
ಭಾರತವು (India) ವೈವಿಧ್ಯತೆಯಿಂದ ಕೂಡಿದ ದೇಶ. ಇಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಆಚಾರ ವಿಚಾರಗಳು, ಸಂಪ್ರದಾಯಗಳು, ಉಡುಗೆ ತೊಡುಗೆ, ಆಹಾರ ಪದ್ಧತಿಗಳಿವೆ. ಆದರೆ ವಿದೇಶಿಗರಿಗೆ ಭಾರತದ ಆಚಾರ ವಿಚಾರ, ಉಡುಗೆ ತೊಡುಗೆಗಳೆಂದರೆ ಬಲು ಇಷ್ಟ. ಹೀಗಾಗಿ ಇಂಡಿಯಾಗೆ ಭೇಟಿಕೊಟ್ಟರೆ ಇಲ್ಲಿನ ಉಡುಗೆ ತೊಡುಗೆಗಳನ್ನು ಇಷ್ಟ ಪಟ್ಟು ಧರಿಸುವುದು ಹಾಗೂ ಆಹಾರಗಳನ್ನು ಸವಿದು ಖುಷಿ ಪಡುತ್ತಾರೆ. ಆದರೆ ಇಲ್ಲೊಬ್ಬ ಅಮೆರಿಕನ್ ಮಹಿಳೆಯು (American lady) ಕಳೆದ ನಾಲ್ಕು ವರ್ಷಗಳ ಹಿಂದೆ ತನ್ನ ಹುಟ್ಟೂರನ್ನು ತೊರೆದು ಭಾರತಕ್ಕೆ ಬಂದು ನೆಲೆಸಿರುವುದಾಗಿ ಹೇಳಿಕೊಂಡಿದ್ದಾಳೆ. ಈ ಮಹಿಳೆಯ ಹೆಸರು ಕ್ರಿಸ್ಟನ್ ಫಿಷರ್ (Kristen Fisher). ತನಗೆ ಭಾರತದ ಯಾಕೆ ಇಷ್ಟ ಎನ್ನುವುದನ್ನು ತಿಳಿಸಿದ್ದು ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತ ಇಷ್ಟ ಎನ್ನಲು ವಿದೇಶಿ ಮಹಿಳೆ ಕೊಟ್ಟ ಕಾರಣವಿದು
kristenfischer3 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕ್ರಿಸ್ಟನ್ ಫಿಷರ್ ಈ ವಿಡಿಯೋದಲ್ಲಿ ತಾನು ಭಾರತದಲ್ಲಿ ಅತ್ಯದ್ಭುತವಾಗಿ ಜೀವಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಈ ವಿಡಿಯೋದೊಂದಿಗೆ ನಾನು ಹಾಗೂ ನನ್ನ ಕುಟುಂಬವು ಕಳೆದ ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ಬಂದು ನೆಲೆಸಿದ್ದೇವೆ. ನಾಲ್ಕು ವರ್ಷಗಳಲ್ಲಿ ನಾನು ಇಲ್ಲಿ ಅದ್ಭುತ ಜನರನ್ನು ಭೇಟಿ ಮಾಡಿದ್ದೇನೆ, ಅದ್ಭುತ ಸ್ಥಳಗಳಿಗೆ ಭೇಟಿ ನೀಡಿದ್ದು ಕಣ್ತುಂಬಿಸಿಕೊಂಡಿದ್ದೇನೆ. ಇಲ್ಲಿನ ವಿವಿಧ ಆಹಾರ ಹಾಗೂ ಸವಿರುಚಿಯನ್ನು ಸವಿದ್ದಿದ್ದೇನೆ. ಭಾರತ ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎಂದಿದ್ದಾಳೆ.
ಇದನ್ನೂ ಓದಿ : Video : ಎಲ್ಲೆಲ್ಲಿ ನೋಡಲಿ ಬಂಗಾರ ಕಾಣುವೆ, ಇದು ಚಿನ್ನದ ಮನೆ
ಈ ವಿಡಿಯೋವೊಂದು ಒಂದು ಲಕ್ಷ ನಲವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರರೊಬ್ಬರು ಯುಎಸ್ ಎ ಗೆ ಹೋಲಿಸಿದರೆ ಭಾರತವು ಬೆಸ್ಟ್. ನಿಮ್ಮ ಆಯ್ಕೆ ಸರಿಯಾಗಿದೆ ಎಂದಿದ್ದಾರೆ. ಮತ್ತೊಬ್ಬರು, ನನಗೆ ನಿಜಕ್ಕೂ ಹೊಟ್ಟೆ ಕಿಚ್ಚು ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ವಿದೇಶಿಗರು ಭಾರತವನ್ನು ಇಷ್ಟ ಪಟ್ಟು ಇಲ್ಲಿ ಬಂದು ವಾಸಿಸುವುದನ್ನು ನೋಡಿದರೆ ನಿಜಕ್ಕೂ ಖುಷಿಯೆನಿಸುತ್ತದೆ. ಇಲ್ಲಿನ ಆಚಾರ ವಿಚಾರ, ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Mon, 30 June 25