Viral Video : ಹಾವೆಂದರೆ ಯಾರಿಗೆ ಭಯವಿಲ್ಲ? ಸ್ವಲ್ಪ ಧೈರ್ಯ ಇದ್ದವರು ಅದನ್ನು ಹಿಡಿಯಲು ಮುಂದಾಗುತ್ತಾರೆ. ಇನ್ನೂ ಕೆಲವರು ಹಾವು ಹಿಡಿಯುವಲ್ಲಿ ಪಳಗಿದ ನಂತರ ಅದನ್ನೇ ಹವ್ಯಾಸವಾಗಿಸಿಕೊಂಡು ಹುಚ್ಚಿಗೆ ಬಿದ್ದುಬಿಡುತ್ತಾರೆ. ಸಾಮಾನ್ಯವಾಗಿ ಒಂದು ಬಾರಿಗೆ ಒಂದು ಹಾವನ್ನು ಪಳಗಿಸುವುದೇ ಸಾಹಸದ ಕೆಲಸ. ಅದರಲ್ಲೂ ಮೂರು ನಾಗರಹಾವುಗಳನ್ನು ಏಕಕಾಲಕ್ಕೆ ಪಳಗಿಸುವುದೆಂದರೆ ಅದು ದುಃಸ್ಸಾಹಸಕ್ಕೆ ಎಡೆ ಮಾಡಿಕೊಡುವುದಿಲ್ಲವೆ? ಹೌದು ಎನ್ನುತ್ತಿದೆ ಈ ವಿಡಿಯೋ. ಶಿರಸಿಯ ಈ ಯುವಕ ಅತೀ ಉತ್ಸಾಹದಲ್ಲಿ ಮೂರೂ ಹಾವುಗಳನ್ನು ಪಳಗಿಸಲು ಹೋಗಿ ಎಂಥ ಪರಿಸ್ಥಿತಿ ತಂದುಕೊಂಡಿದ್ದಾನೆ ನೋಡಿ.
This is just horrific way of handling cobras…
The snake considers the movements as threats and follow the movement. At times, the response can be fatal pic.twitter.com/U89EkzJrFc ಇದನ್ನೂ ಓದಿ— Susanta Nanda IFS (@susantananda3) March 16, 2022
ಮೂರು ನಾಗರಗಳು ಹೆಡೆಯೆತ್ತಿ ಆಡುತ್ತಿವೆ. ಅತ್ಯಂತ ಆತ್ಮವಿಶ್ವಾಸದಲ್ಲಿ ಸಮೀಪವೇ ಕುಳಿತುಕೊಂಡು ಅವುಗಳನ್ನು ಆಡಿಸಲು ನೋಡುತ್ತಿದ್ದಾನೆ. ಅಷ್ಟರಲ್ಲಿಯೇ ಒಂದು ಹಾವು ಆಕ್ರಮಣಕಾರಿಯಾಗಿ ಅವನ ಮೊಣಕಾಲನ್ನು ಕಚ್ಚಿ ಹಿಡಿದುಕೊಂಡಿದೆ. ಎದ್ದು ಓಡಲು ನೋಡುತ್ತಾನೆ ಆದರೆ ಪ್ಯಾಂಟ್ ಕೂಡ ಬಿಡದಂತೆ ಗಟ್ಟಿಯಾಗಿ ಕಚ್ಚಿ ಹಿಡಿದಿದೆ. ಅದರ ಬಾಯಿಗೆ ಇವನ ಚರ್ಮವೂ ಸಿಕ್ಕಿದ್ದರೆ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಎಚ್ಚರಿಕೆಯ ಸಂದೇಶವನ್ನು ಸಾರುತ್ತಿದೆ.
ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋ ಹಂಚಿಕೊಂಡು, ‘ನಾಗರಹಾವುಗಳನ್ನು ಪಳಗಿಸುವ ಭಯಾನಕ ವಿಧಾನ. ಹೀಗೆ ಕೈಆಡಿಸುವುದನ್ನು ನೋಡಿದ ಹಾವು ಹೆದರಿ ಆ ಚಲನೆಯನ್ನು ಅನುಸರಿಸುತ್ತದೆ. ಆದರೆ ಪರಿಣಾಮ ಕೆಲವೊಮ್ಮೆ ಹೀಗೆ ಮಾರಕವಾಗಿರಬಹುದು’ ನೋಟ್ ಬರೆದಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:56 pm, Wed, 14 September 22