ಭಾರತೀಯ 5 ಜೆಟ್​​​​​ಗಳನ್ನು ಹೊಡೆದುರುಳಿಸಿರುವುದು ನಿಜವೇ? ನಿರೂಪಕಿ ಕೇಳಿದ ಪ್ರಶ್ನೆಗೆ ತಬ್ಬಿಬಾದ ಪಾಕ್ ರಕ್ಷಣಾ ಸಚಿವ

ಪೆಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಸೇನೆ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ವಾಯುದಾಳಿ ನಡೆಸಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಆದರೆ ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಐದು ಜೆಟ್ ಗಳನ್ನು ಉರುಳಿಸಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿರುವ ಬೆನ್ನಲ್ಲೇ ಸಿಎನ್ ಎನ್ ಸುದ್ದಿವಾಹಿನಿಯ ನಿರೂಪಕಿ ಪಾಕ್ ರಕ್ಷಣಾ ಸಚಿವರಿಗೆ ಈ ಸುದ್ದಿ ನಿಜವೇ ಎಂದು ಕೇಳಿದ್ದು ಉತ್ತರಿಸಲಾರದೇ ತಬ್ಬಿಬಾಗಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಭಾರತೀಯ 5 ಜೆಟ್​​​​​ಗಳನ್ನು ಹೊಡೆದುರುಳಿಸಿರುವುದು ನಿಜವೇ? ನಿರೂಪಕಿ ಕೇಳಿದ ಪ್ರಶ್ನೆಗೆ ತಬ್ಬಿಬಾದ ಪಾಕ್ ರಕ್ಷಣಾ ಸಚಿವ
ವೈರಲ್ ವಿಡಿಯೋ
Image Credit source: Twitter

Updated on: May 08, 2025 | 12:49 PM

ಜಮ್ಮು ಕಾಶ್ಮೀರ (jammu kashmir) ದ ಪೆಹಲ್ಗಾಮ್ ನಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದಿದ್ದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆಯ ನಡೆದ ಹದಿಮೂರನೇ ದಿನಕ್ಕೆ ಭಾರತವು ಪಾಕಿಸ್ತಾನಕ್ಕೆ ಸರಿಯಾಗಿ ಉತ್ತರ ನೀಡುವ ಮೂಲಕ ಬಿಸಿ ಮುಟ್ಟಿಸಿದೆ. ಆಪರೇಷನ್ ಸಿಂಧೂರ್ (operation sindoor) ಹೆಸರಿನಲ್ಲಿ ಪಾಕಿಸ್ತಾನದ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಸಿದ್ದು, ಈ ದಾಳಿಗೆ ಇಡೀ ಪಾಕಿಸ್ತಾನವೇ ಬೆಚ್ಚಿ ಬಿದ್ದಿದೆ. ಭಾರತದ ತಡರಾತ್ರಿಯ ದಾಳಿಗೆ ಪ್ರತೀಕಾರವಾಗಿ 5 ಭಾರತೀಯ ಜೆಟ್‌ಗಳನ್ನು ಉರುಳಿಸಿದೆ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹಿನ್ನಲೆಯಲ್ಲಿ ಸಿಎನ್ ಎನ್ ಸುದ್ದಿವಾಹಿನಿ (CNN news chanel ancor) ನಿರೂಪಕಿ, ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್‌ (pakistan defense minister khawaja asif) ಅವರಿಗೆ ಈ ಸುದ್ದಿ ನಿಜವೇ, ಜೆಟ್ ಗಳನ್ನು ಹೊಡೆದುರುಳಿಸಲು ಯಾವುದೇ ಚೀನಿ ಉಪಕರಣಗಳನ್ನು ಬಳಸಿದ್ದೀರಾ ಹೀಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಪಾಕ್ ರಕ್ಷಣಾ ಸಚಿವರು ತಡವರಿಸಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಈ ವಿಡಿಯೋವನ್ನು amit schanddillia ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಸಿಎನ್ ಎನ್ ಸುದ್ದಿವಾಹಿನಿಯ ನಿರೂಪಕಿಯೊಬ್ಬರು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್‌ ಭಾರತದ ತಡರಾತ್ರಿಯ ದಾಳಿಗೆ ಪ್ರತೀಕಾರವಾಗಿ 5 ಭಾರತೀಯ ಜೆಟ್‌ಗಳನ್ನು ಉರುಳಿಸಿದೆ ಎನ್ನುವ ಸುದ್ದಿಗೆ ಸಂಬಂಧ ಪಟ್ಟಂತೆ ಸ್ಪಷ್ಟನೆ ಕೇಳಿದ್ದಾರೆ. ಸುದ್ದಿ ನಿರೂಪಕಿಯೂ, ಐದು ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಲಾಗಿದೆ ಎಂಬುದಕ್ಕೆ ಪುರಾವೆ ಎಲ್ಲಿದೆ? ಎಂದು ಪ್ರಶ್ನಿಸಿದ್ದು, ಪಾಕ್ ರಕ್ಷಣಾ ಸಚಿವರು, ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆ ಹರಡಿದೆ ಎಂದಿದ್ದಾರೆ.

ಇದನ್ನೂ ಓದಿ
ಭಾರತದಲ್ಲಿ ಇರುವ ಏಕೈಕ ಪುರುಷ ನದಿ ಯಾವುದು ಗೊತ್ತಾ?
ಭಾರತದಲ್ಲಿ ಆರಾಮ ಜೀವನ ನಡೆಸೋದೆ ಕಷ್ಟ ಎಂದ ಬೆಂಗಳೂರಿನ ಮಹಿಳೆ
ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ದಿಟ್ಟ ಉತ್ತರ: #Itoldmodi ವೈರಲ್‌!
ಪಾಕ್ ಪರಿಸ್ಥಿತಿ ನೆನೆದು ಲೈವ್ ನಲ್ಲೇ ಅತ್ತ ಪಾಕಿಸ್ತಾನಿ ಸುದ್ದಿನಿರೂಪಕಿ

ಆ ಬಳಿಕ ಸುದ್ದಿನಿರೂಪಕಿ, ನೀವು ರಕ್ಷಣಾ ಸಚಿವರು. ನಾನು ನಿರ್ದಿಷ್ಟವಾಗಿ ನಿಮ್ಮಿಂದ ಪುರಾವೆ ಕೇಳುತ್ತಿದ್ದೇನೆ, ಸಾಮಾಜಿಕ ಮಾಧ್ಯಮದ ಬಗ್ಗೆ ಅಲ್ಲ ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಉತ್ತರಿಸಲು ತಡವರಿಸಿದ ರಕ್ಷಣಾ ಸಚಿವರು, ಸಾಮಾಜಿಕ ಮಾಧ್ಯಮದಲ್ಲಿದೆ ಎಂದು ಒಪ್ಪಿಕೊಂಡಿದ್ದಾರೆ. ಹಾಗಾದ್ರೆ ನೀವು ಆ ಜೆಟ್‌ಗಳನ್ನು ಹೊಡೆದುರುಳಿಸಲು ಯಾವುದೇ ಚೀನೀ ಉಪಕರಣಗಳನ್ನು ಬಳಸಿದ್ದೀರಾ? ಸುದ್ದಿ ನಿರೂಪಕಿ.ಹೀಗೆ ಕೇಳುತ್ತಿದ್ದಂತೆ, ಭಾರತವು ಫ್ರಾನ್ಸ್‌ನಿಂದ ವಿಮಾನಗಳನ್ನು ಖರೀದಿಸಬಹುದಾದರೆ, ನಾವು ಚೀನಾದಿಂದ ಏಕೆ ಖರೀದಿಸಬಾರದು? ಎಂದು ಪಾಕ್ ರಕ್ಷಣಾ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ : ಅಕ್ಕನ ಮದುವೆಗೆ ತಮ್ಮನ ದುಬಾರಿ ಉಡುಗೊರೆ ಹೇಗಿದೆ ನೋಡಿ

ಕೊನೆಗೆ ನನ್ನ ಈ ಪ್ರಶ್ನೆಯನ್ನು ಪುನರಾವರ್ತಿಸುತ್ತೇನೆ, ಆ ವಿಮಾನಗಳನ್ನು ಹೊಡೆದುರುಳಿಸಲು ಯಾವುದೇ ಚೀನೀ ಉಪಕರಣಗಳನ್ನು ಬಳಸಲಾಗಿದೆಯೇ ಎಂದು ಕೇಳುತ್ತಿದ್ದಂತೆ, ಇದಕ್ಕೆ ಉತ್ತರ ನೀಡಿರುವ ಪಾಕ್ ರಕ್ಷಣಾ ಸಚಿವರು, ಇದು ನಾಯಿಗಳ ಕಾದಾಟ. ನೀವು ಯಾವ ರೀತಿಯ ಉಪಕರಣಗಳನ್ನು ಉಲ್ಲೇಖಿಸುತ್ತಿದ್ದೀರಿ? ಎಂದು ಮರುಪ್ರಶ್ನೆ ಮಾಡಿರುವುದನ್ನು ನೋಡಬಹುದು. ಕೊನೆಗೆ ನಿರೂಪಕಿ ನಾನು ಅದನ್ನು ನಿಮ್ಮನ್ನು ಕೇಳುತ್ತಿದ್ದೇನೆ ಎಂದು ಹೇಳುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ಈಗಾಗಲೇ ಐದು ಮಿಲಿಯನ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರು ಮಾಡಿದ ಕಾಮೆಂಟ್ ಗಳು ಹೀಗಿವೆ. ಒಬ್ಬ ಬಳಕೆದಾರ, ‘ಪಾಕಿಸ್ತಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಯುದ್ಧ ಮಾಡಲು ಸಾಧ್ಯ’ ಎಂದಿದ್ದಾರೆ. ಇನ್ನೊಬ್ಬರು,’ನನ್ನ ಪ್ರಕಾರ ರಾಖಿ ಸಾವಂತ್ ಇವರಿಗಿಂತ ಚೆನ್ನಾಗಿ ಉತ್ತರ ನೀಡುತ್ತಾರೆ’ ಎಂದು ಕಾಮೆಂಟ್ ನಲ್ಲಿ ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ದೇಹ ಭಾಷೆಯೇ ಎಲ್ಲವೂ ಬಹಿರಂಗ ಪಡಿಸುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ