Viral: ಕಬ್ಬನ್​ಪೇಟೆ ಟಿಫನ್ ರೂಮಿನಿಂದ ಶುರುವಾದ ಇವರ ತಿಂಡಿಯಾನ

|

Updated on: Jul 24, 2023 | 3:47 PM

Bengaluru : ತುಪ್ಪದಲ್ಲಿ ಹುರಿದ ಬಟನ್​ ಮಶ್ರೂಮ್, ಆಲೂಗಡ್ಡೆ ತುಂಡುಗಳಿಂದ ಕೂಡಿದ ಮಸಾಲೆಯುಕ್ತ ಅಣಬೆ ಪುಲಾಬ್ ತಿನ್ನಲು ಭಾನುವಾರಕ್ಕಾಗಿ ಕಾಯಬೇಕು. ಬಾಳೆಎಲೆ ಮೇಲೆ ಚಟ್ನಿಯೊಂದಿಗೆ ಹಬೆಯಾಡುವ ಈ ಪುಲಾವ್ ತಿನ್ನುವುದೇ ಸ್ವರ್ಗ!

Viral: ಕಬ್ಬನ್​ಪೇಟೆ ಟಿಫನ್ ರೂಮಿನಿಂದ ಶುರುವಾದ ಇವರ ತಿಂಡಿಯಾನ
ಬಸವನಗುಡಿಯ ಕಬ್ಬನಪೇಟೆ ಟಿಫಿನ್ ರೂಮಿಗೆ ಹೋಗಿದ್ದ ತಿಂಡಿಪ್ರಿಯರು
Follow us on

Tiffin : ಹೋಟೆಲ್​ಗೆ ಹೋದರೆ ಎಷ್ಟು ಜನ ಹೋಗುತ್ತೀರಿ? ಕೆಲ ಸ್ನೇಹಿತರೊಡನೆ ಅಥವಾ ಕುಟುಂಬದವರೊಂದಿಗೆ. ಆದರೆ ನಿಮ್ಮ ಅಕ್ಕಪಕ್ಕದ ಮನೆಯವರನ್ನೂ ಸೇರಿಸಿಕೊಂಡು ಹೋಗಿದ್ದಿದೆಯೇ? ಇದೀಗ ವೈರಲ್ ಆಗಿರುವ ಈ ಟ್ವೀಟ್​ ಥ್ರೆಡ್​ ನೋಡಿ. ಮೇಲಿನ ಫೋಟೋದಲ್ಲಿರುವವರೆಲ್ಲರೂ ಭಾನುವಾರದಂದು ತಿಂಡಿ ತಿನ್ನಲೆಂದು ಒಟ್ಟಾಗಿ ಹೊರಟಿದ್ದಾರೆ. ಅವರು ಮೊದಲು ಹೋಗಿದ್ದು ಬಸವನಗುಡಿಯಲ್ಲಿರುವ ಕಬ್ಬನ್​ಪೇಟೆ ಟಿಫನ್​ ರೂಮಿಗೆ. ಮೋಹನ್​ ಎನ್ನುವವರು ನಡೆಸುವ ಈ ಹೋಟೆಲ್​ನಲ್ಲಿ ಭಾನುವಾರ (Sunday)ದ ಅಣಬೆ ಪುಲಾವ್​ ಮತ್ತು ಸಬ್ಬಸಿಗೆ ಇಡ್ಲಿ, ಮಸಾಲೆ ದೋಸೆ ಮತ್ತು ರೈಸ್​ಬಾತ್​ಗಳಿಗಾಗಿ ಇವರು ದಾಂಗುಡಿ ಇಟ್ಟಿದ್ದಾರೆ.

ತೆಗೆದುಕೊಂಡ ಆರ್ಡರ್​ಗಳ ಪಟ್ಟಿ ಮೋಹನ್ ಅವರಿಗೆ ಚೆನ್ನಾಗಿ ನೆನಪಿರುತ್ತದೆಯಾದ್ದರಿಂದ ಬಿಲ್ ಮಾಡಲು ಅವರಿಗೆ ಅನುಕೂಲವಾಗುತ್ತದೆ. ಇಲ್ಲಿ ಸಬ್ಬಸಿಗೆ ಇಡ್ಲಿಗೆ ಕೊಡುವ ಚಟ್ನಿ ಬಹಳ ರುಚಿಯಾಗಿರುತ್ತದೆ. ಜೊತೆಗೆ ಆಲೂಗಡ್ಡೆ ಸಾಗೂ ಕೂಡ ಕೊಡುತ್ತಾರೆ. ಮೃದುವಾದ ಈ ಇಡ್ಲಿಗಳೊಂದಿಗೆ ಇದೆಲ್ಲವನ್ನೂ ಸವಿಯುವುದೆಂದರೆ ಸ್ವರ್ಗ.

ಇನ್ನು ಭಾನುವಾರ ಮಾತ್ರ ಮಾಡುವ ಅಣಬೆ ಪುಲಾವ್ ಸಾಕಷ್ಟು ಬಟನ್​ ಮಶ್ರೂಮ್​​ ತುಪ್ಪದಲ್ಲಿ ಹುರಿದ ಆಲೂಗಡ್ಡೆ ತುಂಡುಗಳು ಮತ್ತು​ ಮಸಾಲೆಯಿಂದ ಕೂಡಿರುತ್ತದೆ. ಚಟ್ನಿಯೊಂದಿಗೆ ಹಬೆಯಾಡುವ ಈ ಪುಲಾವ್ ಅನ್ನು ಬಾಳೆ ಎಲೆಯಲ್ಲಿ ಮುಂಜಾನೆ ಹೊತ್ತಿನಲ್ಲಿ ತಿನ್ನುವುದು ಅತ್ಯಂತ ಸೊಗಸು.

ಈ ತಿಂಡಿ ಮತ್ತು ಹೋಟೆಲ್​ಗಳ ಹೆಸರುಗಳ ಥ್ರೆಡ್​ ಬೆಳೆಯುತ್ತಲೇ ಹೋಗುತ್ತದೆ. ಟ್ವೀಟ್ ಮಾಡಿರುವ ಫೋಟೋಗಳು ನಿಮ್ಮ ಬಾಯಲ್ಲಿ ನೀರೂರಿಸತೊಡಗುತ್ತವೆ. ನಿಮಗೂ ಈಗ ಈ ಹೋಟೆಲ್​​ಗಳಿಗೆ ಹೋಗಬೇಕೆಂಬ ಮನಸ್ಸಾಗುತ್ತಿದೆಯೇ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

 

Published On - 3:40 pm, Mon, 24 July 23