ಹವಾಮಾನ ಇಲಾಖೆಯೂ ನಾಚುವಂತೆ ಮುಂಗಾರು ಆಗಮನದ ಬಗ್ಗೆ ನಿಖರ ಭವಿಷ್ಯ ಹೇಳುತ್ತೆ ದೇವಾಲಯ

|

Updated on: Jun 21, 2024 | 12:45 PM

ಉತ್ತರ ಪ್ರದೇಶದ ಕಾನ್ಪುರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಬೆಹ್ತಾ ಗ್ರಾಮದಲ್ಲಿರುವ ಜಗನ್ನಾಥ ದೇವಾಲಯವು ಕೂಡ ಒಂದಾಗಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಮಳೆಗಾಲದ ಬಗ್ಗೆ ಮೊದಲೇ ಮುನ್ಸೂಚನೆ ನೀಡುತ್ತದೆ. ಅಂದರೆ, ಈ ವರ್ಷ ಎಷ್ಟು ಮಳೆಯಾಗಲಿದೆ ಎಂದು ಭವಿಷ್ಯ ಹೇಳುತ್ತದೆ, ಅದೂ ವಿಶಿಷ್ಟ ರೀತಿಯಲ್ಲಿ.

ಹವಾಮಾನ ಇಲಾಖೆಯೂ ನಾಚುವಂತೆ ಮುಂಗಾರು ಆಗಮನದ ಬಗ್ಗೆ ನಿಖರ ಭವಿಷ್ಯ ಹೇಳುತ್ತೆ ದೇವಾಲಯ
ದೇವಸ್ಥಾನ
Follow us on

ದೇಶದಲ್ಲಿ ಹಲವು ನಿಗೂಢ ಸ್ಥಳಗಳಿವೆ, ಅದರಲ್ಲಿ ಉತ್ತರ ಪ್ರದೇಶದ ಕಾನ್ಪುರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಬೆಹ್ತಾ ಗ್ರಾಮದಲ್ಲಿರುವ ಜಗನ್ನಾಥ ದೇವಾಲಯವು ಕೂಡ ಒಂದಾಗಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಮಳೆಗಾಲದ ಬಗ್ಗೆ ಮೊದಲೇ ಮುನ್ಸೂಚನೆ ನೀಡುತ್ತದೆ. ಅಂದರೆ, ಈ ವರ್ಷ ಎಷ್ಟು ಮಳೆಯಾಗಲಿದೆ ಎಂದು ಭವಿಷ್ಯ ಹೇಳುತ್ತದೆ, ಅದೂ ವಿಶಿಷ್ಟ ರೀತಿಯಲ್ಲಿ.

ಈ ದೇವಾಲಯವನ್ನು ಮಾನ್ಸೂನ್ ದೇವಾಲಯ ಎಂದೂ ಕರೆಯುತ್ತಾರೆ. ಮಳೆ ಅಥವಾ ಮುಂಗಾರು ಆಗಮನದ ಕೆಲವು ದಿನಗಳ ಮೊದಲು ಈ ದೇವಾಲಯದ ಗರ್ಭಗುಡಿಯ ಮೇಲ್ಛಾವಣಿಯಿಂದ ನೀರಿನ ಹನಿಗಳು ತೊಟ್ಟಿಕ್ಕಲು ಪ್ರಾರಂಭಿಸುತ್ತವೆ.

ಅದರಿಂದ ಬೀಳುವ ಹನಿಗಳು ಮಳೆ ಹನಿಗಳ ಆಕಾರದಲ್ಲಿರುವುದು ದೊಡ್ಡ ವಿಸ್ಮಯ, ಈ ಹನಿಗಳ ಗಾತ್ರವನ್ನು ನೋಡಿದರೆ ಈ ಬಾರಿಯ ಮುಂಗಾರು ಉತ್ತಮವಾಗಿರಲಿದೆಯೋ ಅಥವಾ ದುರ್ಬಲವಾಗಿರಲಿದೆಯೋ ಎಂದು ಅಂದಾಜಿಸಬಹುದು.

ಜೂನ್ ಮೊದಲ ಹದಿನೈದು ದಿನಗಳಲ್ಲಿ ಹನಿಗಳು ಬೀಳಲು ಪ್ರಾರಂಭಿಸುತ್ತವೆ ಎಂದು ದೇವಾಕಯದ ಅರ್ಚಕ ಕುಧಾ ಪ್ರಸಾದ್ ಶುಕ್ಲಾ ಹೇಳಿದ್ದಾರೆ. ಗುಮ್ಮಟದ ಮೇಲಿನ ಕಲ್ಲಿನಿಂದ ಹನಿಗಳು ಉತ್ತಮ ಪ್ರಮಾಣದಲ್ಲಿ ಬೀಳುತ್ತಿವೆ. ಅವರ ಪ್ರಕಾರ, ಗುಮ್ಮಟದ ಮೇಲಿನ ಕಲ್ಲಿನಿಂದ ಹನಿಗಳು ಉತ್ತಮ ಪ್ರಮಾಣದಲ್ಲಿ ಬೀಳುತ್ತಿವೆ. ಅವರ ಪ್ರಕಾರ, ನಾಲ್ಕೈದು ದಿನಗಳ ಹಿಂದಿನವರೆಗೆ ಹೆಚ್ಚು ಹನಿಗಳು ಇದ್ದವು.

ಮತ್ತಷ್ಟು ಓದಿ: Viral Video: ಹಿಂಗೂ ಉಂಟೇ..? ಗಡ್ಡ ಮೀಸೆ ಬೋಳಿಸಿದ್ದಕ್ಕೆ ಮಗನಿಗೆ ತಂದೆಯಿಂದ ಕಪಾಳಮೋಕ್ಷ; ವೈರಲ್‌ ಆಯ್ತು ವಿಡಿಯೋ

ಕಲ್ಲಿನ ಮೇಲೆ ಹನಿಗಳು ಒಣಗಿದ ತಕ್ಷಣ ಮಳೆಯಾಗುತ್ತದೆ. ಈ ವರ್ಷ ಹನಿಗಳು ಇನ್ನೂ ಒಣಗಿಲ್ಲ, ಇದು ಖಂಡಿತವಾಗಿಯೂ ಕ್ರಮೇಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಮುಂಗಾರು ಆಗಮನದಲ್ಲಿ ಸ್ವಲ್ಪ ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ. ಹನಿಗಳ ಗಾತ್ರವನ್ನು ನೋಡಿದರೆ ಈ ವರ್ಷ ಉತ್ತಮ ಮುಂಗಾರು ಮುನ್ಸೂಚನೆ ನೀಡಲಾಗುತ್ತದೆ. ದೇವಾಲಯದ ಈ ರಹಸ್ಯವನ್ನು ತಿಳಿದ ವಿಜ್ಞಾನಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ದೇವಾಲಯದಲ್ಲಿ ಸುಮಾರು 15 ಅಡಿ ಎತ್ತರದ ಕಪ್ಪು ಕಲ್ಲಿನಿಂದ ಮಾಡಿದ ಜಗನ್ನಾಥನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಸುಭದ್ರಾ ಮತ್ತು ಬಲರಾಮ ಮೂರ್ತಿಗಳೂ ಇವೆ. ಗನ್ನಾಥನ ವಿಗ್ರಹದ ಸುತ್ತಲೂ 10 ಅವತಾರಗಳ ಪ್ರತಿಮೆಗಳನ್ನು ನಿರ್ಮಿಸಲಾಗಿದೆ.

ಈ ದೇವಾಲಯದ ಒಳಗೆ, ಗರ್ಭ ಗ್ರಹದ ಸುತ್ತಲೂ ಸುಂದರವಾಗಿ ಕೆತ್ತಲಾದ ಕಂಬಗಳಿವೆ. ಅನೇಕ ಸಮೀಕ್ಷೆಗಳ ನಂತರವೂ ಈ ದೇವಾಲಯವನ್ನು ಯಾವಾಗ ನಿರ್ಮಿಸಲಾಯಿತು ಎಂಬುದು ಇಂದಿಗೂ ತಿಳಿದಿಲ್ಲ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:43 pm, Fri, 21 June 24