Viral Post : ಹಾರ್ವರ್ಡ್​ ಬಿಝಿನೆಸ್ ಸ್ಕೂಲ್​ನಲ್ಲಿ ಅರಳಿದ ಭಾರತ-ಪಾಕಿಸ್ತಾನವೆಂಬ ಸ್ನೇಹದಹೂವಿನ ಕಥೆ

India-Pakistan : ಹಾರ್ವರ್ಡ್​ ಯುನಿವರ್ಸಿಟಿಯಲ್ಲಿ ಓದುತ್ತಿರುವಾಗ ಪಾಕಿಸ್ತಾನಿ ಹುಡುಗಿಯೊಂದಿಗೆ ತನ್ನ ಸ್ನೇಹ ಹೇಗೆ ಬೆಳೆಯುತ್ತ ಹೋಯಿತು ಎಂದು ಲಿಂಕ್​ಡೆನ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ ಅರ್ಲಿ ಸ್ಟೆಪ್ಸ್​ ಅಕಾಡೆಮಿಯ ಸಿಇಒ ಸ್ನೇಹಾ ಬಿಸ್ವಾಸ್.

Viral Post : ಹಾರ್ವರ್ಡ್​ ಬಿಝಿನೆಸ್ ಸ್ಕೂಲ್​ನಲ್ಲಿ ಅರಳಿದ ಭಾರತ-ಪಾಕಿಸ್ತಾನವೆಂಬ ಸ್ನೇಹದಹೂವಿನ ಕಥೆ
ಪಾಕಿಸ್ತಾನಿ ಸ್ನೇಹಿತೆಯೊಂದಿಗೆ ಸ್ನೇಹಾ
Edited By:

Updated on: Aug 11, 2022 | 1:51 PM

Viral Post : ಸ್ನೇಹಕ್ಕೆ ಯಾವ ಗಡಿ? ಭಾರತ – ಪಾಕಿಸ್ತಾನ ಕುರಿತು ವಾದವಿವಾದಗಳೇನೇ ಇದ್ದರೂ ಜನಜೀವನ ಮಾತ್ರ ತನಗೆ ಬೇಕಾದಂತೆ ಸಾಗುತ್ತಿರುತ್ತದೆ. ಸ್ನೇಹಾ ಬಿಸ್ವಾಸ್ ಅರ್ಲಿ ಸ್ಟೆಪ್ಸ್​ ಅಕಾಡೆಮಿಯ ಸಿಇಒ. ಇವರು ಹಂಚಿಕೊಂಡ ಈ ಪೋಸ್ಟ್​ ಈಗ ನೆಟ್ಟಿಗರ ಮನಸೂರೆಗೊಂಡಿದೆ. ಸ್ನೇಹಾ ಬಿಸ್ವಾಸ್​ ಹಾರ್ವರ್ಡ್​ ಬಿಸಿನೆಸ್​ ಸ್ಕೂಲ್​ನ ತನ್ನ ಪಾಕಿಸ್ತಾನಿ ಸಹಪಾಠಿಯೊಂದಿಗೆ ಸ್ನೇಹ ಅರಳಿದ್ದು ಹೇಗೆ ಎಂಬ ಅನುಭವವನ್ನು ಲಿಂಕ್​ಡೆನ್​ನಲ್ಲಿ ಪೋಸ್ಟ್​ ಮೂಲಕ ಹಂಚಿಕೊಂಡಿದ್ದಾರೆ.

‘ನಾನು ಭಾರತದ ಸಣ್ಣ ಪಟ್ಟಣದಲ್ಲಿ ಬೆಳೆದ ನನಗೆ ಪಾಕಿಸ್ತಾನದ ಕುರಿತು ಇದ್ದ ತಿಳಿವಳಿಕೆ ಕ್ರಿಕೆಟ್, ಇತಿಹಾಸದ ಪುಸ್ತಕ ಮತ್ತು ಮಾಧ್ಯಮಕ್ಕೆ ಮಾತ್ರ ಸೀಮಿತವಾಗಿತ್ತು. ಹತ್ತು ವರ್ಷಗಳ ಹಿಂದೆ ಹಾರ್ವರ್ಡ್​ ಬ್ಯುಸಿನೆಸ್​ ಸ್ಕೂಲ್​ನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್​ ಮೂಲದ ಈ ಹುಡುಗಿಯನ್ನು ಭೇಟಿಯಾದೆ. ನಮ್ಮಲ್ಲಿ ಪರಸ್ಪರ ಸ್ನೇಹ ಕುದುರಿದ್ದು ಕೇವಲ ಐದೇ ಸೆಕೆಂಡಿನಲ್ಲಿ. ಮೊದಲ ಸೆಮಿಸ್ಟರ್​ ಅಂತ್ಯದ ವೇಳೆಗೆ ಈಕೆ ನನ್ನ ಆಪ್ತಸ್ನೇಹಿತೆಯಾಗಿಬಿಟ್ಟಳು.’

‘ಸಾಕಷ್ಟು ಸಮಯವನ್ನು ನಾವು ಒಟ್ಟಿಗೇ ಕಳೆದಿದ್ದೇವೆ. ಓದು, ಪ್ರಾಜೆಕ್ಟ್​ನೊಂದಿಗೆ ವಿವಿಧ ರೀತಿಯ ಚಹಾ ಮತ್ತು ಬಿರಿಯಾನಿ ಮಾಡುತ್ತ ನಮ್ಮ ಸ್ನೇಹದ ರುಚಿ ಹೆಚ್ಚಿಸಿಕೊಂಡಿದ್ದೇವೆ. ಈಕೆ ಪಾಕಿಸ್ತಾನದ ಸಂಪ್ರದಾಯವಾದಿ ಮನೆತನದಲ್ಲಿ ಬೆಳೆದವಳು. ಇವಳು ಹೇಳುವ ಒಂದೊಂದು ಘಟನೆಗಳು ಇಂದಿಗೂ ನೆನಪಿನಲ್ಲಿವೆ. ಈಕೆಯ ತಂದೆತಾಯಿ ಈಕೆಗೆ ಮತ್ತು ತಂಗಿಗೆ ಸಮಾಜ ವಿಧಿಸಿದ ಕಟ್ಟಳೆಗಳನ್ನು ಮುರಿದು ತಮ್ಮ ಕನಸುಗಳನ್ನು ಕಟ್ಟಿಕೊಳ್ಳಲು ನೀಡಿದ ಧೈರ್ಯ, ಬೆಂಬಲಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ನನ್ನ ಬಳಿ ಹಂಚಿಕೊಂಡಿದ್ದಾಳೆ. ನಿಜಕ್ಕೂ ಅವಳ ಎಲ್ಲ ಕಥನಗಳಿಂದ ನಾನು ಸ್ಫೂರ್ತಿಗೊಂಡಿದ್ದೇನೆ. ಈಗಲೂ ಅದೆಲ್ಲವೂ ಅನುರಣಿಸುತ್ತಿರುತ್ತವೆ. ಗಡಿ, ಗೋಡೆ ನಿರ್ಮಿಸಿದ್ದು ಮನುಷ್ಯರು. ಪರಸ್ಪರ ಬೆರೆತು ನೋಡಿದಾಗ ಹೃದಯಗಳು ತಾವಾಗೇ ಬೆಸೆಯುತ್ತವೆ.’ ಎಂದಿದ್ದಾರೆ ಸ್ನೇಹಾ.

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಪೋಸ್ಟ್ ಸುಮಾರು 42 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು 1,705 ಪ್ರತಿಕ್ರಿಯೆಗಳನ್ನು ಹೊಂದಿದೆ. ಮನಸ್ಸನ್ನು ಅರಳಿಸುವ ಈ ಪೋಸ್ಟ್​ ಅನ್ನು ಸಾಕಷ್ಟು ಜನ ಇಷ್ಟಪಟ್ಟು ಪ್ರತಿಕ್ರಿಯಿಸಿದ್ಧಾರೆ.

ಮತ್ತಷ್ಟು ವೈರಲ್ ಸುದ್ದಿಗಾಗಿ ಕ್ಲಿಕ್ ಮಾಡಿ

Published On - 1:47 pm, Thu, 11 August 22