Shocking News: ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ; ಏನಿದು ಪ್ರಕರಣ?

Dead Frog in Chips: ಮುಂಬೈ ನಿವಾಸಿಯೊಬ್ಬರ ಮನೆಯಲ್ಲಿ ಮಗುವೊಂದು ಚಿಪ್ಸ್ ತಿನ್ನುತ್ತಾ ಕುಳಿತಿದ್ದಾಗ ಚಿಪ್ಸ್ ಪ್ಯಾಕೆಟ್​ನಲ್ಲಿ ಸತ್ತ ಕಪ್ಪೆಯೊಂದು ಪತ್ತೆಯಾಗಿದೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಂ ಕೋನ್‌ನಲ್ಲಿ ಮಾನವನ ಬೆರಳಿನ ತುಂಡು ಪತ್ತೆಯಾದ ಕೆಲವೇ ದಿನಗಳ ನಂತರ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವಿಷಯದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Shocking News: ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ; ಏನಿದು ಪ್ರಕರಣ?
ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ
Follow us
|

Updated on: Jun 19, 2024 | 9:30 PM

ಮುಂಬೈ: ನಾವು ಸೇವಿಸುವ ಆಹಾರ ಸುರಕ್ಷತೆಯ (Food Safety) ಬಗ್ಗೆ ದಿನದಿಂದ ದಿನಕ್ಕೆ ಆಘಾತಕಾರಿ ಘಟನೆಗಳು (Shocking News) ಬೆಳಕಿಗೆ ಬರುತ್ತಿವೆ. ಇದರ ನಡುವೆ ಇದೀಗ ಬೆಳಕಿಗೆ ಬಂದಿರುವ ಭಯಾನಕ ಘಟನೆಯೊಂದರಲ್ಲಿ, ಆಲೂಗೆಡ್ಡೆ ವೇಫರ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ (Dead Frog) ಪತ್ತೆಯಾಗಿದ್ದು, ತನಿಖೆಗೆ ಆದೇಶಿಸುವಂತೆ ಪುರಸಭೆಯ ಅಧಿಕಾರಿಗಳಿಗೆ ಇಂದು ಸೂಚಿಸಲಾಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ 4 ವರ್ಷದ ಮಗುವೊಂದು ಕ್ರುಚೆಕ್ಸ್ ಚಿಪ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆಯನ್ನು ಪತ್ತೆ ಮಾಡಿದ ಘಟನೆ ವರದಿಯಾಗಿದೆ.

ತನಿಖೆಯ ಭಾಗವಾಗಿ ಪ್ಯಾಕೆಟ್‌ನ ಉತ್ಪಾದನಾ ಬ್ಯಾಚ್‌ನ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಜಾಮ್‌ನಗರ ಮುನ್ಸಿಪಲ್ ಕಾರ್ಪೊರೇಶನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಾಜಿ ವೇಫರ್ಸ್ ತಯಾರಿಸಿದ ಕ್ರಂಚೆಕ್ಸ್ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಕಂಡುಬಂದಿದೆ ಎಂದು ಜಾಸ್ಮಿನ್ ಪಟೇಲ್ ನಮಗೆ ತಿಳಿಸಿದ್ದಾರೆ. ನಾವು ನಿನ್ನೆ ರಾತ್ರಿ ಅದನ್ನು ಖರೀದಿಸಿದ ಅಂಗಡಿಗೆ ಭೇಟಿ ನೀಡಿದ್ದೇವೆ. ಪ್ರಾಥಮಿಕ ತನಿಖೆಯಲ್ಲಿ ಇದು ನಿಜವಾಗಿಯೂ ಕೊಳೆತ ಸ್ಥಿತಿಯಲ್ಲಿದ್ದ ಕಪ್ಪೆ ಎಂದು ತಿಳಿದುಬಂದಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಡಿ.ಬಿ. ಪರ್ಮಾರ್ ಹೇಳಿದ್ದಾರೆ.

ಇದನ್ನೂ ಓದಿ: Air India: ಬೆಂಗಳೂರಿಂದ ತೆರಳುತ್ತಿದ್ದ ಏರ್​​ ಇಂಡಿಯಾ ವಿಮಾನದ ಊಟದಲ್ಲಿ ಬ್ಲೇಡ್​ ಪತ್ತೆ: ದಂಗಾದ ಪ್ರಯಾಣಿಕ

“ಮುನ್ಸಿಪಲ್ ಕಮಿಷನರ್ ನಿರ್ದೇಶನದಂತೆ, ನಾವು ವಿಚಾರಣೆ ನಡೆಸಲು ಈ ಬ್ಯಾಚ್ ವೇಫರ್ ಪ್ಯಾಕೆಟ್‌ಗಳ ಮಾದರಿಗಳನ್ನು ಸಂಗ್ರಹಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಪುಷ್ಕರ್ ಧಾಮ್ ಸೊಸೈಟಿಯ ನಿವಾಸಿಯಾಗಿರುವ ಜಾಸ್ಮಿನ್ ಪಟೇಲ್, ಮಂಗಳವಾರ ಸಂಜೆ ತನ್ನ ಮನೆಯಲ್ಲಿದ್ದ 4 ವರ್ಷದ ಮಗುವಿಗಾಗಿ ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಖರೀದಿಸಿದ್ದರು. ಆ ಚಿಪ್ಸ್ ಅನ್ನು ಬಾಲಕಿ ತಿನ್ನುತ್ತಿದ್ದಾಗ ಸತ್ತ ಕಪ್ಪೆಯೊಂದು ಕಂಡುಬಂದಿದೆ. ಇದನ್ನು ನೋಡಿದ ಮನೆಯವರು ಗಾಬರಿಯಾಗಿ ಈ ಬಗ್ಗೆ ದೂರು ನೀಡಿದ್ದಾರೆ.

ನಮ್ಮ ಮನೆಯ ಮಗು ಚಿಪ್ಸ್ ಪ್ಯಾಕೆಟ್​ನಲ್ಲಿ ಏನೋ ಸತ್ತು ಹೋಗಿದೆ ಎಂದು ಹೇಳಿದಾಗ ನಾನು ನಂಬಲಿಲ್ಲ. ಆದರೆ, ಕೊನೆಗೆ ಆ ಪ್ಯಾಕೆಟ್ ತೆಗೆದು ನೋಡಿದಾಗ ಅದರೊಳಗೆ ಸತ್ತ ಕಪ್ಪೆಯನ್ನು ನೋಡಿ ನನಗೂ ಆಘಾತವಾಯಿತು. ಬಾಲಾಜಿ ವೇಫರ್ಸ್‌ನ ವಿತರಕರು ಮತ್ತು ಕಸ್ಟಮರ್ ಕೇರ್ ಸೇವೆಗೆ ಫೋನ್ ಮಾಡಿ ವಿಚಾರ ತಿಳಿಸಿದಾಗ ಅವರು ಸರಿಯಾಗಿ ಸ್ಪಂದಿಸದಿದ್ದಾಗ ನಾನು ಬೆಳಿಗ್ಗೆ ಆಹಾರ ಸುರಕ್ಷತಾ ಅಧಿಕಾರಿಗೆ ವಿಷಯ ತಿಳಿಸಿದ್ದೇನೆ ಎಂದು ಜಾಸ್ಮಿನ್ ಪಟೇಲ್ ಹೇಳಿದ್ದಾರೆ.

ಇದನ್ನೂ ಓದಿ: ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ, ಕಂಪನಿಯ ಪರವಾನಗಿ ರದ್ದು

ಕ್ರಂಚೆಕ್ಸ್ ಹೆಸರಿನಲ್ಲಿರುವ ಚಿಪ್ಸ್ ಅನ್ನು ಬಾಲಾಜಿ ವೇಫರ್ಸ್ ತಯಾರಿಸಿದೆ. ಘಟನೆಯ ಕುರಿತು ಮಾತನಾಡಿದ ಜಾಮ್‌ನಗರ ಮುನ್ಸಿಪಲ್ ಕಾರ್ಪೊರೇಶನ್‌ನ ಅಧಿಕಾರಿಯೊಬ್ಬರು ತನಿಖೆಯ ಭಾಗವಾಗಿ ವೇಫರ್ ಪ್ಯಾಕೆಟ್‌ನ ಉತ್ಪಾದನಾ ಬ್ಯಾಚ್‌ನ ಮಾದರಿಗಳನ್ನು ಸಂಗ್ರಹಿಸುವುದಾಗಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ