೆ, ಹೀಗೆ ಶಾಂತರೀತಿಯಿಂದ ಕೇಳಿ ಪಡೆಯುವ ಆನೆಯನ್ನು ಈತನಕ ನೋಡಿದ್ದಿಲ್ಲ ಎಂದಿದ್ದಾರೆ ಇನ್ನೊಬ್ಬರು. ಸಮಾಧಾನವಾಗಿ ವ್ಯವಹರಿಸಿದರೆ ಎಂಥ ಸಮಸ್ಯೆಯನ್ನೂ ನೀಗಿಸಬಹುದು ಎನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ‘ನನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದೇನೆ ನೋಡುಬಾ’ ಜಿಂಕೆ ನಾಯಿಗೆ ಕರೆದಾಗ
ಈ ಆನೆಗಳ ಮೇಲೆ ಮುದ್ದು ಉಕ್ಕಿಬರುತ್ತಿದೆ ಎಂದಿದ್ದಾರೆ ಒಬ್ಬರು. ಹೀಗೆ ಆನೆಗಳು ಕಬ್ಬಿನ ಗಳುವನ್ನು ಹಿರಿದುಕೊಂಡ ಮೇಲೆಯೇ ಡ್ರೈವರ್ಗಳಿಗೆ ಒಂದು ರೀತಿ ಸಾರ್ಥಕ ಹೊಮ್ಮುವುದೇನೋ ಎಂದಿದ್ದಾರೆ ಇನ್ನೊಬ್ಬರು. ಇದು ಇಲ್ಲಿ ನಿತ್ಯವೂ ಕಂಡುಬರುವ ಸಾಮಾನ್ಯ ದೃಶ್ಯ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ