Video: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹೆತ್ತವರನ್ನು ಚಾಲಕ ರಹಿತ ಕಾರಿನಲ್ಲಿ ಸುತ್ತಾಡಿಸಿದ ಭಾರತೀಯ ಯುವತಿ

ಹೆತ್ತವರನ್ನು ಖುಷಿಪಡಿಸುವುದು ಎಲ್ಲ ಮಕ್ಕಳ ಕರ್ತವ್ಯ, ಅಪ್ಪ ಅಥವಾ ಅಮ್ಮ ಯಾವತ್ತೂ ಕೂಡ ತಮ್ಮ ಆಸೆಗಳನ್ನು ಹೇಳಿಕೊಳ್ಳುವುದಿಲ್ಲ. ಆದರೆ ಅದನ್ನು ಅರ್ಥ ಮಾಡಿಕೊಂಡು ಅದನ್ನು ಪೂರೈಸುವುದು ಮಕ್ಕಳ ಕರ್ತವ್ಯವಾಗಿರುತ್ತದೆ. ಇಲ್ಲೊಂದು ವೈರಲ್​​ ಆಗಿರುವ ವಿಡಿಯೋ ಕೂಡ ಇಂತಹದೇ, ಚಾಲಕ ರಹಿತ ಕಾರಿನಲ್ಲಿ ಪ್ರಯಾಣಿಸಿ ಮಗಳು ಹೆತ್ತವರನ್ನು ಖುಷಿಪಡಿಸಿದ್ದು, ಈ ಹೃದಯ ಸ್ಪರ್ಶಿ ಕ್ಷಣ ನೆಟ್ಟಿಗರ ಮ,ನಸ್ಸು ಗೆದ್ದುಕೊಂಡಿದೆ.

Video: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹೆತ್ತವರನ್ನು ಚಾಲಕ ರಹಿತ ಕಾರಿನಲ್ಲಿ ಸುತ್ತಾಡಿಸಿದ ಭಾರತೀಯ ಯುವತಿ
ವೈರಲ್​​ ವಿಡಿಯೋ
Image Credit source: Instagram

Updated on: Aug 18, 2025 | 4:34 PM

ವಯಸ್ಸಾದ ತಂದೆ ತಾಯಂದಿರು  ಯಾವುದೇ ಆಸೆಗಳು ಇದ್ರು ಅದನ್ನು ಮಕ್ಕಳ ಮುಂದೆ ಹೇಳಿಕೊಳ್ಳುವುದಿಲ್ಲ. ಆದರೆ ಅದನ್ನು ಮಕ್ಕಳೆ ಅರ್ಥ ಮಾಡಿಕೊಂಡು ಪೂರೈಸಿದಾಗ ಹೆತ್ತವರಿಗೆ ಆಗುವ ಖುಷಿ ಅಷ್ಟಿಷ್ಟು ಅಲ್ಲ. ಭಾರತೀಯ ಯುವತಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ (San Francisco) ತನ್ನ ಹೆತ್ತವರನ್ನು ಚಾಲಕನಿಲ್ಲದ ಕಾರಿನಲ್ಲಿ (driverless car) ಕರೆದುಕೊಂಡು ಹೋಗುವ ಹೃದಯಸ್ಪರ್ಶಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಪೂರ್ವ ಬೇಂದ್ರೆ ಎಂಬುವವರು ಈ ವಿಡಿಯೋ ತಮ್ಮ ಇನ್ಸ್ಟಾಗ್ರಾಮ್​​​​ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಹೆತ್ತವರನ್ನು ಚಾಲಕನಿಲ್ಲದ ಕಾರಿನಲ್ಲಿ ಕರೆದೊಯ್ಯಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.

ಭವಿಷ್ಯದಲ್ಲಿ ಇಂತಹ ವ್ಯವಸ್ಥೆಯನ್ನು ಭಾರತ ಕಾಣಲಿದೆ. ಅದಕ್ಕೂ ಮುನ್ನ ತನ್ನ ಹೆತ್ತವರಿಗೆ ಇದರ ಅನುಭವ ನಾನು ನೀಡಿರುವುದು ತುಂಬಾ ಖುಷಿಯಾಗಿದೆ. ನನ್ನ ಹೆತ್ತವರನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಚಾಲಕರಹಿತ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ವಾಹ್, ಎಂತಹ ಅನುಭವ! ಇದು ಸುರಕ್ಷಿತ, ಸುಗಮ ಮತ್ತು ಪ್ರಾಮಾಣಿಕವಾಗಿ ಹಸ್ತಚಾಲಿತ ಚಾಲಕನಿಗಿಂತ ಹೆಚ್ಚು ವಿಶ್ವಾಸಾರ್ಹವೆನಿಸಿತು. ನಮ್ಮ ಮೊದಲ 15 ನಿಮಿಷಗಳ ಸವಾರಿ ಸಾಕಾಗಲಿಲ್ಲ… ಆದ್ದರಿಂದ ನಾವು ತಕ್ಷಣವೇ ಇನ್ನೊಂದನ್ನು ಬುಕ್ ಮಾಡಿದ್ದೇವೆ ಎಂದು ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ. ಈ ವಿಡಿಯೋ 94,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು. ಇದರ ಜತೆಗೆ ಲೈಕ್​​ ಕೂಡ ಪಡೆದುಕೊಂಡಿದೆ.

ಇದನ್ನೂ ಓದಿ
ಅಪ್ಪನಿಗಿದ್ದ ಓದುವ ಹವ್ಯಾಸವೇ ಈ ಪುಟಾಣಿಯೂ ಜ್ಯೂಸ್‌ ಶಾಪ್‌ ತೆರೆಯಲು ಕಾರಣ
ಹೋಮ್ ವರ್ಕ್ ವಿಷ್ಯ ಮಾತಾಡಿದ್ದೇ ತಡ, ಈ ಹುಡುಗ ಏನ್‌ ಮಾಡಿದ ನೋಡಿ
ವಿದೇಶಿ ಮಹಿಳೆಯನ್ನು ಮದುವೆಯಾದುದ್ದರ ಹಿಂದಿನ ಕಾರಣ ತಿಳಿಸಿದ ಭಾರತೀಯ
3 ತಿಂಗಳು ಭಾರತದಲ್ಲಿ ಸುತ್ತಾಟ, ಶಾಶ್ವತವಾಗಿ ಉಳಿದ ವಿದೇಶಿ ದಂಪತಿ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಕರ್ನಾಟಕ, ಕೇರಳ, ತಮಿಳುನಾಡಿಗೆ ಹಿಂದಿ ಬೇಡ, ಹೊಸ ಚರ್ಚೆ ಹುಟ್ಟು ಹಾಕಿದ ಅಯ್ಯೋ ಶ್ರದ್ಧಾ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೂ ಕಾಮೆಂಟ್‌ ಮಾಡಿದ್ದು, ಒಬ್ಬ ಬಳಕೆದಾರರು, ಈ ಅನುಭವದಿಂದ ಅವರು ಸಂಪೂರ್ಣವಾಗಿ ರೋಮಾಂಚನಗೊಂಡಿರಬೇಕು ಎಂದು ಹೇಳಿದ್ದಾರೆ. ತುಂಬಾ ಖುಷಿಯಾಯಿತು! ಅವರ ಪ್ರತಿಕ್ರಿಯೆ ಏನು? ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್‌ನಲ್ಲಿ ಪ್ರತಿಕ್ರಿಯಸಿದ್ದಾರೆ. ಒಂದು ಪೀಳಿಗೆಯ ಪ್ರವಾಸ ಎಂದು ಮತ್ತೊಬ್ಬ ಬಳಕೆದಾರ ಬಣ್ಣಿಸಿದ್ದಾರೆ. ಇದು ತುಂಬಾ ಹೃದಯಸ್ಪರ್ಶಿಯಾಗಿದೆ ಎಂದು ಇನ್ನೊಬ್ಬರು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Mon, 18 August 25