ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ 39 ವರ್ಷದ ವೀರೇಶ ಪಿ. ಗಾದಿಗನೂರ ಎಂಬುವವರು ಮೆಂಟಾಕ್ ಪರ್ವತಾರೋಹಣ ಮಾಡಿ ದಾಖಲೆ ಮಾಡಿದ್ಧಾರೆ. ಇವರು 2202ರ ಜನವರಿಯಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಕ್ತ ಸಾಲಿನ ಜೂನ್ನಲ್ಲಿ ಮೆಂಟಾಕ್ ಪರ್ವತಶ್ರೇಣಿಗಳನ್ನು ಇವರು ಪರ್ವತಾರೋಹಣ ಮಾಡಿದ್ದರು. ಕರ್ತವ್ಯದಲ್ಲಿ ನಿರತರಾಗಿದ್ದಾಗ ಹೊಸ ದಾರಿಗಳನ್ನು ಹುಡುಕುವುದರ ಕಡೆಗೆ ಇವರ ಆಸಕ್ತಿ ಇರುತ್ತಿತ್ತು. ಇದೇ ಮುಂದೆ ಅವರನ್ನು ಪರ್ವತಾರೋಹಣದೆಡೆ ಸೆಳೆಯಿತು.
ಮೂರು ದಿನಗಳಲ್ಲಿ ಮೂರು ಶಿಖರಗಳು ಸೇರಿದಂತೆ 11 ಮೆಂಟಾಕ್ ಪರ್ವತಶ್ರೇಣಿಗಳನ್ನು ಇವರು ಏರಿದ್ದಾರೆ. ಫಲವಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಇವರ ಸಾಧನೆಯನ್ನು ಮಾನ್ಯ ಮಾಡಿದೆ. ಈತನಕ 2017ರಲ್ಲಿ ಸಿಯಾಚಿನ್ನಲ್ಲಿ ಮೌಂಟ್ ಕಾಮೆಟ್, ಮೌಂಟ್ ಭಾಗೀರಥಿ, ಮೌಂಟ್ ಜೋಗಿನ್ ಸೇರಿದಂತೆ 39 ಪರ್ವತಗಳ ಆರೋಹಣ ಮಾಡಿದ್ದಾರೆ. 2017ರಲ್ಲಿ ಲಡಾಕ್, ಸ್ಟಾಕ್ ಕಾಂಗ್ರಿ ಪರ್ವತಾರೋಹಣವನ್ನು ನಾಲ್ಕು ದಿನಗಳಲ್ಲಿ ಇಬ್ಬರೊಂದಿಗೆ 6,000 ಮೀಟರ್ ಎತ್ತರದ 17 ಪರ್ವತಗಳ ಆರೋಹಣ ಮಾಡಿದ್ದಾರೆ. ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ನೋಬಲ್ ವರ್ಲ್ಡ್ ರೆಕಾರ್ಡ್ಸ್ ಮತ್ತು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಇದು ದಾಖಲಾಗಿದೆ.
ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ; ನಮ್ಮ ಕನಸುಗಳನ್ನು ತ್ಯಜಿಸುವುದೆಂದರೆ ನಮ್ಮನ್ನು ನಾವೇ ದಿವಾಳಿಗೆಬ್ಬಿಸಿಕೊಂಡಂತೆ
‘ನಾನು 2010ರಲ್ಲಿ ಪರ್ವತಾರೋಹಣ ತರಬೇತಿಗೆ ಸೇರಿದಾಗ ನನಗೆ ಈ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಆದರೆ ಕ್ರಮೇಣ ಇದು ಎಷ್ಟು ಸಾಹಸಮಯ ಎಂಬುದನ್ನು ಅರಿಗುಕೊಳ್ಳುತ್ತಾ ಹೋದೆ. ಈ ಪರ್ವತಾರೋಹಣ ಮಾಡಿ ತ್ರಿವರ್ಣ ಧ್ವಜ ಹಾರಿಸಿದಾಗ ನಿಜಕ್ಕೂ ಸಂತಸ ಮತ್ತು ಹೆಮ್ಮೆಯ ವಿಷಯ ಎನ್ನಿಸಿತು’ ಎಂದಿದ್ಧಾರೆ ವೀರೇಶ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:13 pm, Thu, 8 December 22