ಅಲ್ಲು ಅರ್ಜುನ ಅವರ ಶ್ರೀವಲ್ಲಿ ಹುಕ್ ಸ್ಟೆಪ್​ಗೆ ಹೆಜ್ಜೆ ಹಾಕಿದ ಫ್ರೆಂಚ್ ವ್ಯಕ್ತಿ ಜಿಕಾ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 27, 2022 | 12:12 PM

ಜಿಕಾ ಎಂಬ ಫ್ರೆಂಚ್ ವ್ಯಕ್ತಿ ನಿಮಗೆ ನೆನಪಿದೆಯೇ? ಅಲ್ಲದೆ, ಅವರು ಕೆಲವು ಇತರೇ ಬಾಲಿವುಡ್ ಹಾಡುಗಳಾದ ಟಿಪ್ ಟಿಪ್ ಬರ್ಸಾ ಪಾನಿ ಮತ್ತು ಬಿಜ್ಲೀ ಬಿಜ್ಲೀ ಹಾಡಿಗೆ ನೃತ್ಯ ಮಾಡಿ ಪ್ರಸಿದ್ಧರಾಗಿದ್ದರು, ಆದರೆ ಈಗ, ಪುಷ್ಪಾ ಚಿತ್ರದ ಟ್ರೆಂಡಿಂಗ್ ಸಾಂಗ್​ಗೆ ಹೆಜ್ಜೆ ಹಾಕಿದ್ದಾರೆ.

ಅಲ್ಲು ಅರ್ಜುನ ಅವರ ಶ್ರೀವಲ್ಲಿ ಹುಕ್ ಸ್ಟೆಪ್​ಗೆ ಹೆಜ್ಜೆ ಹಾಕಿದ ಫ್ರೆಂಚ್ ವ್ಯಕ್ತಿ ಜಿಕಾ
ಶ್ರೀವಲ್ಲಿ ಹುಕ್ ಸ್ಟೆಪ್ ಮಾಡುತ್ತಿರವ ಫ್ರೆಂಚ್ ವ್ಯಕ್ತಿ ಜಿಕಾ ಹಾಗೂ ಆತನ ತಂಡ.
Follow us on

ಈ ಹಿಂದೆ ಜನಪ್ರಿಯ ಆರ್​ಆರ್​ಆರ್ ಚಿತ್ರದ ನಾಟು ನಾಟು ಸಾಂಗ್​ಗೆ ನೃತ್ಯ ಮಾಡಿದ ಜಿಕಾ ಎಂಬ ಫ್ರೆಂಚ್ ವ್ಯಕ್ತಿ ನಿಮಗೆ ನೆನಪಿದೆಯೇ? ಅಲ್ಲದೆ, ಅವರು ಕೆಲವು ಇತರೇ ಬಾಲಿವುಡ್ ಹಾಡುಗಳಾದ ಟಿಪ್ ಟಿಪ್ ಬರ್ಸಾ ಪಾನಿ ಮತ್ತು ಬಿಜ್ಲೀ ಬಿಜ್ಲೀ ಹಾಡಿಗೆ ನೃತ್ಯ ಮಾಡಿ ಪ್ರಸಿದ್ಧರಾಗಿದ್ದರು, ಆದರೆ ಈಗ, ಪುಷ್ಪಾ ಚಿತ್ರದ ಟ್ರೆಂಡಿಂಗ್ ಸಾಂಗ್ ಆದ ಶ್ರೀವಲ್ಲಿಗೆ ಅವರು ನೃತ್ಯ ಮಾಡಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಫ್ರೆಂಚ್ ವ್ಯಕ್ತಿ ಜಿಕಾ ಮಾಡಿರುವ ನೃತ್ಯ ನಿಮಗೂ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಲ್ಲು ಅರ್ಜುನ ನಟನೆಯ ಪುಷ್ಪಾ ಚಿತ್ರದ ಶ್ರೀವಲ್ಲಿ ಹಾಡಿಗೆ ಜಿಕಾ ಡ್ಯಾನ್ಸ್ ಮಾಡಿರುವುದನ್ನು ಕಾಣಬಹುದು. ಅವರು ತಮ್ಮ ದೇಸಿ ಹೆಜ್ಜೆಗಳನ್ನು ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಜನರ ಹೃದಯ ಗೆದ್ದಿದ್ದಾರೆ. ಅಲ್ಲು ಅರ್ಜುನ್ ಅವರ ಹುಕ್ ಸ್ಟೆಪ್​ನ್ನು ಅವರು ಮಾಡಿದ್ದಾರೆ. ನಿಲೌ ಮತ್ತು ಎಮಿಲ್ ಎಂಬ ಹೆಸರಿನ ಇತರ ಇಬ್ಬರು ನೃತ್ಯಗಾರರೊಂದಿಗೆ ಜಿಕಾ ಗ್ರೂಪ್ ಡ್ಯಾನ್ಸ್ ಮಾಡಿದ್ದಾರೆ.

ನಾವು ಪುಷ್ಪಾ ಟ್ರೆಂಡ್​ನ್ನು ಪ್ರಯತ್ನಿಸಿದ್ದೇವೆಎಂದು ಜಿಕಾ ಅವರು ತಮ್ಮ ಇನ್​ಸ್ಟಾಗ್ರಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ 4ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಮತ್ತು 51 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಜಿಕಾ ಅವರ ಗ್ರೂಪ್ ಡ್ಯಾನ್ಸ್​ಗೆ ಫಿದಾ ಆಗಿದ್ದಾರೆ.

ಇದನ್ನೂ ಓದಿ;

129 ಮಕ್ಕಳ ಜನನಕ್ಕೆ ಕಾರಣವಾದ ಜಗತ್ತಿನ ಆರೋಗ್ಯವಂತ ವೀರ್ಯ ದಾನಿ ಕ್ಲೈವ್ ಜೋನ್ಸ್

Viral; ಕೊಲಂಬಿಯಾದಲ್ಲೊಂದು ಉಲ್ಟಾ ಮನೆ ನಿರ್ಮಾಣ; ತಲೆಕೆಳಗಾಗಿರುವ ಮನೆ ನೋಡಲು ಪ್ರವಾಸಿಗರ ದಂಡು