AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಚಿಕನ್ ಕರಿಯ ಬೆಲೆ 5 ಸಾವಿರ ರೂ. ಯಾಕೆ ಗೊತ್ತಾ? ಈ ವಿಚಿತ್ರ ಕಾರಣ ಕೇಳಿದ್ರೆ ಶಾಕ್​​​ ಆಗುವುದು ಗ್ಯಾರಂಟಿ

ಸಾಮಾನ್ಯವಾಗಿ ಚಿಕನ್ ಕರಿ ಬೆಲೆ ಎಷ್ಟಿರಬಹುದು? ಅಬ್ಬಾಬ್ಬ ಅಂದ್ರೆ ಒಂದು ಸಾವಿರ, ಆದರೆ ಇಲ್ಲೊಂದು ರೆಸ್ಟೋರೆಂಟ್​​ನಲ್ಲಿ ಒಂದು ಚಿಕನ್ ಕರಿ ಬೆಲೆ 5 ಸಾವಿರ. ಇದೀಗ ಈ ಬಗ್ಗೆ ವ್ಯಾಪಕ ವೈರಲ್​​ ಆಗುತ್ತಿದೆ. ರೆಸ್ಟೋರೆಂಟ್ ಅರ್ಧ ಬೇಯಿಸಿದ ಕೋಳಿ ಮಾಂಸವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ. ಹೀಗೆ ಯಾಕೆ ಮಾಡುತ್ತಿದ್ದೀರಾ ಎಂದು ಕೇಳಿದ್ರೆ ರೆಸ್ಟೋರೆಂಟ್ ಮಾಲೀಕ ನೀಡಿದ ಉತ್ತರ ಕೇಳಿ ಉದ್ಯಮಿಯೊಬ್ಬರು ಅಚ್ಚರಿಯಾಗಿದ್ದಾರೆ. ಅಷ್ಟಕ್ಕೂ ಈ ಚಿಕನ್​​ ಕರಿ ಯಾಕಿಷ್ಟು? ಬೆಲೆ, ಯಾವ ಕಾರಣಕ್ಕೆ ಇಷ್ಟೊಂದು ಬೆಲೆ ಮಾರಾಟವಾಗುತ್ತಿದೆ ಎಂಬ ಬಗ್ಗೆ ಉತ್ತರ ಇಲ್ಲಿದೆ.

ಈ ಚಿಕನ್ ಕರಿಯ ಬೆಲೆ 5 ಸಾವಿರ ರೂ. ಯಾಕೆ ಗೊತ್ತಾ? ಈ ವಿಚಿತ್ರ ಕಾರಣ ಕೇಳಿದ್ರೆ ಶಾಕ್​​​ ಆಗುವುದು ಗ್ಯಾರಂಟಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Mar 27, 2025 | 4:09 PM

Share

ಒಂದು ಚಿಕನ್ ಊಟಕ್ಕೆ (Chicken meal)​​ ಬೆಲೆ ಅಬ್ಬಾಬ್ಬ ಅಂದ್ರೆ ಒಂದು ಸಾವಿರ ರೂ. ಇರಬಹುದು. ಅದು ಕೂಡ ಹೆಚ್ಚು ತೆಗೆದುಕೊಂಡರೆ ಮಾತ್ರ,  ಆದರೆ ಚೀನಾದಲ್ಲಿ (china) ಈ ಚಿಕನ್ ರೆಸಿಪಿಯ ಬೆಲೆ ರೂ. 5,500 ರೂ. ಚೀನಾದ ಶಾಂಘೈನಲ್ಲಿರುವ ಒಂದು ರೆಸ್ಟೋರೆಂಟ್ ಅರ್ಧ ಬೇಯಿಸಿದ ಕೋಳಿ ಮಾಂಸವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ. ಇದಕ್ಕೆ ರೆಸ್ಟೋರೆಂಟ್ ಆಡಳಿತ ಮಂಡಳಿ ವಿಚಿತ್ರ ಕಾರಣ ನೀಡಿದೆ. ಈ ರೆಸ್ಟೋರೆಂಟ್‌ನಲ್ಲಿ ಇತ್ತೀಚೆಗೆ ಒಬ್ಬ ಉದ್ಯಮಿ ಅರ್ಧ ಬೇಯಿಸಿದ ಕೋಳಿ ಕರಿ ಖರೀದಿಸಿದ್ದಾರೆ. ಇದಕ್ಕೆ ರೆಸ್ಟೋರೆಂಟ್‌ 480 ಯುವಾನ್ ಬಿಲ್​​ ಮಾಡಿದೆ. ಈ ಬಿಲ್​​ ನೋಡಿ ಉದ್ಯಮಿ ಆಘಾತಕ್ಕೊಳಗಾಗಿದ್ದಾರೆ. ಇನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ಚಿಕನ್ ಕರಿಯನ್ನು ಇಷ್ಟೊಂದು ಬೆಲೆಗೆ ಏಕೆ ಮಾರಾಟ ಮಾಡುತ್ತಿದ್ದೀರಾ?  “ನೀನು ಕೋಳಿಯನ್ನು ನೀರಿನ ಬದಲು ಹಾಲಿನಲ್ಲಿ ಸಾಕಿದ್ದೀಯಾ?” ಎಂದು ಗದರಿದ್ದಾನೆ.

ಈ ಪ್ರಶ್ನೆಗೆ ಉತ್ತರಿಸಿದ ರೆಸ್ಟೋರೆಂಟ್ ಮಾಲೀಕ ಹೌದು ನಮ್ಮ ಕೋಳಿ ಸಾಂಪ್ರದಾಯಿಕ ಚೀನೀ ಸಂಗೀತವನ್ನು ಕೇಳುತ್ತಾ ಬೆಳೆದಿದೆ ಎಂದು ಹೇಳಿದ್ದಾನೆ. ನೀರಿನ ಬದಲು ಹಾಲು ಕುಡಿದು ಬೆಳೆದಿದೆ. ಹಾಗೂ ಆ ಕೋಳಿ ಕೂಡ ಸೂರ್ಯಕಾಂತಿ ಕೋಳಿ ತಳಿಗೆ ಸೇರಿದೆ ಎಂದು ಉತ್ತರಿಸಿದ್ದಾನೆ.

ರೆಸ್ಟೋರೆಂಟ್ ಮಾಲೀಕರ ಉತ್ತರದಿಂದ ಈ ಉದ್ಯಮಿ ಅಚ್ಚರಿಗೊಂಡಿದ್ದಾರೆ. ಇನ್ನು ಸೂರ್ಯಕಾಂತಿ ಕೋಳಿ ಬೆಳೆಯುತ್ತಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ವಿಚಾರ ಎಲ್ಲ ಕಡೆ ಸದ್ದು ಮಾಡಿದೆ. ಸೂರ್ಯಕಾಂತಿ ಕೋಳಿಗಳನ್ನು ಅಕ್ಕಿ ಸೇರಿದಂತೆ ಧಾನ್ಯಗಳ ಬದಲಿಗೆ ಸೂರ್ಯಕಾಂತಿ ಕಾಂಡದ ರಸ ಮತ್ತು ಇತರ ವಿಶೇಷ ಆಹಾರದ ಮೇಲೆ ಸಾಕಲಾಗುತ್ತದೆ.ಕೋಳಿ ಸಾಕಣೆ ಕೇಂದ್ರದ ವ್ಯವಸ್ಥಾಪಕರು ಸಾಂಪ್ರದಾಯಿಕ ಸಂಗೀತದ ನಡುವೆ ಈ ರೀತಿಯ ಕೋಳಿಗಳನ್ನು ಸಾಕುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
Image
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
Image
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
Image
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
Image
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ಇದನ್ನೂ ಓದಿ: ಸಹದ್ಯೋಗಿಯನ್ನೇ ಮದುವೆಯಾಗಿ, ಇದರಿಂದ ಹಲವು ಪ್ರಯೋಜನಗಳಿವೆ

ಎಂಪರರ್ ಚಿಕನ್ ಎಂದೂ ಕರೆಯಲ್ಪಡುವ ಈ ರೀತಿಯ ಕೋಳಿಯನ್ನು ಅದರ ವಿಶಿಷ್ಟ ರುಚಿಯಿಂದಾಗಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಈ ಕೋಳಿಗಳ ರೆಸಿಪಿಯನ್ನು ಮಾಡಿ ಸಾಕುತ್ತಾರೆ. ಸೂರ್ಯಕಾಂತಿ ಕೋಳಿಗಳಿಗೆ ಪ್ರತಿ ಕಿಲೋಗೆ 200 ಯುವಾನ್ ಅಂದರೆ ಇದರ ಬೆಲೆ 2,300 ರೂ, ಆಗಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Thu, 27 March 25

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು