ಕೊಚ್ಚಿಯ ಮೆಟ್ರೋ ಸಿಬ್ಬಂದಿಯ ಡ್ಯಾನ್ಸ್! ನಿಮ್ಮ ಮೂಡ್ ಬದಲಾಗದಿದ್ದರೆ ಹೇಳಿ

Kochi : ಕುಣಿಯಲಿ ಬಿಡಿ, ಇದರಿಂದ ನಿಮಗೇನು ನಷ್ಟ? ಹೀಗೆಂದು ತಕರಾರು ಎತ್ತಿದವರನ್ನು ಕೆಲ ನೆಟ್ಟಿಗರು ಪ್ರಶ್ನಿಸಿದ್ದಾರೆ. ತಮಿಳಿನ ಟ್ರೆಂಡಿಂಗ್ ಹಾಡೊಂದಕ್ಕೆ ಇವರಿಬ್ಬರೂ ಹೀಗೆ ಹೆಜ್ಜೆ ಹಾಕಿರುವುದನ್ನು ನೋಡಲು ನಿಮಗೂ ಆಸೆಯಾಗುತ್ತಿದೆಯೆ?

ಕೊಚ್ಚಿಯ ಮೆಟ್ರೋ ಸಿಬ್ಬಂದಿಯ ಡ್ಯಾನ್ಸ್! ನಿಮ್ಮ ಮೂಡ್ ಬದಲಾಗದಿದ್ದರೆ ಹೇಳಿ
ಕೊಚ್ಚಿಯ ಮೆಟ್ರೋ ಸಿಬ್ಬಂದಿಯ ನೃತ್ಯ
Edited By: ಶ್ರೀದೇವಿ ಕಳಸದ

Updated on: May 03, 2023 | 10:20 AM

Viral Video : ಆಯ್ದುಕೊಂಡ ವೃತ್ತಿಗೆ ಅನುಗುಣವಾಗಿ ಒಮ್ಮೆ ಸಮವಸ್ತ್ರ ಧರಿಸಿದ ಮೇಲೆ ಮುಗಿಯಿತು. ಸಮಾಜ ಅವರನ್ನು ಕರ್ತವ್ಯ ಮತ್ತು ಗಂಭೀರ ನೋಟದಲ್ಲಿ ಬಂಧಿಸಿಟ್ಟುಬಿಡುತ್ತದೆ. ಅದರಲ್ಲಿಯೂ ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ನಿರತರಾದವರಿಂದ ಹೆಚ್ಚಿನ ಶಿಸ್ತು ಮತ್ತು ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತದೆ. ಆದರೆ ಅವರೂ ನಮ್ಮನಿಮ್ಮಂತೆ ಸಾಮಾನ್ಯ ಮನುಷ್ಯರು. ಕೆಲಸದ ಏಕತಾನತೆಯಿಂದ ಅವರಿಗೂ ಬದಲಾವಣೆ ಬೇಕಾಗುತ್ತದೆ ಮತ್ತು ಕಾಲಕ್ಕೆ ತಕ್ಕಂತೆ ಸಹಜವಾದ ಆಕಾಂಕ್ಷೆಗಳಿರುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ತಕ್ಷಣ ನಿಮ್ಮಲ್ಲಿ ಶಕ್ತಿ ಸಂಚಯವಾಗುವುದೋ ಇಲ್ಲವೋ?

ಇವರಿಬ್ಬರೂ ಕೊಚ್ಚಿಯ ಮೆಟ್ರೋ ಸಿಬ್ಬಂದಿ. ಧರಿಸಿರುವ ಸಮವಸ್ತ್ರದ ಮೇಲೆಯೇ ಇವರಿಗೆ ರೀಲ್ಸ್ ಮಾಡಬೇಕೆಂಬ ಹುಕಿ ಬಂದಿದೆ. ತಮಿಳಿನ ಟ್ರೆಂಡಿಂಗ್ ಹಾಡು ಮೈನಾರು ವೆಟ್ಟಿ ಕಟ್ಟಿ ಹಾಡಿಗೆ ಮೆಟ್ರೋ ರೈಲಿನ ಮುಂದೆಯೇ ಹೆಜ್ಜೆ ಹಾಕಿದ್ದಾರೆ.

ಈಗಾಗಲೇ ಈ ವಿಡಿಯೋ ಅನ್ನು ಸುಮಾರು 30,000 ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಈ ಟ್ರೆಂಡ್​ ಅನ್ನು ಎಂದಿಗೂ ಮಿಸ್ ಮಾಡಿಕೊಳ್ಳಬೇಡಿ ಎನ್ನುತ್ತಿದ್ದಾರೆ ನೆಟ್ಟಿಗರು. ಕೊಚ್ಚಿ ಮೆಟ್ರೋ ಸಿಬ್ಬಂದಿ ಇದೇ ಮೊದಲೇನಲ್ಲ ಹೀಗೆ ನರ್ತಿಸಿರುವುದು. ಈ ಹಿಂದೆ ತಮಿಳಿನ ಎನಿಮಿ ಸಿನೆಮಾದ ಹಾಡೊಂದಕ್ಕೆ ಮಹಿಳಾ ಸಿಬ್ಬಂದಿಯೊಬ್ಬರು ಟಿಕೆಟ್​ ಕೌಂಟರ್​ ಮತ್ತು ಮೆಟ್ರೋ ಮೆಟ್ಟಿಲುಗಳ ಮೇಲೆ ಹೆಜ್ಜೆ ಹಾಕಿದ್ದರು.

ಇದನ್ನೂ ಓದಿ : Viral Video: ‘ಪಾಳಾ ಪಳ್ಳಿ ತಿರುಪಳ್ಳಿ’ ಹಾಡಿಗೆ ಹೆಜ್ಜೆ ಹಾಕಿದ ಕೇರಳದ ವೈದ್ಯರ ವಿಡಿಯೋ

ದಿನವಿಡೀ ಕೆಲಸದ ಮಧ್ಯೆ ಮುಳುಗಿ ಹೋಗುವ ಇವರಿಗೆ ಆಗೀಗ ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಉಲ್ಲಾಸದ ಅನುಭವವಾಗುತ್ತದೆ. ಕುಣಿಯಲಿ ಬಿಡಿ ಇದರಿಂದ ನಿಮಗೇನು ನಷ್ಟ? ತಕರಾರು ಎತ್ತಿದವರನ್ನು ಕೆಲ ನೆಟ್ಟಿಗರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : Viral Video: ಮೆಟ್ರೋ ಸ್ಟೇಷನ್​​​ನಲ್ಲಿ ಭೋಜ್‌ಪುರಿ ಹಾಡಿಗೆ ಸಕ್ಕತ್ತ್​​ ಸ್ಟೆಪ್​​ ಹಾಕಿದ ಮಹಿಳೆ

ಅಷ್ಟಕ್ಕೂ ಇಲ್ಲಿ ನಷ್ಟವಾಗಿರುವಂಥದ್ದು ಏನೂ ಇಲ್ಲ. ಈ ವಿಡಿಯೋ ನೋಡಿದ ಯಾರಿಗೂ ಉತ್ಸಾಹವೇ ಮೈವೆತ್ತಿರುತ್ತದೆ. ಹೌದು ತಾನೆ? ಈಗಾಗಲೇ ನಿಮಗಿದು ಅನುಭವಕ್ಕೆ ಬಂದಿರಲು ಸಾಕು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 10:18 am, Wed, 3 May 23

Web contact

TV9 Kannada

Read More
Follow Us