Navaratri : ನವರಾತ್ರಿ ಈಗಾಗಲೇ ಆರಂಭವಾಗಿದೆ. ಎಲ್ಲೆಡೆ ದೇವಿಯ ಆರಾಧನೆ ವಿಜೃಂಭಣೆಯಿಂದ ನಡೆಯುತ್ತಿದೆ. ಅನೇಕರು ವ್ರತ-ಉಪವಾಸಗಳನ್ನು ಆಚರಿಸುತ್ತ ನಿತ್ಯಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸಾಕಷ್ಟು ಜನ ಈ ಒಂಬತ್ತು ದಿನಗಳ ಆರಾಧನೆಗಾಗಿ ಮಾಂಸಾಹಾರ ಮತ್ತು ಮದ್ಯಪಾನದಿಂದ ದೂರವಿದ್ದಾರೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡ ರೈಲ್ವೆ ಇಲಾಖೆಯು ವ್ರತಕ್ಕೆ ಸಂಬಂಧಿಸಿದ ವಿಶೇಷ ತಿಂಡಿತಿನಿಸುಗಳನ್ನು ತನ್ನ ಪ್ರಯಾಣಿಕರಿಗೆ ಪೂರೈಸಲು ಪ್ರಾರಂಭಿಸಿದೆ. ಈ ವಿಷಯವನ್ನು ಟ್ವಿಟರ್ನಲ್ಲಿ ರೈಲ್ವೆ ಸಚಿವಾಲಯವು ಪೋಸ್ಟ್ ಮಾಡಿದೆ.
During the auspicious festival of Navratri, IR brings to you a special menu to satiate your Vrat cravings, being served from 26.09.22 – 05.10.22.
ಇದನ್ನೂ ಓದಿOrder the Navratri delicacies for your train journey from 'Food on Track' app, visit https://t.co/VE7XkOqwzV or call on 1323. pic.twitter.com/RpYN6n7Nug
— Ministry of Railways (@RailMinIndia) September 25, 2022
‘ದಿ ಇಂಡಿಯನ್ ರೈಲ್ವೇಸ್ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (IRCTC) ಈ ಹಬ್ಬದ ಸಮಯದಲ್ಲಿ ವ್ರತದ ಪ್ರಯುಕ್ತ ವಿಶೇಷ ತಿಂಡಿತಿನಿಸುಗಳ ಪಟ್ಟಿಯನ್ನೇ ಹೊಂದಿದೆ. ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ಪ್ರಯಾಣಿಕರಿಗೆ ಪೂರೈಸಲಾಗುತ್ತದೆ’ ಎಂಬ ಪೋಸ್ಟ್ನೊಂದಿಗೆ ತಿನಿಸಿನ ಫೋಟೋ ಹಂಚಿಕೊಂಡಿದೆ ರೈಲ್ವೆ ಸಚಿವಾಲಯ. ಈ ಪೋಸ್ಟ್ ಅನ್ನು 3,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ವಿವಿಧ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ವ್ರತ ಆರಾಧಕರಿಗೆ ಅನುಕೂಲವಾಗಿರುವಂಥ ಈ ನಿರ್ಧಾರವನ್ನು ಅನೇಕರು ಶ್ಲಾಘಿಸಿದ್ದಾರೆ.
ತಿಂಡಿಯ ಫೋಟೋ ನೋಡುತ್ತಿದ್ದಂತೆ ರೈಲು ಏರಬೇಕು ಅನ್ನಿಸುತ್ತಿರಬೇಕಲ್ಲ? ಶುಭದಸರಾ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:55 pm, Wed, 28 September 22