ಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನ ಪಾಲಿಗೆ ದೇವರಾಗಿ ಬಂದ ಹೋಮ್’ಗಾರ್ಡ್’
ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನನ್ನು ಹೋಮ್ಗಾರ್ಡ್ ರಕ್ಷಿಸಿದ್ದಾರೆ. ರೈಲು ಚಲಿಸುತ್ತಿರುವಾಗ ಪ್ರಯಾಣಿಕ ಓಡೋಡಿ ಬಂದು ಹತ್ತುವಾಗ ಕಾಲು ಜಾರಿ ಬಿದ್ದಿದ್ದಾನೆ.
ದಾವಣಗೆರೆ, (ನವೆಂಬರ್ 15): ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿಆಯತಪ್ಪಿ ರೈಲಿಗೆ ಬೀಳ್ತಿದ್ದ ಪ್ರಯಾಣಿಕನನ್ನು ಹೋಮ್ಗಾರ್ಡ್ ರಕ್ಷಿಸಿದ್ದಾರೆ. ರಾಧಾಕೃಷ್ಣ ಎನ್ನುವರು ರನ್ನಿಂಗ್ನಲ್ಲಿದ್ದ ಜನಶತಾಬ್ದಿ ಎಕ್ಸ್ಪ್ರೆಸ್ ರೈಲು ಹತ್ತುವಾಗ ಅಯತಪ್ಪಿ ಬಿದ್ದಿದ್ದಾರೆ. ಕೂಡಲೇ ಹೋಮ್ಗಾರ್ಡ್ ಲಕ್ಷ್ಮಣ್ ಅವರು ಮೇಲೆ ಎಳೆದುಕೊಂಡಿದ್ದಾರೆ. ನಿಧಾನವಾಗಿ ಹೋಗುತ್ತಿದ್ದ ವೇಳೆ ರಾಧಾಕೃಷ್ಣ ಅವರು ಓಡೋಡಿ ಬಂದು ರೈಲು ಹತ್ತಲು ಪ್ರಯತ್ನಿಸಿದ್ದಾರೆ. ಆದ್ರೆ, ಕಾಲು ಜಾರಿ ಬಿದ್ದಿದ್ದಾರೆ. ಅಲ್ಲೇ ಇದ್ದ ಹೋಮ್ಗಾರ್ಡ್ ಲಕ್ಷ್ಮಣ್ ಅವರು ತಕ್ಷಣವೇ ರಾಧಾಕೃಷ್ಣ ಅವರನ್ನು ಮೇಲಕ್ಕೆ ಎಳೆದುಕೊಂಡು ರಕ್ಷಣೆ ಮಾಡಿದ್ದಾರೆ. ಪ್ರಯಾಣಿಕನನ್ನು ಹೋಮ್ಗಾರ್ಡ್ ರಕ್ಷಣೆ ಮಾಡಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೋಮ್ಗಾರ್ಡ್ ಲಕ್ಷ್ಮಣ್ ನಾಯ್ಕ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
Published on: Nov 15, 2024 05:43 PM
Latest Videos