ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ಮಗ ಮಾಡಿದ್ದೇನು ಗೊತ್ತಾ?
ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ಮಗನೊಬ್ಬ ವಿಚಿತ್ರವಾಗಿ ಪ್ರತಿಭಟನೆ ನಡೆಸಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ.
ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ಮಗ ಕೋಪ ಮಾಡಿಕೊಳ್ಳಲಿಲ್ಲ ಬದಲಾಗಿ ಈ ವಿಶಿಷ್ಟ ಪ್ರತಿಭಟನೆ ಮೂಲಕ ತಂದೆ ಹಣ ಕೊಡುವಂತೆ ಮಾಡಿರುವ ಘಟನೆ ಜಾರ್ಖಂಡ್ನ ಗೊಡ್ಡಾದಲ್ಲಿ ನಡೆದಿದೆ. ಮೊದಲು ಅಣ್ಣನಿಗೆ ಸಿಗುತ್ತಿದ್ದ ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ವ್ಯಕ್ತಿ ಕೇಳಿದ್ದ, ತಂದೆ ಈ ಮಾತನ್ನು ಒಪ್ಪದಿದ್ದಾಗ ಮಗ ಕಾನೂನಿನ ಮೊರೆ ಹೋಗಿದ್ದ, ಪಂಚಾಯಿಗಳೂ ನಡೆದವು, ಆದರೂ ಒಪ್ಪದಿದ್ದಾಗ ಮಗ ಒಳ್ಳೆಯ ಉಪಾಯ ಮಾಡಿದ್ದಾನೆ.
ಮಗ ಬ್ಯಾಂಡ್ ಬಾರಿಸುವವರನ್ನು ಕರೆದುಕೊಂಡು ಬಂದು ಇಡೀ ಊರು ತುಂಬಾ ಸುತ್ತಾಡಲು ಶುರು ಮಾಡಿದ್ದ, ಅಪ್ಪನ ಎದುರು ಕೂಡ ಬ್ಯಾಂಡ್ ಬಾರಿಸುವಂತೆ ಮಾಡಿದ್ದ. ಓಂ ಪ್ರಕಾಶ್ ಶುಕ್ಲಾ ಮಹುವಾರದಲ್ಲಿ ತಮ್ಮ ಪೂರ್ವಜರ ಜಮೀನನ್ನು ಹೊಂದಿದ್ದ, ರೈಲ್ವೆ ನಿರ್ಮಾಣ ಕಾಮಗಾರಿಗಾಗಿ ಸರ್ಕಾರವು ಕೋಟ್ಯಂತರ ರೂಪಾಯಿಗೆ ಖರೀದಿಸಿದೆ. ಈ ಹಿಂದೆ ತಂದೆ ಮಗ ಇಬ್ಬರಿಗೂ ಸಮಾನ ಪಾಲು ನೀಡುವುದಾಗಿ ಹೇಳಿದ್ದರು, ನಂತರ ಹಣ ಕೊಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದರು.
ಇದಾದ ಬಳಿಕ ಪಂಚಾಯ್ತಿ ನಡೆಸಿದ್ದಾರೆ, ಬಳಿಕ ಕೋರ್ಟ್ ಮೊರೆ ಹೋಗಿದ್ದರು, ಆದರೆ ಕೆಲಸಗಳು ಕಾರ್ಯರೂಪಕ್ಕೆ ಬರದಿದ್ದಾಗ, ಅವರು ಬೇರೆ ವಿಧಾನವನ್ನೇ ಅಳವಡಿಸಿಕೊಂಡಿದ್ದಾರೆ, ಬ್ಯಾಂಡ್ ಬಾರಿಸುವವರನ್ನು ಕರೆದುಕೊಂಡು ಗಂಟೆ ಗಟ್ಟಲೆ ಮನೆಯ ಮುಂದೆ ಬ್ಯಾಂಡ್ ಬಾರಿಸಿದ್ದಾರೆ.
ಮತ್ತಷ್ಟು ಓದಿ: ಹೃದಯಸ್ಪರ್ಶಿ ಪ್ರೇಮಕಥೆ.. ಮೃತ ಪ್ರೇಮಿಗಳಿಗೆ ಪ್ರೇತ ಮದುವೆ ಮಾಡಿಸಿದ ಕುಟುಂಬಸ್ಥರು
ಬಳಿಕ ಕುಟುಂಬ ಮತ್ತೊಮ್ಮೆ ಪಂಚಾಯ್ತಿಯ ಮೆಟ್ಟಿಲೇರುವಂತಾಯಿತು, ಅದರಲ್ಲಿ ಇಬ್ಬರೂ ಗಂಡುಮಕ್ಕಳಿಗೂ ಸಮಾನವಾಗಿ ಹಣವನ್ನು ಹಂಚುವಂತೆ ನಿರ್ಧಾರ ತೆಗೆದುಕೊಳ್ಳಲಾಯಿತು. ಸಹಜವಾಗಿ ಇದನ್ನು ಓಂ ಪ್ರಕಾಶ್ ತಂದೆ ಒಪ್ಪಿಕೊಂಡಿದ್ದಾರೆ, ಆದರೆ ಹಣ ಖಾತೆಗೆ ಬರುವವರೆಗೂ ಇದೇ ರೀತಿ ಬ್ಯಾಂಡ್ ಬಾರಿಸುತ್ತಾ ಇರುವುದಾಗಿ ಓಂ ಪ್ರಕಾಶ್ ತಿಳಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ