Viral: ಏಳು ದಶಕಗಳ ದಾಂಪತ್ಯ ಜೀವನ, ಇಳಿ ವಯಸ್ಸಿನಲ್ಲಿ ತನ್ನ ಪತ್ನಿಗೆ ಡಿವೋರ್ಸ್ ನೀಡಲು ಮುಂದಾಗಿದ್ದ ವೃದ್ಧ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ಕೆಲವು ದಿನಗಳಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಸರ್ವೇ ಸಾಮಾನ್ಯ. ಹೀಗಾದಾಗ ಕುಳಿತು ಬಗೆಹರಿಸುವ ಬದಲು ಕೋರ್ಟ್ ಮೆಟ್ಟಿಲೇರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ವರ್ಷಗಳು ಉರುಳಿದ್ದಂತೆ ಬಾಂಧವ್ಯ ಕೊಂಡಿ ಗಟ್ಟಿಯಾಗುವ ಕಾರಣ ಡಿವೋರ್ಸ್ ತೆಗೆದುಕೊಳ್ಳುವುದು ತುಂಬಾನೇ ಕಡಿಮೆ. ಆದರೆ ಈ ದಂಪತಿಯದ್ದು 77 ವರ್ಷಗಳ ದಾಂಪತ್ಯ ಜೀವನ, ತಮ್ಮ 99 ನೇ ವಯಸ್ಸಿನಲ್ಲಿ ವಿಚ್ಛೇದನಕ್ಕೆ ಅರ್ಜೀ ಸಲ್ಲಿಸಿದ್ದು, ಈ ಘಟನೆ ನಡೆದಿದ್ದುಎಲ್ಲಿ?, ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Viral: ಏಳು ದಶಕಗಳ ದಾಂಪತ್ಯ ಜೀವನ, ಇಳಿ ವಯಸ್ಸಿನಲ್ಲಿ ತನ್ನ ಪತ್ನಿಗೆ ಡಿವೋರ್ಸ್ ನೀಡಲು ಮುಂದಾಗಿದ್ದ ವೃದ್ಧ
ಆಂಟೋನಿಯೋ ಸಿ ಹಾಗೂ ರೋಸಾ ಸಿ ದಂಪತಿ
Image Credit source: Instagram

Updated on: Aug 13, 2025 | 2:12 PM

ಇಟಲಿ‌, ಆಗಸ್ಟ್‌ ೧೩: ಇತ್ತೀಚೆಗಿನ ದಿನಗಳಲ್ಲಿ ಡಿವೋರ್ಸ್ (Divorce) ಪ್ರಕರಣಗಳು ಹೆಚ್ಚಾಗುತ್ತಿವೆ. ಇಂದಿನ ಬಿಡುವಿಲ್ಲದ ಜೀವನ ಶೈಲಿ, ಒತ್ತಡ, ಹೊಂದಾಣಿಕೆ ಕೊರತೆ,  ಹೀಗೆ ಹಲವು ಕಾರಣಗಳಿಂದ ವಿಚ್ಛೇದನ ಪ್ರಕರಣ ತೆಗೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಮದ್ವೆ ಆದ ಕೆಲವೇ ಕೆಲವು ವರ್ಷಗಳಲ್ಲೇ ಜೊತೆಗೆ ಬದುಕಲು ಸಾಧ್ಯವಿಲ್ಲ ಎಂದು ದೂರವಾಗುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಆದರೆ ಈ ದಂಪತಿಯೂ ಡಿವೋರ್ಸ್ ಪಡೆದದ್ದು ತಮ್ಮ ಇಳಿವಯಸ್ಸಿನಲ್ಲಿ. 2011 ರಲ್ಲೂ ಇಟಲಿಯಲ್ಲಿ (Italy) ನಡೆದ ಘಟನೆ ಇದಾಗಿದ್ದು, ಇವರದ್ದು 70 ವರ್ಷಕ್ಕೂ ಅಧಿಕ ಪರಿಪೂರ್ಣ ದಾಂಪತ್ಯ ಜೀವನ. ಆದರೆ 99 ವರ್ಷದ ವ್ಯಕ್ತಿ ತನ್ನ 96 ವರ್ಷದ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದ. ಇಷ್ಟು ವರ್ಷಗಳ ಕಾಲ ಜೊತೆಗೆ ಬದುಕಿ ತನ್ನ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದು ಆ ಒಂದು ಕಾರಣಕ್ಕೆ ಎನ್ನಲಾಗಿದೆ. travly ಹೆಸರಿನ ಖಾತೆಯಲ್ಲಿ ಈ ಸ್ಟೋರಿಯನ್ನು ಹಂಚಿಕೊಳ್ಳಲಾಗಿದೆ.

ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಕಂಡ 7 ದಶಕಗಳ ದಾಂಪತ್ಯ ಜೀವನ

ಇದನ್ನೂ ಓದಿ
ಪ್ರೇಯಸಿಯ ಆರೈಕೆಯಲ್ಲಿ 30 ವರ್ಷ ಕಳೆದ ರಿಯಲ್ ಪ್ರೇಮಿಯ ಕಥೆಯಿದು
ಮೊದಲು ನನ್ನ ಹೆಂಡತಿಯನ್ನು ಉಳಿಸಿ, ಅವಳಿಗೆ ಈಜು ಬರುವುದಿಲ್ಲ
ಫ್ರೆಂಡ್‌ಶಿಪ್‌ ಡೇಯಂದು ವಿಚಿತ್ರ ಮ್ಯಾರೇಜ್ ಸ್ಟೋರಿ ರಿವೀಲ್ ಮಾಡಿದ ಯುವತಿ
ಭಾರತೀಯನನ್ನು ಮದುವೆಯಾಗಿದ್ದು ಇದೇ ಕಾರಣಕ್ಕೆ ಎಂದ ರಷ್ಯಾದ ಮಹಿಳೆ

70 ವರ್ಷಗಳ ಸುದೀರ್ಘ ದಾಂಪತ್ಯ ಜೀವನ, ಆಂಟೋನಿಯೋ ಸಿ ಹಾಗೂ ಅವರ ಪತ್ನಿಗೆ ಐದು ಜನ ಮಕ್ಕಳು, ಹನ್ನೆರಡು ಜನ ಮೊಮ್ಮಕ್ಕಳು. ಒಬ್ಬ ಮರಿ ಮೊಮ್ಮಗ. ಇಟಲಿಯ ಸಾರ್ಡಿನಿಯಾದವರಾದ ಆಂಟೋನಿಯೊ ಸಿ ಅವರು 1930 ರ ದಶಕದಲ್ಲಿ ಪತ್ನಿ ರೋಸಾ ಸಿ ರವರನ್ನು ಮೊದಲ ಬಾರಿಗೆ ಭೇಟಿಯಾದರು. ನೇಪಲ್ಸ್‌ನಲ್ಲಿ ಇಟಾಲಿಯನ್ ಕ್ಯಾರಬಿನಿಯರಿಯ ಭಾಗವಾಗಿ ಸೇವೆ ಸಲ್ಲಿಸುತ್ತಿದ್ದಾಗ ವೇಳೆಯಲ್ಲಿ ಇವರಿಬ್ಬರ ಭೇಟಿಯಾಯಿತು. ಆ ಬಳಿಕ ವೈವಾಹಿಕ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

 

99 ನೇ ವಯಸ್ಸಿನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿ

ಸರಿಸುಮಾರು 70 ವರ್ಷಗಳ ಕಾಲ ಜೊತೆಗೆ ಬದುಕಿದ್ದ ವೃದ್ಧ ವ್ಯಕ್ತಿ ತನ್ನ ಸಂಗಾತಿಗೆ ಡಿವೋರ್ಸ್ ನೀಡಲು ಮುಂದಾಗಿದ್ದ. ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ ವೇಳೆಯಲ್ಲಿ ಎಲ್ಲರೂ ಅಚ್ಚರಿ ಪಟ್ಟು ಕೊಂಡಿದ್ದರು. ಆದರೆ ಈ ವಿಚ್ಛೇದನಕ್ಕೆ ಕಾರಣವಾಗಿದ್ದು ವೃದ್ಧೆ ಮಾಡಿದ್ದ ಆ ಒಂದೇ ಒಂದು ತಪ್ಪಂತೆ. ಆಕೆಯ ಆ ಒಂದು ತಪ್ಪನ್ನು ಕ್ಷಮಿಸಲು ಸಾಧ್ಯವಿಲ್ಲದೇ ಕೋರ್ಟ್ ಮೆಟ್ಟಿಲೇರಿದ್ದ ಇಳಿ ವಯಸ್ಸಿನ ವ್ಯಕ್ತಿ.

ಡಿವೋರ್ಸ್‌ಗೆ ಕಾರಣವೇ ಆ ಒಂದು ತಪ್ಪು

ತನ್ನ ಪತ್ನಿ ಅರವತ್ತು ವರ್ಷಗಳ ಹಿಂದೆಯೇ ತನಗೆ ವಂಚಿಸಿದ್ದಾಳೆ ಎನ್ನುವುದು ಈ ವೃದ್ಧನಿಗೆ ತಿಳಿದಿದ್ದು, ಈ ಹಿನ್ನಲೆಯಲ್ಲಿ ಡಿವೋರ್ಸ್ ನೀಡಲು ಕೋರ್ಟ್ ಮೆಟ್ಟಿಲೇರಿದ್ದನಂತೆ. ಈ ವೃದ್ಧನು ಕ್ರಿಸ್‌ಮಸ್‌ಗೆ ಕೆಲವೇ ಕೆಲವು ದಿನ ಇರುವಾಗಲೇ ತನ್ನ ಹಳೆಯ ಡ್ರಾಯರ್‌ಗಳ ಪೆಟ್ಟಿಗೆಯಲ್ಲಿ ಏನನ್ನೋ ಹುಡುಕುತ್ತಿದ್ದ ವೇಳೆ ಪತ್ರವೊಂದು ಕೈಗೆ ಸಿಕ್ಕಿತು. ತನ್ನ ಪತ್ನಿಗೆ ಮಾಜಿ ಪ್ರೇಮಿಯ ಬರೆದಿದ್ದ ಪತ್ರವಿದು. ಈ ಬಗ್ಗೆ ತನ್ನ ಮಡದಿಯನ್ನು ಕೇಳಿದಾಗ, ತನಗೆ ಮದುವೆಗೂ ಮುನ್ನ ಲವ್ ಇತ್ತು ಎಂದು ಒಪ್ಪಿಕೊಂಡಿದ್ದು, ಇದುವೇ ವೃದ್ಧನ ಕೋಪಕ್ಕೆ ಕಾರಣವಾಗಿತ್ತು. ತನ್ನ ತಪ್ಪನ್ನು ಒಪ್ಪಿಕೊಂಡು ತನ್ನ ಪತಿಯ ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟರೂ ಈ ವೃದ್ಧ ವ್ಯಕ್ತಿಯೂ ಡಿವೋರ್ಸ್ ನೀಡುವ ನಿರ್ಧಾರಕ್ಕೆ ಬಂದಿದ್ದ.

ಇದನ್ನೂ ಓದಿ: ಪ್ರೇಯಸಿಯ ಆರೈಕೆಯಲ್ಲಿ 30 ವರ್ಷ ಕಳೆದ ರಿಯಲ್ ಪ್ರೇಮಿಯ ಕಥೆಯಿದು

 
ಈ ಘಟನೆಯೂ ನಡೆದು ವರ್ಷಗಳೇ ಉರುಳಿದೆ. ಆದರೆ ಇದೀಗ ಈ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಳಕೆದಾರರು ಕಾಮೆಂಟ್ ಮಾಡಿ ವೃದ್ಧನ ಈ ನಿರ್ಧಾರ ಸರಿಯಲ್ಲ ಎಂದಿದ್ದಾರೆ. ಒಬ್ಬ ಬಳಕೆದಾರ, ನಿಮ್ಮ ಪತ್ನಿಗೆ ಮೋಸ ಮಾಡುವ ಮನಸ್ಸಿದರೆ ಮದುವೆಯಾದ ಪ್ರಾರಂಭದಲ್ಲಿ ತನ್ನ ಪ್ರೇಮಿಯ ಜೊತೆಗೆ ಅನೈತಿಕ ಸಂಬಂಧ ಹೊಂದಬಹುದಿತ್ತು. ನಿಮ್ಮ ಈ ನಿರ್ಧಾರ ಸರಿಯಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕಾಡು ಬಾ ಎನ್ನುತ್ತೆ ಊರು ಹೋಗು ಎನ್ನುವ ವಯಸ್ಸಿನಲ್ಲಿ ಈ ನಿರ್ಧಾರ ಬೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಸಾಯೋ ವಯಸ್ಸಿನಲ್ಲಿ ಈ ರೀತಿ ಕಿರಿಕಿರಿ ಬೇಕಾ ಎಂದು ಇನ್ನೊಬ್ಬ ಬಳಕೆದಾರ ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:11 pm, Wed, 13 August 25