ವಂದೇ ಭಾರತ್ ರೈಲಿನಲ್ಲಿ ನೀಡಿದ ಊಟದಲ್ಲಿ ಜಿರಳೆ ಪತ್ತೆ; IRCTCಯಿಂದ ದಂಡ
ಭೋಪಾಲ್‌ನಿಂದ ಆಗ್ರಾಕ್ಕೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ದಂಪತಿಗಳು ಪ್ರಯಾಣಿಸುತ್ತಿದ್ದರು. 550 ಕಿ.ಮೀ ಪ್ರಯಾಣವು ಸರಿಸುಮಾರು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ, ವಂದೇ ಭಾರತ್ ರೈಲಿನಲ್ಲೇ ಅವರಿಗೆ ಆಹಾರವನ್ನು ನೀಡಲಾಯಿತು. ಆದರೆ, ಆ ಊಟದಲ್ಲಿ ಜಿರಲೆ ಪತ್ತೆಯಾಗಿದೆ.
ನವದೆಹಲಿ: ಕಳೆದೊಂದು ವಾರದಿಂದ ಆಹಾರಗಳಲ್ಲಿ ವಿವಿಧ ರೀತಿಯ ಪ್ರಾಣಿಗಳು, ಕೀಟಗಳು ಪತ್ತೆಯಾಗುತ್ತಿವೆ. ಐಸ್ ಕ್ರೀಂನಲ್ಲಿ (Ice Cream) ಜರಿ ಹುಳು, ಕಾಲೇಜ್ ಮೆಸ್ನಲ್ಲಿ ನೀಡುತ್ತಿದ್ದ ಊಟದಲ್ಲಿ ಹಾವು, ಚಾಕಲೇಟ್ ಸಿರಪ್ನಲ್ಲಿ ಇಲಿ, ಐಸ್ ಕ್ರೀಂನಲ್ಲಿ ಬೆರಳಿನ ತುಂಡು, ಚಿಪ್ಸ್ ಪ್ಯಾಕೆಟ್‌ನಲ್ಲಿ ಕಪ್ಪೆ ಸೇರಿದಂತೆ ಆಹಾರ ಪದಾರ್ಥಗಳಲ್ಲಿ ಸತ್ತ ಪ್ರಾಣಿಗಳು ಪತ್ತೆಯಾಗಿರುವ ಬಗ್ಗೆ ಸುದ್ದಿಗಳು ಬರುತ್ತಲೇ ಇವೆ. ಇದೆಲ್ಲದರ ನಡುವೆ ವಂದೇ ಭಾರತ್ ರೈಲಿನಲ್ಲಿ (Vande Bharat Train) ಪ್ರಯಾಣಿಸುತ್ತಿದ್ದ ದಂಪತಿಗೆ ಊಟದಲ್ಲಿ ಜಿರಳೆ (Cockroach) ಸಿಕ್ಕಿದೆ. ಜೂನ್ 18ರಂದು ಊಟ ನೀಡಲಾಗಿತ್ತು.
ವಂದೇ ಭಾರತ್ ರೈಲಿನಲ್ಲಿ ನೀಡಲಾದ ಊಟದಲ್ಲಿ ಜಿರಲೆ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ವಿದಿತ್ ವರ್ಷಿಣಿ ಎಂಬ ವ್ಯಕ್ತಿ ತಮ್ಮ ಊಟದ ಚಿತ್ರವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಐಆರ್‌ಸಿಟಿಸಿ – ಭಾರತೀಯ ರೈಲ್ವೆಯ ಕ್ಯಾಟರಿಂಗ್ ಮತ್ತು ಟಿಕೆಟ್ ಮಾರಾಟಗಾರರನ್ನು ಟ್ಯಾಗ್ ಮಾಡಿ, ರೈಲಿನಲ್ಲಿ ಕಳಪೆ ನೈರ್ಮಲ್ಯ ಸೇವೆಗಳ ಬಗ್ಗೆ ದೂರು ನೀಡಿದ್ದಾರೆ.
Today on 18-06-24 my Uncle and Aunt were travelling from Bhopal to Agra in Vande Bharat. They got “COCKROACH” in their food from @IRCTCofficial. Please take strict action against the vendor and make sure this would not happen again @RailMinIndia @ AshwiniVaishnaw @RailwaySe pic.twitter.com/Gicaw99I17
— Vidit Varshney (@ViditVarshney1) June 18, 2024
ಇದನ್ನೂ ಓದಿ: Shocking News: ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ; ಏನಿದು ಪ್ರಕರಣ?
ಆ ದಂಪತಿಯ ಸೋದರಳಿಯ ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಮಾರಾಟಗಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಜೂನ್ 18ರಂದು ನನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಭೋಪಾಲ್‌ನಿಂದ ಆಗ್ರಾಕ್ಕೆ ವಂದೇ ಭಾರತ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಐಆರ್ಸಿಟಿಸಿಯಿಂದ ಆಹಾರ ಆರ್ಡರ್ ಮಾಡಿದ್ದರು. ಆದರೆ, ಆ ಆಹಾರದಲ್ಲಿ ಜಿರಲೆ ಇತ್ತು. ದಯವಿಟ್ಟು ಆ ಆಹಾರ ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಿ ಮತ್ತು ಇದು ಮತ್ತೆ ಸಂಭವಿಸದಂತೆ ನೋಡಿಕೊಳ್ಳಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Sir, We apologize for the travel experience you had.The matter has been viewed seriously and suitable penalty has been imposed on concerned service provider. We have also intensified the production and logistics monitoring.
— IRCTC (@IRCTCofficial) June 20, 2024
ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದೆ. “ಸಂಬಂಧಿತ ಸೇವಾ ಪೂರೈಕೆದಾರರಿಗೆ ಸೂಕ್ತವಾದ ದಂಡವನ್ನು ವಿಧಿಸಲಾಗಿದೆ” ಎಂದು ಅದು ತಿಳಿಸಿದೆ. “ಸರ್, ನಿಮ್ಮ ಪ್ರಯಾಣದ ಕೆಟ್ಟ ಅನುಭವಕ್ಕಾಗಿ ನಾವು ಕ್ಷಮೆ ಯಾಚಿಸುತ್ತೇವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಸೇವಾದಾರರಿಗೆ ಸೂಕ್ತ ದಂಡ ವಿಧಿಸಲಾಗಿದೆ. ನಾವು ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ ಮೇಲ್ವಿಚಾರಣೆಯನ್ನು ತೀವ್ರಗೊಳಿಸಿದ್ದೇವೆ” ಎಂದು IRCTC ಆ ಪೋಸ್ಟ್‌ಗೆ ಪ್ರತಿಕ್ರಿಯಿಸಿದೆ.
ಇದನ್ನೂ ಓದಿ: ಈ ಪ್ರದೇಶದಲ್ಲಿ ನಮಾಜ್ ಮಾಡುವಂತಿಲ್ಲ, ಬಕ್ರೀದ್ಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ ಸರ್ಕಾರ
ವಂದೇ ಭಾರತ್‌ನಲ್ಲಿ ನೀಡಿದ ಊಟದಲ್ಲಿ ಜಿರಳೆ ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿಯಲ್ಲಿ ಡಾ. ಶುಭೇಂದು ಕೇಸರಿ ಎಂಬ ಪ್ರಯಾಣಿಕರು ಕಮಲಪತಿಯಿಂದ ಜಬಲ್‌ಪುರ ಜಂಕ್ಷನ್‌ಗೆ ಪ್ರಯಾಣಿಸುವಾಗ IRCTC ನೀಡಿದ ಊಟದಲ್ಲಿ ಸತ್ತ ಜಿರಳೆ ಸಿಕ್ಕಿತ್ತು.
ಜುಲೈ 2023ರಲ್ಲಿ, ಭೋಪಾಲ್-ದೆಹಲಿ ವಂದೇ ಭಾರತ್‌ನಲ್ಲಿ ಪ್ರಯಾಣಿಕನೊಬ್ಬ ಊಟದಲ್ಲಿ ಜಿರಳೆಯನ್ನು ಕಂಡುಹಿಡಿದ ನಂತರ IRCTC ಆಹಾರ ಮಾರಾಟಗಾರನಿಗೆ 25,000 ರೂ. ದಂಡವನ್ನು ವಿಧಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ