Viral: ಯಾಕಾದರೂ ಮುಳ್ಳುಹಂದಿ ನುಂಗಿದೇನೋ ಎಂದು ಪಶ್ಚಾತ್ತಾಪ ಪಟ್ಟ ಇಸ್ರೇಲಿ ಹಾವು, ಮುಂದೆ?

|

Updated on: Aug 09, 2023 | 6:01 PM

Porcupine : ಹಸಿವಿನಿಂದ ಕಂಗೆಟ್ಟ ಹಾವೊಂದು ಎದುರಿಗೆ ಸಿಕ್ಕ ಮುಳ್ಳುಹಂದಿಯನ್ನು ಗಬಕ್ಕನೆ ನುಂಗಿದೆ. ಕೊನೆಗೆ ನುಂಗಿದ ಹಂದಿಯನ್ನು ಉಗುಳಿದರೆ ಮಾತ್ರ ತಾನು ಬದುಕುವುದು ಎನ್ನುವುದು ಅದಕ್ಕೆ ಅರಿವಾಗಿದೆ. ಆದರೆ ಹಂದಿಯ ಮುಳ್ಳುಗಳು ಹಾವಿನ ಒಳಶರೀರದಲ್ಲಿ ತೂರಿಕೊಂಡುಬಿಟ್ಟಿವೆ. ಕೊನೆಯಲ್ಲಿ ಎರಡೂ ಪ್ರಾಣಿಗಳು ಜೀವ ಕಳೆದುಕೊಂಡಿವೆ.

Viral: ಯಾಕಾದರೂ ಮುಳ್ಳುಹಂದಿ ನುಂಗಿದೇನೋ ಎಂದು ಪಶ್ಚಾತ್ತಾಪ ಪಟ್ಟ ಇಸ್ರೇಲಿ ಹಾವು, ಮುಂದೆ?
ಮುಳ್ಳುಹಂದಿಯನ್ನು ನುಂಗಿರುವ ಇಸ್ರೇಲಿನ ಚಾವಟಿ ಹಾವು
Follow us on

Israel : ಇಸ್ರೇಲ್​ನ ಶೋಹಮ್‌ನಲ್ಲಿ ಒಬ್ಬರು ತಮ್ಮ ನಾಯಿಯೊಂದಿಗೆ ಡಾಗ್​ ಪಾರ್ಕ್​ಗೆ (Dog Park) ಹೋಗಿದ್ದರು. ಅಲ್ಲಿ ಬೃಹತ್ ಗಾತ್ರದ ಹಾವೊಂದನ್ನು ಕಂಡರು. ಆ ಹಾವು ಮುಳ್ಳುಹಂದಿಯನ್ನು ನುಂಗಿ ಮಿಸುಕಾಡದಂತೆ ಮಲಗಿತ್ತು. ನಂತರ ನೇಚರ್ ಅಂಡ್ ಪಾರ್ಕ್ಸ್ ಅಥಾರಿಟಿಯ ಸರೀಸೃಪ ಪರಿಸರಶಾಸ್ತ್ರಜ್ಞ ಏವಿಯಾಡ್ ಬಾರ್​ಗೆ ಸುದ್ದಿ ಮುಟ್ಟಿಸಿದರು. ನಂತರ ಅವರು ಈ ಉದ್ಯಾನಕ್ಕೆ ಭೇಟಿ ನೀಡಿದರು. ಇದು ವಿಷರಹಿತ ಕಪ್ಪು ಚಾವಟಿ ಹಾವು ಎಂದು ಏವಿಯಾಡ್  ಗುರುತಿಸಿದರು. ಅಲ್ಲದೆ ಈ ಹಾವು ಮುಳ್ಳುಹಂದಿಯನ್ನು ತಿನ್ನಲು ಪ್ರಯತ್ನಿಸಿದೆ ಎಂಬ ವಿಷಯವನ್ನು ತಿಳಿಸಿದರು.

ಇದನ್ನೂ ಓದಿ : Viral Video: ಸಂಗೀತಪ್ರೇಮಿ ಮಂಗಗಳ ಸಂಗದಲ್ಲಿ ಹೀಗೊಬ್ಬ ಪಿಯಾನೋಸಂತ

‘ಹಾವು ಮುಳ್ಳುಹಂದಿಯನ್ನು ತಿನ್ನಲು ಪ್ರಯತ್ನಿಸಿದೆ ನಿಜ. ಆದರೆ ಅದು ಕಷ್ಟವೆನ್ನಿಸಿದಾಗ ಹಾವು ಮುಳ್ಳುಹಂದಿಯನ್ನು ಉಗುಳಲು ಪ್ರಯತ್ನಿಸಿದೆ. ಆದರೆ ಹಂದಿಯ ಮುಳ್ಳುಗಳು ಈ ಉಗುಳುವಿಕೆಗೆ ಆಸ್ಪದ ಕೊಟ್ಟಿಲ್ಲ. ಹಾವಿನ ಒಳಶರೀರದೊಳಗೇ ತಟಸ್ಥವಾಗಿವೆ. ಕೊನೆಗೆ ಹಾವು ಮತ್ತು ಮುಳ್ಳುಹಂದಿ ಉಸಿರುಗಟ್ಟಿ ಪರಸ್ಪರ ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿವೆ ಎಂದು ಊಹಿಸಬಹುದು’ ಎಂದು ಏವಿಯಾಡ್​ ಬಾರ್ ಹೇಳಿದ್ದಾರೆಂದು ಜೆರುಸಲೆಮ್ ಪೋಸ್ಟ್ ಉಲ್ಲೇಖಿಸಿದೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಇದು ಮಸಾಲೆ ಸುದ್ದಿ; ಇಂದೇ ನೋಡಿ ಈ ‘ಏಲಕ್ಕಿ ಮಹಾತ್ಮೆ’

ನೇಚರ್ ಅಂಡ್ ಪಾರ್ಕ್ಸ್ ಅಥಾರಿಟಿ ಪ್ರಕಾರ, ಕಪ್ಪು ಚಾವಟಿ ಹಾವು ಇಸ್ರೇಲ್​ನಲ್ಲಿ ಸಾಮಾನ್ಯವಾಗಿ ಕಂಡುಬರುವ ಹಾವು. ಇದು ಅತೀ ಉದ್ದದ ವಿಷರಹಿತ ಸರೀಸೃಪವೂ ಹೌದು. ಇಲ್ಲಿ ಇಲಿ ಹೆಗ್ಗಣಗಳ ಸಂತತಿ ನಿಯಂತ್ರಣಕ್ಕೆ ಈ ಹಾವು ಸಹಕಾರಿಯಾಗಿದೆ. ಅಲ್ಲದೆ ಇಸ್ರೇಲ್​ನಲ್ಲಿ ಸುಮಾರು 41 ಜಾತಿಯ ಹಾವುಗಳು ಜೀವಿಸುತ್ತಿವೆ. ಹೆಚ್ಚಿನವು ವಿಷರಹಿತವಾಗಿವೆ. ಹೀಗಾಗಿ ಮನುಷ್ಯರಿಗೆ ಇವುಗಳಿಂದ ತೊಂದರೆಯಾಗಲಾರದು.

ಇದನ್ನೂ ಓದಿ : Viral: ‘ಭಯ ಒಳ್ಳೆಯದು’; ಸುನೀಲ್​ ಶೆಟ್ಟಿ ಲಿಂಕ್ಡ್​ಇನ್​ ಪೋಸ್ಟ್​ ವೈರಲ್​

ಆದರೆ ಒಂಬತ್ತು ಜಾತಿಯ ಹಾವುಗಳು ಮಾತ್ರ ವಿಷಕಾರಿಯಾಗಿವೆ. ಈ ವಿಷಪೂರಿತ ಹಾವುಗಳು ಬೇಟೆಯಾಡಲು ಮತ್ತು ತಮ್ಮನ್ನು ರಕ್ಷಿಸಿಕೊಳ್ಳಲು ಮಾತ್ರ ತಮ್ಮ ವಿಷವನ್ನು ಬಳಸಿಕೊಳ್ಳುತ್ತವೆ. ಆದರೆ ವಿಷರಹಿತ ಹಾವುಗಳು ತಮ್ಮ ಬೇಟೆಯನ್ನು ಸಂಪೂರ್ಣವಾಗಿ ನುಂಗುತ್ತವೆ ಅಥವಾ ಅವುಗಳನ್ನು ಹಿಸುಕಿ ಸಾಯಿಸುತ್ತವೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:00 pm, Wed, 9 August 23