ಹೈಡ್ರೋಜನ್ ಚಾಲಿತ ರೈಲಿನ ಯಶಸ್ವಿ ಪ್ರಯೋಗ; ಇದು ಸಾಮಾನ್ಯ ರೈಲುಗಳಿಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?

ಭಾರತದ ರೈಲ್ವೆ ತಂತ್ರಜ್ಞಾನ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದು, ಡೀಸೆಲ್‌, ವಿದ್ಯುತ್‌ ಅಲ್ಲ ಇನ್ನು ಮುಂದೆ ಹೈಡ್ರೋಜನ್‌ ಚಾಲಿತ ರೈಲುಗಳು ಓಡಾಡಲಿದೆ. ಇದೀಗ ಇದರ ಯಶಸ್ವಿ ಪ್ರಯೋಗ ನಡೆದಿದ್ದು, ಆಗಸ್ಟ್‌ 31 ರಿಂದ ಇರದ ಓಡಾಟ ಆರಂಭವಾಗುವ ಸಾಧ್ಯತೆ ಇದೆ. ಅಷ್ಟಕ್ಕೂ ಈ ರೈಲು ಸಾಮಾನ್ಯ ರೈಲುಗಳಿಗಿಂತ ಹೇಗೆ ಭಿನ್ನವಾಗಿದೆ, ಇದರ ವಿಶೇಷತೆಗಳೇನು ಎಂಬುದನ್ನು ತಿಳಿಯಿರಿ.

ಹೈಡ್ರೋಜನ್ ಚಾಲಿತ ರೈಲಿನ ಯಶಸ್ವಿ ಪ್ರಯೋಗ; ಇದು ಸಾಮಾನ್ಯ ರೈಲುಗಳಿಗಿಂತ ಹೇಗೆ ಭಿನ್ನವಾಗಿದೆ ಗೊತ್ತಾ?
ಹೈಡ್ರೋಜನ್‌ ಚಾಲಿತ ರೈಲು
Image Credit source: Social Media

Updated on: Jul 26, 2025 | 12:04 PM

ಭಾರತೀಯ ರೈಲ್ವೆ (India Railway) ವಿಶ್ವದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದಾಗಿದೆ. ದೇಶದ ಹೆಚ್ಚಿನ ನಾಗರಿಕರು ದೂರದ ಪ್ರಯಾಣಕ್ಕೆ ರೈಲ್ವೆ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಇನ್ನೂ ಕಾಲ ಕಾಲಕ್ಕೆ ರೈಲುಗಳು ಸಹ ನವೀಕರಣಗೊಳ್ಳುತ್ತಿವೆ.  ಜೊತೆಗೆ ರೈಲ್ವೆ ತಂತ್ರಜ್ಞಾನದಲ್ಲಿ ಹೊಸ ಹೊಸ ಪ್ರಯೋಗಳು ನಡೆಯುತ್ತಲೇ ಇರುತ್ತವೆ. ಇದೀಗ ಭಾರತೀಯ ರೈಲ್ವೆ ತಂತ್ರಜ್ಞಾನ ಮತ್ತೊಂದು ಐತಿಹಾಸಿಕ ಮೈಲುಗಲ್ಲನ್ನು ಸಾಧಿಸಿದ್ದು, ಇನ್ನು ಮುಂದೆ ಹೈಡ್ರೋಜನ್‌ ಚಾಲಿತ ರೈಲು (India’s Hydrogen Train) ಓಡಾಡಲಿದೆ.  ದೇಶದ ಮೊದಲ ಮೊದಲ ಹೈಡ್ರೋಜನ್‌ ಚಾಲಿತ ರೈಲನ್ನು ಚೆನ್ನೈ ಮೂಲದ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿಯಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದ್ದು, ಈ ಬಗೆಗಿನ ಮಾಹಿತಿಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಮ್ಮ ಅಧೀಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಈ ಹೈಡ್ರೋಜನ್‌ ರೈಲು ಸಾಮಾನ್ಯ ರೈಲುಗಳಿಗಿಂಯ ಹೇಗೆ ಭಿನ್ನವಾಗಿದೆ, ಇದರ ವಿಶೇಷತೆಗಳೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ದೇಶದ ಮೊಲದ ಹೈಡ್ರೋಜನ್‌ ಚಾಲಿತ ರೈಲು:

ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಚೆನ್ನೈ ಮೂಲದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಘೋಷಿಸಿದ್ದಾರೆ. ಈ ಕೋಚ್ ಚಾಲನಾ ಶಕ್ತಿಯ ಎಂಜಿನ್ ಆಗಿದ್ದು, ಇದನ್ನು ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಆಗಸ್ಟ್‌ ಅಂತ್ಯದ ವೇಳೆಗೆ ಭಾರತದ ಮೊದಲ ಹೈಡ್ರೋಜನ್‌ ಚಾಲಿತ ರೈಲು ಓಡಾಡಲು ಸಿದ್ಧತೆಗಳು ನಡೆಯುತ್ತಿವೆ.

ಇದನ್ನೂ ಓದಿ
ಹತ್ತು ಸಾವಿರ ಕೋಟಿ ರೂ ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ, ವರ್ಕ್‌ ಫ್ರಮ್ ಹೋಮ್ ಬೆಸ್ಟ್‌
ಬದುಕು ಕಟ್ಟಿಕೊಟ್ಟ ಸುಂದರ ನಗರಕ್ಕೆ ಧನ್ಯವಾದ ತಿಳಿಸಿದ ವ್ಯಕ್ತಿ
ಮೊಬೈಲ್‌ ನೋಡುತ್ತಾ ಕುಳಿತು ಮೈ ಮರೆತ್ರೆ ಏನಾಗುತ್ತೆ ಅನ್ನೋದನ್ನು ನೋಡಿ

ಏನಿದು ಹೈಡ್ರೋಜನ್ ಚಾಲಿತ ರೈಲು?

ಹೈಡ್ರೋಜನ್ ಚಾಲಿತ  ರೈಲುಗಳು ಡೀಸೆಲ್ ಮತ್ತು ವಿದ್ಯುತ್ ರೈಲುಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿವೆ. ಅವು ಹೊಗೆಯನ್ನು ಅಥವಾ ಇಂಗಾಲದ ಡೈಆಕ್ಸೈಡ್‌ನಂತಹ ಮಾಲಿನ್ಯಕಾರಕ ಅನಿಲಗಳನ್ನು ಹೊರಸೂಸುವುದಿಲ್ಲ. ಈ ರೈಲು ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ, ಇದರಲ್ಲಿ ಹೈಡ್ರೋಜನ್ ಅನಿಲ ಮತ್ತು ಆಮ್ಲಜನಕದ ಪ್ರತಿಕ್ರಿಯೆಯಿಂದ ಶಕ್ತಿಯು ಉತ್ಪತ್ತಿಯಾಗುತ್ತದೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಮೊದಲ ಹೈಡ್ರೋಜನ್ ರೈಲು ಎಲ್ಲಿ ಚಲಿಸಲಿದೆ?‌

ಇದು ಜಿಂದ್-ಸೋನಿಪತ್‌ ನಡುವೆ ಸುಮಾರು 90 ಕಿ.ಮೀ ದೂರ ಓಡಾಡಲಿದೆ.ಇದರ ಒಟ್ಟು ವೆಚ್ಚ ₹ 111.83 ಕೋಟಿ ಎಂದು ಹೇಳಲಾಗುತ್ತದೆ. ಈ ತಂತ್ರಜ್ಞಾನವು ಇಂಧನ ಬಳಕೆಯಲ್ಲಿ ಬದಲಾವಣೆಯನ್ನು ತರುವುದಲ್ಲದೆ, ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿಯನ್ನು ಬಲಪಡಿಸುತ್ತದೆ. ಆರಂಭಿಕ ಹಂತದಲ್ಲಿ ಹೈಡ್ರೋಜನ್ ರೈಲುಗಳ ಚಾಲನಾ ವೆಚ್ಚ ಹೆಚ್ಚಾದರೂ, ರೈಲುಗಳ ಸಂಖ್ಯೆ ಹೆಚ್ಚಾದಂತೆ ವೆಚ್ಚ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಮೊಬೈಲ್‌ ನೋಡುತ್ತಾ ಕುಳಿತು ಮೈ ಮರೆತ್ರೆ ಏನಾಗುತ್ತೆ ಅನ್ನೋದನ್ನು ನೋಡಿ ಒಮ್ಮೆ

ಎಷ್ಟು ದೇಶಗಳಲ್ಲಿ ಈ ರೈಲುಗಳಿವೆ?

ಪ್ರಸ್ತುತ ಜರ್ಮನಿ, ಫ್ರಾನ್ಸ್‌, ಸ್ವೀಡನ್‌ ಮತ್ತು ಚೈನಾದಂತಹ ದೇಶಗಳಲ್ಲಿ ಹೈಡ್ರೋಜನ್‌ ಚಾಲಿತ ರೈಲುಗಳು ಓಡಾಡುತ್ತಿವೆ. ಈ ರೈಲುಗಳ ವಿಶೇಷತೆಯೇನೆಂದರೆ ಇವುಗಳು ಯಾವುದೇ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ ಮತ್ತು ಯಾವುದೇ ವಿಷಕಾರಿ ಅನಿಲವನ್ನು ಹೊರಸೂಸುವುದಿಲ್ಲ. ಇದು ಸಂಪೂರ್ಣವಾಗಿ ಪರಿಸರಸ್ನೇಹಿಯಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ