Uttar Pradesh : ಈತನಕವೂ ನಮ್ಮ ದೇಶದ ಅದೆಷ್ಟೋ ಲಕ್ಷಾಂತರ ಜನರು ಮನೆಯೊಳಗೆ ಕತ್ತಲನ್ನೇ ಉಸಿರಾಡುತ್ತಿದ್ದಾರೆ. ಆದರೂ ಕಣ್ಣುಮುಚ್ಚುವುದರೊಳಗೆ ಒಮ್ಮೆಯಾದರೂ ವಿದ್ಯುತ್ (Electricity) ನಮ್ಮ ಮನೆ ಬೆಳಗೀತೇ ಎಂದು ಬುಡ್ಡಿದೀಪವನ್ನಿಟ್ಟುಕೊಂಡು ಕನಸು ಕಾಣುತ್ತ ಜೀವಿಸುತ್ತಿದ್ದಾರೆ. ಹೀಗಿರುವಾಗ ಝಗ್ಗನೆ ಮನೆಯೊಳಗೆ ವಿದ್ಯುದ್ದೀಪ ಬೆಳಗಿದರೆ? ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ವಯೋವೃದ್ಧೆಯೊಬ್ಬರು ಇದೀಗ ತಮ್ಮ ಮನೆಯಲ್ಲಿ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣೀಕರ್ತರಾದವರು ಐಪಿಎಸ್ ಅಧಿಕಾರಿ ಅನುಕೃತಿ ಶರ್ಮಾ (Anukriti Sharma). ಕೆಳಗಿನ ಈ ವಿಡಿಯೋದಲ್ಲಿ ಈ ವಿದ್ಯುದ್ಸಂಭ್ರಮ ನೋಡಿ.
Swades moment of my life ?? Getting electricity connection to Noorjahan aunty’s house literally felt lyk bringing light into her life. The smile on her face ws immensely satisfying.Thank u SHO Jitendra ji & the entire team 4 all da support ?#uppcares @Uppolice @bulandshahrpol pic.twitter.com/3crLAeh1xv
ಇದನ್ನೂ ಓದಿ— Anukriti Sharma, IPS ?? (@ipsanukriti14) June 26, 2023
ಬುಲಂದ್ಶಹರದಲ್ಲಿ (Bulandshahar) ವಾಸಿಸುತ್ತಿರುವ ನೂರ್ಜಹಾನ್ ಎನ್ನುವ ವೃದ್ಧೆಯ ಮನೆಯಲ್ಲಿ ದಶಕಗಳಿಮದ ವಿದ್ಯುತ್ ಸಂಪರ್ಕವಿಲ್ಲದೇ ಬದುಕುತ್ತಿದ್ದರು. ಐಪಿಎಸ್ ಅಧಿಕಾರಿ ಅನುಕೃತಿ ಶರ್ಮಾ ಅವರಿಗೆ ಈಕೆಯ ಪರಿಸ್ಥಿತಿಯ ಬಗ್ಗೆ ತಿಳಿಯಿತು. ಆಗ ಈ ಕೆಲಸವನ್ನು ಯಾರಿಗೂ ವಹಿಸದೇ ತಾವೇ ಸ್ವತಃ ನೂರ್ಜಹಾನ್ ಅವರ ಮನೆಗೆ ಧಾವಿಸಿದರು. ನಂತರ ಅವರ ತಂಡದ ಸದಸ್ಯರು ವಿದ್ಯುತ್ ಮೀಟರ್ ಅಳವಡಿಸಿ ಮನೆತುಂಬಾ ಬಲ್ಬಿನ ಬೆಳಕನ್ನೂಡಿಸಿದರು. ಇಷ್ಟೇ ಅಲ್ಲ, ಸೆಖೆಗಾಲಕ್ಕಾಗಿ ಒಂದು ಪಂಖಾ ಅನ್ನೂ ಉಡುಗೊರೆಯಾಗಿ ನೀಡಿದರು.
ಇದನ್ನೂ ಓದಿ : Viral Video: ‘ನನಗ ಬರ್ಯಾಕ ಬರಲ್ಲಲೇಪಾ, ನಮ್ ಅಜ್ಜನ್ ಕೂಡೇ ಎಬಿಸಿಡಿ ಬರ್ಸೆಕೆಂಬರ್ತೇನಿ’
ನೂರ್ಜಹಾನ್ ಅನುಕೃತಿ ಶರ್ಮಾ ಅವರಿಗೆ ಸಿಹಿ ತಿನ್ನಿಸಿ ಸಂತೋಷ ಹಂಚಿಕೊಂಡರು. ಅಲ್ಲಿದ್ದವರೆಲ್ಲ ಅಜ್ಜಿಯ ಖುಷಿಯನ್ನು ಅನುಭವಿಸುತ್ತ ತಮ್ಮ ಬಾಯಿಯನ್ನೂ ಸಿಹಿ ಮಾಡಿಕೊಂಡರು. ಇದು ನನ್ನ ಜೀವನದ ಅತ್ಯುದ್ಭುತ ಕ್ಷಣ ಎಂದು ನೂರ್ಜಹಾನ್ ಹೇಳುವಾಗ ಆಕೆಯ ಮುಖದಲ್ಲಿ ತೃಪ್ತಭಾವವಿತ್ತು. ಮೇಲಿನ ಈ ಟ್ವೀಟ್ ಅನ್ನು ಅನುಕೃತಿ ತಮ್ಮ ಟ್ವಿಟರ್ ಖಾತೆಯಲ್ಲಿ ಜೂ. 26ರಂದು ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು ಈತನಕ ಸುಮಾರು 9 ಲಕ್ಷ ಜನರು ನೋಡಿದ್ದಾರೆ. ಸಾವಿರಾರು ಜನರು ಅನುಕೃತಿಯವರಿಗೆ ಅಭಿನಂದನೆ ಕೋರಿದ್ದಾರೆ. ನಮಗೆ ನಿಮ್ಮಂಥ ಅಧಿಕಾರಿಗಳು ಬೇಕು. ಬಡಜನರಿಗೆ ಸಹಾಯ ಮಾಡುವಂಥ ಮನಸ್ಸುಗಳು ಆಡಳಿತಲ್ಲಿರಬೇಕು ಎಂದಿದ್ದಾರೆ.
ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:15 pm, Tue, 27 June 23