Viral Video: ತೋಳದಂತೆ ಕಾಣಿಸಿಕೊಳ್ಳಲು ರೂ 20 ಲಕ್ಷ ಖರ್ಚು ಮಾಡಿದ ವ್ಯಕ್ತಿಯ ವಿಡಿಯೋ

Relief : ''ತೋಳದ ವೇಷ ಧರಿಸಿದಾಗ ಮನುಷ್ಯ ಸಂಬಂಧಗಳಿಂದ ಮುಕ್ತನಾಗಿದ್ದೇನೆ ಎಂದೆನ್ನಿಸುತ್ತದೆ. ಅಲ್ಲದೆ ಕೆಲಸದ ಒತ್ತಡ ಮತ್ತಿತರೇ ನೋವುಗಳು ಕರಗಿದಂತೆ ಎನ್ನಿಸುತ್ತವೆ. ಒಟ್ಟಾರೆ ನಾನೊಬ್ಬ ಶಕ್ತಿಶಾಲಿ ಎಂಬ ಭಾವ ಉಂಟಾಗುತ್ತದೆ.''

Viral Video: ತೋಳದಂತೆ ಕಾಣಿಸಿಕೊಳ್ಳಲು ರೂ 20 ಲಕ್ಷ ಖರ್ಚು ಮಾಡಿದ ವ್ಯಕ್ತಿಯ ವಿಡಿಯೋ
ತೋಳದ ವೇಷ ಧರಿಸಿ ರಸ್ತೆಗಿಳಿದ ಟೋರು ಯೂಡಾ

Updated on: Aug 01, 2023 | 6:52 PM

Wolf : ಜಪಾನ್ ಮೂಲದ ವ್ಯಕ್ತಿಯೊಬ್ಬ ತಾನು ನಾಯಿಯಂತೆ ಕಾಣಿಸಿಕೊಳ್ಳಲು ಬರೋಬ್ಬರು ರೂ. 12 ಲಕ್ಷ ಖರ್ಚು ಮಾಡಿದ್ದನ್ನು ಓದಿದ್ದೀರಿ. ಇದೀಗ ಇದೇ ದೇಶದ 32 ವರ್ಷದ ಎಂಜಿನಿಯರ್ ಟೋರು ಯೂಡಾ (Toru Ueda) ತನ್ನ ಬಾಲ್ಯದ ಆಸೆಯನ್ನು ಈಡೇರಿಸಿಕೊಳ್ಳಲು ರೂ. 20 ಲಕ್ಷ ಖರ್ಚು ಮಾಡಿ ಸುದ್ದಿಯಲ್ಲಿದ್ದಾನೆ. ತೋಳದ ವೇಷಭೂಷಣವನ್ನು ತೊಟ್ಟು ರಸ್ತೆಗಳಿದು ಮಕ್ಕಳ ಮತ್ತು ದೊಡ್ಡವರ ಸ್ಪಂದನೆಯನ್ನು ಅನುಭವಿಸುತ್ತ ಖುಷಿಗೊಂಡಿದ್ದಾನೆ. ಈ ಉಡುಪನ್ನು ಧರಿಸಿದಾಗ ನಾನೊಬ್ಬ ಶಕ್ತಿಶಾಲಿ ಎಂದೆನ್ನಿಸುತ್ತದೆ ಎಂದಿದ್ದಾನೆ.

‘ಬಾಲ್ಯದಿಂದಲೂ ನನಗೆ ಪ್ರಾಣಿಗಳ ಮೇಲೆ ವಿಪರೀತ ವ್ಯಾಮೋಹ. ಟಿವಿಯಲ್ಲಿ ಪ್ರಾಣಿಗಳನ್ನು ನೋಡಿದಾಗ ನನ್ನ ಅಸ್ತಿತ್ವ ಇರುವುದು ಅವುಗಳ ಮೂಲಕವೇ, ನಾನೂ ಅವುಗಳೊಳಗೆ ಒಬ್ಬ ಎಂದೆನ್ನಿಸುತ್ತಿತ್ತು. ಹಾಗಾಗಿ ನಾನೂ ಒಂದು ಪ್ರಾಣಿಯಾಗಬೇಕು ಎಂದು ಕನಸು ಕಾಣುತ್ತಿದ್ದೆ’ ಎಂದಿದ್ದಾರೆ ಟೋರು. ಇದೀಗ ಈ ತೋಳದ ವೇಷವನ್ನು ಮತ್ತು ನಿನ್ನೆಯ ನಾಯಿಯ ವೇಷವನ್ನು ಸಿನೆಮಾ ಮತ್ತು ಇನ್ನಿತರೇ ಮನರಂಜನಾ ಕ್ಷೇತ್ರಗಳಿಗೆ ಪ್ರಾಣಿಗಳ ವೇಷಭೂಷಣ ತಯಾರಿಸುವ ಝೆಪ್ಪೆಟ್​ ಎಂಬ ಕಂಪೆನಿಯು ತಯಾರಿಸಿದೆ. ಈ ತೋಳದ ವೇಷವನ್ನು ತಯಾರಿಸಲು ಈ ಕಂಪೆನಿಯ ಒಟ್ಟು ನಾಲ್ಕು ಉದ್ಯೋಗಿಗಳು ಏಳು ವಾರಗಳನ್ನು ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಟೋರು ಯೂಡಾ

ಬೃಹದ್​ಗಾತ್ರದ ಈ ತೋಳದ ವೇಷವನ್ನು ಉಯೆಡಾ ಈ ವರ್ಷದ ಆರಂಭದಲ್ಲಿ ಈ ಕಂಪೆನಿಯಿಂದ ಪಡೆದುಕೊಂಡಿದ್ದಾರೆ. ಈಗಾಗಲೇ ಈ ವೇಷದಲ್ಲಿ ಇವರು ತೆಗೆಸಿಕೊಂಡ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ‘ರಸ್ತೆಯಲ್ಲಿ, ಉದ್ಯಾನವನದಲ್ಲಿ ಈ ವೇಷ ಧರಿಸಿ ಓಡಾಡುತ್ತೇನೆ. ಆದರೆ ಪಾರ್ಟಿಗಳಿಗೆಲ್ಲ ಈ ವೇಷವನ್ನು ಧರಿಸುವುದಿಲ್ಲ ಏಕೆಂದರೆ ನಡೆದಾಡುವಾಗ ಇದು ಅಷ್ಟೊಂದು ಅನುಕೂಲಕರವಾಗಿರುವುದಿಲ್ಲ. ಆದರೆ ಬೇಸರವಾದಾಗ ಮತ್ತು ವಿಶ್ರಾಂತಿ ಬೇಕೆನ್ನಿಸಿದಾಗ ಮನೆಯಲ್ಲಿಯೂ ಈ ವೇಷ ಧರಿಸಿ ಚೈತನ್ಯ ಪಡೆದುಕೊಳ್ಳುತ್ತೇನೆ’ ಎಂದಿದ್ದಾರೆ ಟೋರು.

ಇದನ್ನೂ ಓದಿ : Viral Video: ‘ಈ ಮಗು ಯಾರು, ಭೇಟಿಯಾಗಬೇಕು, ಅಪ್ಪಿಕೊಳ್ಳಬೇಕು’ ಶಂಕರ್ ಮಹಾದೇವನ್

ಬಾಲ್ಯದ ಆಘಾತಗಳು, ಮನಸ್ಸನ್ನು ಕದಡಿರುವ ಮನುಷ್ಯ ಸಂಬಂಧಗಳು ಸಾಮಾನ್ಯವಾಗಿ ಪ್ರಾಣಿಗಳನ್ನು ಹೆಚ್ಚು ಪ್ರೀತಿಸುವಂತೆ ಮಾಡುವ ಸಾಧ್ಯತೆ ಇರುತ್ತದೆ. ಕೆಲವರು ಪ್ರಾಣಿಗಳನ್ನು ಸಾಕುತ್ತಾರೆ ಮತ್ತು ಅವುಗಳೊಂದಿಗೇ ಜೀವಿಸುತ್ತಾರೆ. ಇನ್ನೂ ಕೆಲವರು ಹೀಗೆ ವೇಷ ಧರಿಸಿ ಸಮಾಧಾನ ಪಟ್ಟುಕೊಳ್ಳುತ್ತಾರೆ.

ಏನಂತೀರಿ ನೀವು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 6:51 pm, Tue, 1 August 23