ಸೂಪರ್‌ ಮಾರ್ಕೆಟ್‌ನಲ್ಲಿ ಬುರ್ಖಾಧಾರಿ ಮಹಿಳೆಯ ಕರಾಮತ್ತು, ಹಾಲು ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಕಳ್ಳರು ಕಳ್ಳತನ ಮಾಡಲು ಹೂಡುವ ಕೆಲವು ಪ್ಲಾನ್‌ಗಳ ಬಗ್ಗೆ ಕೇಳಿದ್ರೆ ಹಿಂಗೂ ತಲೆ ಓಡಿಸ್ಬೋದಾ ಎಂದು ನಮಗೆ ಶಾಕ್‌ ಆಗುತ್ತದೆ. ಇದೀಗ ಇಲ್ಲೊಂದು ಅಂತಹದ್ದೇ ಹೈಟೆಕ್‌ ಕಳ್ಳತನದ ವಿಡಿಯೋವೊಂದು ವೈರಲ್‌ ಆಗಿದ್ದು, ಕನ್ವೀನಿಯನ್ಸ್‌ ಸ್ಟೋರ್‌ ಒಂದಕ್ಕೆ ನುಗ್ಗಿದ್ದಂತಹ ಬುರ್ಖಾಧಾರಿ ಮಹಿಳೆಯೊಬ್ಬಳು ಅಲ್ಲಿದ್ದ ಹಾಲಿನ ಪ್ಯಾಕೆಟ್‌ ಅನ್ನು ಬುರ್ಖಾದೊಳಗೆ ಬಚ್ಚಿಟ್ಟು ಎಸ್ಕೇಪ್‌ ಆಗಿದ್ದಾಳೆ. ಈ ದೃಶ್ಯ ಅಂಗಡಿಯಲ್ಲಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 15, 2024 | 3:20 PM

ತಾನು ಕಣ್ಣು ಮುಚ್ಚಿ ಹಾಲು ಕುಡಿದರೆ ಈ ಯಾರಿಗೂ ಇದು ಗೊತ್ತಾಗಲ್ಲ ಎಂದು ಬೆಕ್ಕು ಅಂದುಕೊಳ್ಳುವಂತೆ ಖತರ್ನಾಕ್‌ ಕಳ್ಳರು ಕೂಡಾ ತಾವು ಏನೇ ಕದ್ದರು ಯಾರಿಗೂ ಒಂದು ಪ್ರೂಫ್‌ ಕೂಡಾ ಸಿಕ್ಕಲ್ಲ ಎಂದು ಭಾವಿಸುತ್ತಾರೆ. ಇದೇ ಭ್ರಮೆಯಲ್ಲಿ ಇಲ್ಲೊಬ್ಬಳು ಬುರ್ಖಾದಾರಿ ಮಹಿಳೆ ತಾನು ಏನೇ ಕದ್ದರೂ ಯಾರಿಗೂ ಗೊತ್ತಾಗಲ್ಲ ಎನ್ನುತ್ತಾ ಸೂಪರ್‌ ಮಾರ್ಕೆಟ್‌ನಲ್ಲಿದ್ದ ಹಾಲಿನ ಪ್ಯಾಕೆಟ್‌ ಒಂದನ್ನು ಬುರ್ಖಾದೊಳಗೆ ಬಚ್ಚಿಟ್ಟು ಎಸ್ಕೇಪ್‌ ಆಗಿದ್ದಾಳೆ. ಈಕೆಯ ಈ ಕರಾಮತ್ತು ಅಂಗಡಿಯಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದ್ದು, ಕನ್ವೀನಿಯನ್ಸ್‌ ಸ್ಟೋರ್‌ಗೆ ಬಂದಂತಹ ಬುರ್ಖಾಧಾರಿ ಮಹಿಳೆಯೊಬ್ಬಳು ಯಾರಿಗೂ ಗೊತ್ತಾಗದಂತೆ ತನ್ನ ಬುರ್ಖಾದೊಳಗೆ ಹಾಲಿನ ಪ್ಯಾಕೇಟ್‌ ಅನ್ನು ಬಚ್ಚಿಟ್ಟು ಎಸ್ಕೇಪ್‌ ಆಗಿದ್ದಾಳೆ. ಈ ಕುರಿತ ವಿಡಿಯೋವನ್ನು ಅಂಕುರ್‌ ಆರ್ಯ (AcAnkurArya) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಬುರ್ಖಾಧಾರಿ ಮಹಿಳೆಯ ಕರಾಮತ್ತನ್ನು ಕಾಣಬಹುದು. ಬುರ್ಖಾ ಹಾಗೂ ಮುಖಕ್ಕೆ ಮಾಸ್ಕ್‌ ಹಾಕಿ ಸೂಪರ್‌ ಮಾರ್ಕೆಟ್‌ಗೆ ನುಗ್ಗಿದಂತಹ ಮಹಿಳೆಯೊಬ್ಬಳು ಯಾರು ಇಲ್ಲದ್ದನ್ನು ಗಮನಿಸಿ ಅಲ್ಲೇ ಮೆಲ್ಲಗೆ ಕೂತು ಎರಡು ಫಾರ್ಮುಲ ಮಿಲ್ಕ್‌ ಪ್ಯಾಕೆಟ್‌ ಅನ್ನು ತನ್ನ ಬುರ್ಖಾದೊಳಗೆ ಬಚ್ಚಿಟ್ಟು ಏನೂ ನಡೆದೇ ಇಲ್ಲ ಎನ್ನುವಂತೆ ನಾಟಕವಾಡುತ್ತಾ ಅಲ್ಲಿಂದ ಎಸ್ಕೇಪ್‌ ಆಗಿದ್ದಾಳೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಏನ್‌ ಧೈರ್ಯ ನೋಡಿ… ಹೆಗಲ ಮೇಲೆ ದೈತ್ಯ ಅನಕೊಂಡವನ್ನು ಹೊತ್ತ ಎಂಟೆದೆ ಭಂಟ

ನವೆಂಬರ್‌ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 33 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಎಂತಹ ಖತರ್ನಾಕ್‌ ಮಹಿಳೆ ಇವಳುʼ ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಲ್ಲ ಅದು ಹೇಗೆ ಪೊಟ್ಟಣವನ್ನು ಬುರ್ಖಾದೊಳಗೆ ಬುಚ್ಚಿಟ್ಟು ಸಲೀಸಾಗಿ ನಡೆಯಲು ಸಾಧ್ಯʼ ಎಂದು ಕೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ