Viral: ಇದು ವಿಶ್ವದ ಅತ್ಯಂತ ಕುಬ್ಜ ಮೇಕೆ; ಗಿನ್ನೆಸ್‌ ದಾಖಲೆ ಪುಟ ಸೇರಿದ ಕೇರಳದ ಕರುಂಬಿ

ನೀವೆಲ್ಲರೂ ಕುಬ್ಜ ಮನುಷ್ಯರನ್ನು ನೋಡಿರುತ್ತೀರಿ ಅಲ್ವಾ. ಆದ್ರೆ ಯಾವತ್ತಾದ್ರೂ ಗಾತ್ರದಲ್ಲಿ ತುಂಬಾ ಸಣ್ಣದಾಗಿರುವ ಮೇಕೆಯನ್ನು ನೋಡಿದ್ದೀರಾ? ಕೇರಳದಲ್ಲೊಂದು ವಿಶೇಷ ಮೇಕೆಯಿದ್ದು, ಇದು ತನ್ನ ಕಡಿಮೆ ಎತ್ತರದ ಮೂಲಕವೇ ಸುದ್ದಿಯಲ್ಲಿದೆ.‌ ಸಾಮಾನ್ಯವಾಗಿ ಮೇಕೆಗಳು ಹದವಾದ ಗಾತ್ರದಲ್ಲಿರುತ್ತದೆ. ಆದ್ರೆ ಈ ಮೇಕೆ ಗಾತ್ರದಲ್ಲಿ ತೀರಾ ಸಣ್ಣದಾಗಿದ್ದು, 1.3 ಅಡಿ ಎತ್ತರವಿರುವ ಕೆನಡಾ ಪಿಗ್ಮಿ ತಳಿಯ ಈ ಮೇಕೆ ವಿಶ್ವದ ಅತ್ಯಂತ ಕುಬ್ಜ ಮೇಕೆಯೆಂಬ ವಿಶ್ವ ದಾಖಲೆಯನ್ನು ಬರೆದಿದೆ.

Viral: ಇದು ವಿಶ್ವದ ಅತ್ಯಂತ ಕುಬ್ಜ ಮೇಕೆ; ಗಿನ್ನೆಸ್‌ ದಾಖಲೆ ಪುಟ ಸೇರಿದ ಕೇರಳದ ಕರುಂಬಿ
ವೈರಲ್​ ವಿಡಿಯೋ
Edited By:

Updated on: Mar 27, 2025 | 4:45 PM

ಕೇರಳ, ಮಾ. 27: ಸಾಮಾನ್ಯವಾಗಿ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯ ಎತ್ತರ (height) ವಿಭಿನ್ನವಾಗಿರುತ್ತವೆ. ಕೆಲವರು ತುಂಬಾ ಎತ್ತರವಾಗಿದ್ರೆ ಕೆಲವರು ತುಂಬಾ ಗಿಡ್ಡಗಿರುತ್ತಾರೆ. ಆದ್ರೆ ಪ್ರಾಣಿಗಳಲ್ಲಿ ಹೀಗೆ ಕಾಣ ಸಿಗುವುದು ತೀರಾ ವಿರಳ. ಒಂದೇ ಜಾತಿಯ ಪ್ರಾಣಿಗಳು ಸಾಮಾನ್ಯವಾಗಿ ಎತ್ತರ, ಗಾತ್ರದಲ್ಲಿಯೂ ಕೂಡಾ ಒಂದೇ ರೀತಿ ಇರುತ್ತದೆ. ಹೀಗಿರುವಾಗ ಇಲ್ಲೊಂದು ಮೇಕೆ (goat) ವಿಶ್ವದ ಅತ್ಯಂತ ಕುಬ್ಜ (shortest) ಮೇಕೆಯೆಂಬ ದಾಖಲೆಯನ್ನು ಬರೆದಿದೆ. ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುವ ಕೇರಳದ ಈ ವಿಶೇಷ ಆಡು ಗಿನ್ನೆಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್ (Guinness Book Of World Records) ದಾಖಲೆಯ ಪುಟ ಸೇರಿದೆ. ಅಷ್ಟಕ್ಕೂ ಈ ಮೇಕೆಯ ತಳಿ ಯಾವುದು, ಎತ್ತರ ಎಷ್ಟು ಗೊತ್ತಾ? ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ವಿಶ್ವದ ಅತ್ಯಂತ ಕುಬ್ಜ ಮೇಕೆಯ ಗಾತ್ರ ಎಷ್ಟು?

ಕೇರಳದ ರೈತ ಪೀಟರ್‌ ಲೆನು ತಮ್ಮ ಫಾರ್ಮ್‌ನಲ್ಲಿ ಸಾಕಿರುವ ಕರುಂಬಿ ಹೆಸರಿನ ಹೆಣ್ಣು ಮೇಕೆ ವಿಶ್ವದ ಅತ್ಯಂತ ಕುಬ್ಜ ಮೇಕೆ ಎಂಬ ವಿಶ್ವ ದಾಖಲೆಯನ್ನು ಬರೆದಿದೆ. ಸಾಮಾನ್ಯವಾಗಿ ಎಲ್ಲಾ ಮೇಕೆಗಳು ಒಂದು ಹದ ಗಾತ್ರದಲ್ಲಿರುತ್ತದೆ. ಆದ್ರೆ ಈ ಮೇಕೆ ಮಾತ್ರ ಗಾತ್ರದಲ್ಲಿ ತೀರಾ ಸಣ್ಣದಾಗಿದೆ. ಸುಮಾರು 4 ವರ್ಷ ವಯಸ್ಸಿನ ಕಪ್ಪು ಬಣ್ಣದ ಕೆನಡಾ ಪಿಗ್ಮಿ ತಳಿಯ ಈ ಮೇಕೆಯ ಎತ್ತರ 1.3 ಅಡಿ. ಅನುವಂಶಿಕ ಕುಜ್ಮತೆಯಿಂದಲೇ ಹೆಸರುವಾಸಿಯಾಗಿರುವ ಪಿಗ್ಮಿ ಮೇಕೆಗಳು 21 ಇಂಚುಗಳಷ್ಟು ಎತ್ತರದವೆರೆಗೆ ಬೆಳೆಯುತ್ತದೆ. ಆದ್ರೆ ಕರುಂಬಿ ಮಾತ್ರ 1.3 ಅಡಿ ಎತ್ತರದಷ್ಟು ಬೆಳೆದಿದೆ. 2021 ರಲ್ಲಿ ಜನಿಸಿದ ಕರುಂಬಿ ಮೂರು ಗಂಡು ಮೇಕೆಗಳು, ಒಂಬತ್ತು ಹೆಣ್ಣು ಮೇಕೆಗಳು ಹಾಗೂ ಹಸು, ಮೊಲ, ಕೋಳಿ, ಬಾತುಕೋಳಿಗಳೊಂದಿದೆ ಬೆರೆತು ಆಟವಾಡುತ್ತದೆಯಂತೆ. ಇದೀಗ ಈ ಮೇಕೆ ಕುಬ್ಜ ಮೇಕೆಯೆಂದು ಬಿರುದು ಪಡೆಯುವ ಮೂಲಕ ಗಿನ್ನೆಸ್‌ ದಾಖಲೆಯ ಪುಟ ಸೇರಿದೆ.

ಇದನ್ನೂ ಓದಿ
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ಈ ಸಂಬಂಧಿಸಿದ ವಿಡಿಯೋವನ್ನು ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್ಸ್‌ನ (Guinness World Records) ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ವಿಶ್ವದ ಅತ್ಯಂತ ಚಿಕ್ಕ ಮೇಕೆ ಕುರುಂಬಿಯನ್ನು ಭೇಟಿ ಮಾಡಿ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ಆಗುತ್ತಿರುವ ವೀಡಿಯೋದಲ್ಲಿ ಕಪ್ಪು ಬಣ್ಣದ ಕುಬ್ಜ ಮೇಕೆಯನ್ನು ಕಾಣಬಹುದು.

ಇದನ್ನೂ ಓದಿ: ಈ ಚಿಕನ್ ಕರಿ ತಿನ್ನಲು ನಿಮ್ಮ ಆಸ್ತಿಯನ್ನು ಮಾರಬೇಕು, ಯಾಕೆ ಗೊತ್ತಾ?

ಮಾರ್ಚ್‌ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 94 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೈಜೀರಿಯಾದಲ್ಲಿ ಇಂತಹ ಮೇಕೆಗಳು ಸಾಕಷ್ಟಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಮುದ್ದಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us