AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೇಕು ಬೇಕಂತಲೇ ವಿದೇಶಿ ಪ್ರವಾಸಿಗನ ಮೈ ಮೇಲೆ ಬಿದ್ದು ರೀಲ್ಸ್‌ ಮಾಡಿದ ಯುವತಿ; ವಿಡಿಯೋ ವೈರಲ್‌

ರೀಲ್ಸ್‌ ಮಾಡುವವರ ಹುಚ್ಚಾಟ ಒಂದರೆರಡಲ್ಲ. ಇವರುಗಳ ಅಧಿಕಪ್ರಸಂಗತನದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಯುವತಿಯೊಬ್ಬಳು ಬೇಕು ಬೇಕಂತಲೇ ವಿದೇಶಿ ಪ್ರವಾಸಿಗನ ಮೈಮೇಲೆ ಬಿದ್ದು ರೀಲ್ಸ್‌ ಮಾಡಿದ್ದಾಳೆ. ಈಕೆಯ ಈ ಹುಚ್ಚಾಟಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಮಾಲಾಶ್ರೀ ಅಂಚನ್​
| Edited By: |

Updated on: Nov 15, 2024 | 4:40 PM

Share

ಈಗೀಗ ಈ ಸೋಷಿಯಲ್‌ ಮೀಡಿಯಾ ಹುಚ್ಚರ ಸಂತೆಯಾಗಿ ಪರಿವರ್ತನೆಗೊಳ್ಳುತ್ತಿವೆ. ಅದರಲ್ಲೂ ಈ ರೀಲ್ಸ್‌ ಮಾಡುವವರು ಸಭ್ಯತೆ, ಸಂಸ್ಕೃತಿ ಎಲ್ಲವನ್ನು ಮರೆತು ಅಸಭ್ಯ ರೀತಿಯಲ್ಲಿ ವಿಡಿಯೋಗಳನ್ನು ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಇನ್ನೂ ಕೆಲವರಂತೂ ಸಾರ್ವಜನಿಕರಿಗೆ ತೊಂದರೆ ಕೊಡುತ್ತಾ ಯಾವುದಕ್ಕೂ ಡೋಂಟ್‌ ಕೇರ್‌ ಎನ್ನದೆ ರೀಲ್ಸ್‌ ಮಾಡುತ್ತಿರುತ್ತಾರೆ. ರೀಲ್ಸ್‌ವಾಲಗಳ ಇಂತಹ ಮಿತಿಮೀರಿದ ಹುಚ್ಚಾಟಗಳು ನೆಟ್ಟಿಗರ ಕೆಂಗಣ್ಣಿಗೆ ಆಗಾಗ್ಗೆ ಗುರಿಯಾಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಪ್ರವಾಸಿ ತಾಣಕ್ಕೆ ಭೇಟಿ ಕೊಟ್ಟ ಯುವತಿಯೊಬ್ಬಳು ಬೇಕು ಬೇಕಂತಲೇ ವಿದೇಶಿ ಪ್ರವಾಸಿಗನ ಮೈ ಮೇಲೆ ಬಿದ್ದು ಆತನಿಗೆ ತೊಂದರೆ ಕೊಟ್ಟು ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾಳೆ. ಈಕೆಯ ಈ ಹುಚ್ಚಾಟಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಘಟನೆ ಜೈಪುರದ ಆಲ್ಬರ್ಟ್‌ ಹಾಲ್‌ ಮ್ಯೂಸಿಯಂ ಮುಂದುಗಡೆ ನಡೆದಿದ್ದು ಎನ್ನಲಾಗುತ್ತಿದೆ. ಇಲ್ಲಿ ಯುವತಿಯೊಬ್ಬಳು ವಿದೇಶಿ ಪ್ರವಾಸಿಗನ ಮೈ ಮೇಲೆ ಬಿದ್ದು ರೀಲ್ಸ್‌ ಮಾಡಿದ್ದಾಳೆ. ಈ ವಿಡಿಯೋವನ್ನು venom1s ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ʼವಿದೇಶಿ ಪ್ರವಾಸಿಗನಿಗೆ ಕಿರುಕುಳ ಕೊಟ್ಟ ಈಕೆಗೆ ಯಾವುದೇ ಶಿಕ್ಷೆ ನೀಡಿಲ್ಲ, ಅದುವೇ ಒಬ್ಬ ಪುರುಷ ಯುವತಿಯ ಮೈ ಮೇಲೆ ಬಿದ್ದಿದ್ರೇ ಕಥೆ ಏನಾಗುತ್ತಿತ್ತು?” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ವಿದೇಶಿ ಪ್ರವಾಸಿಗನ ಹಿಂದೆ ಹೋಗುತ್ತಾ ಬೇಕು ಬೇಕಂತಲೇ ಆತನ ಮೈ ಮೇಲೆ ಬಿದ್ದು ರೀಲ್ಸ್‌ ಮಾಡುವ ಮೂಲಕ ಆತನಿಗೆ ಕಿರುಕುಳ ನೀಡಿದಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಸೂಪರ್‌ ಮಾರ್ಕೆಟ್‌ನಲ್ಲಿ ಬುರ್ಖಾಧಾರಿ ಮಹಿಳೆಯ ಕರಾಮತ್ತು, ಹಾಲು ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ನವೆಂಬರ್‌ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 82 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೆಂತಾ ಅನುಚಿತ ವರ್ತನೆ ಈಕೆಯದ್ದುʼ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೊದಲು ಇಂತಹ ಲಜ್ಜೆಗೆಟ್ಟವರನ್ನು ಬಂಧಿಸಬೇಕುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ