ಈ ಪ್ರಪಂಚದಲ್ಲಿ ಹಲವಾರು ಬ್ರಾಂಡ್‌ಗಳ ಮದ್ಯಗಳಿವೆ. ಅದರಲ್ಲಿ ಇಸಾಬೆಲ್ಲಾ ಇಸ್ಲೇ ಒರಿಜಿನಲ್ ವಿಸ್ಕಿ ವಿಶ್ವದ ಅತ್ಯಂತ ದುಬಾರಿ ವಿಸ್ಕಿ ಅನ್ನೋ ವಿಚಾರ ಬಹುತೇಕ ಎಲ್ಲರಿಗೂ ಗೊತ್ತಿದೆ. ಇದರ ಬೆಲೆ ಬರೋಬ್ಬರಿ ಆರು ಮಿಲಿಯನ್ ಡಾಲರ್‌ಗಳಿಗಿಂತಲೂ ಹೆಚ್ಚು. ಅಂದ್ರೆ ಸುಮಾರು 22.7 ಕೋಟಿ ರೂ. ಆದ್ರೆ ಭಾರತದಲ್ಲಿನ ದುಬಾರಿ ವಿಸ್ಕಿ ಯಾವುದು ಎಂಬ ಬಗ್ಗೆ ತಿಳಿದಿದೆಯಾ. ನಮ್ಮ ದೇಶದಲ್ಲಿಯೇ ತಯಾರಾಗುವ ಈ ಒಂದು ದೇಸಿ ವಿಸ್ಕಿ ನಮ್ಮ ಭಾರತದ ದುಬಾರಿ ವಿಸ್ಕಿಯಂತೆ. ಅದು ಯಾವ ಬ್ರಾಂಡ್, ಅದರ ಬೆಲೆ ಎಷ್ಟು ಈ ಎಲ್ಲದರ ಮಾಹಿತಿ ಇಲ್ಲಿದೆ.
ವಿದೇಶದಲ್ಲಿನ ಹಲವು ಪ್ರಸಿದ್ಧ ಕಂಪೆನಿಗಳು ತಮ್ಮ ದುಬಾರಿ ಆಲ್ಕೋಹಾಲ್ ವೋಡ್ಕಾ, ವಿಸ್ಕಿ, ವೈನ್, ರಮ್‌ಗಳನ್ನು ಭಾರತದಲ್ಲಿಯೂ ಮಾರಾಟ ಮಾಡುತ್ತದೆ. ಆದ್ರೆ ಭಾರತದಲ್ಲಿಯೇ ತಯಾರಾಗುವ ದುಬಾರಿ ವಿಸ್ಕಿ ಯಾವುದು ಗೊತ್ತಾ? ಅದುವೇ “ರಾಂಪುರ ಸಿಗ್ನೇಚರ್ ರಿಸರ್ವ್ ಸಿಂಗಲ್ ಮಾಲ್ಟ್ ವಿಸ್ಕಿ” ಇದು ನಮ್ಮ ದೇಶದ ಅತ್ಯಂತ ದುಬಾರಿ ವಿಸ್ಕಿಯಾಗಿದೆ. ರಾಡಿಕೋ ಖೈತಾನ್ ಲಿಮಿಟೆಡ್ ಈ ದುಬಾರಿ ಮದ್ಯದ ತಯಾರಕ ಕಂಪೆನಿಯಾಗಿದೆ. ಈ ವಿಶೇಷ ಆವೃತ್ತಿಯ ಪ್ರೀಮಿಯಂ ವಿಸ್ಕಿಯನ್ನು ರಾಂಪುರ್ ಡಿಸ್ಟಿಲರಿಯ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಪರಿಚಯಿಸಲಾಯಿತು. ವಿಶೇಷವೆಂದರೆ ಈವರೆಗೆ 400 ಬಾಟಲ್ ವಿಸ್ಕಿಯನ್ನು ಮಾತ್ರ ಉತ್ಪಾದಿಸಲಾಗಿದ್ದು, ಅದರಲ್ಲಿ ಈಗ ಕೇವಲ 2 ಮಾತ್ರ ಉಳಿದಿದೆ.
ಇದನ್ನೂ ಓದಿ: ಹದ್ದಿನ ಕಣ್ಣು ನಿಮ್ಮದಾಗಿದ್ದರಷ್ಟೇ 8ರ ಮಧ್ಯೆ ಅಡಗಿರುವ 3ರನ್ನು ಪತ್ತೆ ಹಚ್ಚಲು ಸಾಧ್ಯ
ರಾಂಪುರ ಸಿಗ್ನೇಚರ್ ರಿಸರ್ವ್ ಸಿಂಗಲ್ ಮಾಲ್ಟ್ ವಿಸ್ಕಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಬಾಟಲಿಗೆ 5 ಲಕ್ಷ ರೂ. ಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಕೈಗೆಟಕುವ ದರದಲ್ಲಿಯೂ ಈ ಕಂಪೆನಿಯ ವಿವಿಧ ಆವೃತ್ತಿಯ ವಿಸ್ಕಿಗಳಿವೆ. ರಾಂಪುರ ಸೆಲೆಕ್ಟ್ ವಿಸ್ಕಿಯನ್ನು 14 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ. ಈ ವಿಸ್ಕಿ ಸ್ಯಾನ್ ಫ್ರಾನ್ಸಿಸ್ಕೋ ವರ್ಲ್ಡ್ ವೈನ್ ಮತ್ತು ಸ್ಪಿರಿಟ್ಸ್ ಪ್ರಶಸ್ತಿ ಗೆದ್ದಿದೆ. ಪಿ.ಎಕ್ಸ್ ಶೆರ್ರಿ ವಿಸ್ಕಿಯ ಬೆಲೆ ಪ್ರತಿ ಬಾಟಲಿಗೆ 12 ಸಾವಿರ. ರಾಂಪುರ ಜುಗಲ್ ಬಂದಿ ವಿಸ್ಕಿಯ ಬೆಲೆ 40 ಸಾವಿರ ರೂ.
1943 ರಲ್ಲಿ ಶುರುವಾದ ಈ ಮದ್ಯ ಕಂಪೆನಿ ಪ್ರಸ್ತುತ 102 ಕ್ಕೂ ದೇಶಗಳಿಗೆ ತನ್ನ ಬ್ರಾಂಡ್‌ನ ವಿವಿಧ ಆವೃತ್ತಿಯ ಮದ್ಯಗಳನ್ನು ರಫ್ತು ಮಾಡುತ್ತಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Wed, 25 September 24