ಜೂನ್ 11 ರಂದು ‘ತನ್ನನ್ನು ತಾನು ಮದುವೆಯಾಗಬೇಕಿದ್ದ’ ಕ್ಷಮಾ 3 ದಿನ ಮೊದಲೇ ಮಂಗಳ ಕಾರ್ಯ ನೆರವೇರಿಸಿಕೊಂಡರು!!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 09, 2022 | 6:35 PM

ದೇವಸ್ಥಾನವೊಂದರಲ್ಲಿ ಮದುವೆಯಾದರೆ ಗಲಾಟೆಯಾಗಬಹುದೆನ್ನುವ ಕಾರಣಕ್ಕೆ ಆ ಯೋಚನೆ ಕೈ ಬಿಟ್ಟನೆಂದು ಕ್ಷಮಾ ಹೇಳುತ್ತಾರೆ. ಅವರ ಸ್ನೇಹಿತೆ ಯೆಶಾ ಚೋಕ್ಸಿ ಅನ್ನುವವರು, ‘ಆಕೆಯ ಧೈರ್ಯ ನಿಜಕ್ಕೂ ಶ್ಲಾಘನೀಯ,’ ಎಂದು ಹೇಳಿದರು.

ಜೂನ್ 11 ರಂದು ‘ತನ್ನನ್ನು ತಾನು ಮದುವೆಯಾಗಬೇಕಿದ್ದ’ ಕ್ಷಮಾ 3 ದಿನ ಮೊದಲೇ ಮಂಗಳ ಕಾರ್ಯ ನೆರವೇರಿಸಿಕೊಂಡರು!!
ಕ್ಷಮಾ ಬಿಂದು ಮತ್ತವರ ಮದುವೆ ಆಮಂತ್ರಣ ಪತ್ರಿಕೆ
Follow us on

ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿ ಇಡೀ ದೇಶದಲ್ಲಿ ಕುತೂಹಲ  ಮೂಡಿಸಿದ್ದ ಕ್ಷಮಾ ಬಿಂದು (Kshama Bindu) ಬುಧವಾರದಂದು ಶ್ರೀಮತಿ ಕ್ಷಮಾ ಆದರು! ಇದು ಹಿಂದೆ ಯಾವತ್ತೂ ನಡೆದಿರದ ಮತ್ತು ನಾವೆಲ್ಲ ಮೊದಲ ಬಾರಿಗೆ ಕೇಳಿಸಿಕೊಳ್ಳಿತ್ತಿರುವ ಹೊಸ ಕಾನ್ಸೆಪ್ಟ್ ಆಗಿದೆ. 24-ವರ್ಷ-ವಯಸ್ಸಿನ ಗುಜರಾತೀ (Gujarati) ಮಹಿಳೆ ತಮ್ಮನ್ನು ತಾವು ಮದುವೆಯಾಗಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅವರ ಮದುವೆಯಲ್ಲಿ ವಧು ಮತ್ತು ವರ ಎರಡೂ ಅವರೇ! ಇದನ್ನು ಇಂಗ್ಲಿಷ್ ಭಾಷೆಯಲ್ಲಿ ಸೊಲೊಗ್ಯಾಮಿ (Sologamy) ಅನ್ನುತ್ತಾರೆ. ಅಸಲಿಗೆ ಜೂನ್ 11 ರಂದು ಕ್ಷಮಾ ತಮ್ಮನ್ನು ತಾವು ಮದುವೆ ಮಾಡಿಕೊಳ್ಳಬೇಕಿತ್ತು. ಆದರೆ ಇದೊಂದು ವಿಚಿತ್ರ ಮತ್ತು ಅಪರೂಪದ ಮದುವೆ ಆಗಿದ್ದರಿಂದ ಯಾರಾದರೂ ಬಂದು ಅಡಚಣೆ ಉಂಟುಮಾಡಬಹುದು, ವಿವಾದ ಸೃಷ್ಟಿ ಮಾಡಬಹುದೆಂದು ಹೆದರಿ ಬುಧವಾರವೇ ಮದುವೆ ಮಾಡಿಕೊಂಡುಬಿಟ್ಟೆ ಅಂತ ಅವರು ಮಾಧ್ಯಮದವರಿಗೆ ಹೇಳಿದರು.

ಅವರ ಅಪ್ತ 10 ಸ್ನೇಹಿತೆಯರು ಮತ್ತು ಸಹೋದ್ಯೋಗಿಗಳು ಮಾತ್ರ ಭಾಗಿಯಾಗಿದ್ದ ಮದುವೆಯನ್ನು ಯಾವುದೇ ಸದ್ದು ಗದ್ದಲವಿಲ್ಲದೆ ಪೂರೈಸಲಾಯಿತಂತೆ. ಆದರೆ ಮದುವೆಯ ಎಲ ವಿಧಿವಿಧಾನಗಳು (ಫೇರಾ, ಮೆಹಂದಿ, ಸಂಗೀತ್) ಎಲ್ಲ ನಡೆದವು. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಕ್ಷಮಾ, ‘ಕೊನೆಗೂ ನನ್ನ ಮದುವೆ ನೆರವೇರಿದೆ, ನನ್ನ ಸಂತೋಷಕ್ಕೆ ಪಾರವೇ ಇಲ್ಲ, ನಾನೀಗ ವಿವಾಹಿತ ಮಹಿಳೆ,’ ಎಂದು ಉದ್ಗರಿಸಿದ್ದಾರೆ.

ಅವರ ವಿವಾಹ ವಿಧಿಗಳು ಕೇವಲ 40 ನಿಮಿಷಗಳಲ್ಲಿ ಮುಗಿದು ಹೋದವು, ‘ಬೇರೆ ವಧುಗಳ ಹಾಗೆ ನಾನೇನೂ ತವರು ಮನೆ ತೊರೆದು ಗಂಡನ ಮನೆಗೆ ಹೋಗಬೇಕಿರಲಿಲ್ಲ,’ ಎಂದು ಕ್ಷಮಾ ಹೇಳಿದರು.

ತನ್ನ ಹಾಗೆ ಮಹಿಳೆಯೊಬ್ಬಳು ತನ್ನನ್ನು ತಾನು ಮದುವೆಯಾಗಿರುವ ಉದಾಹರಣೆ ಭಾರತಲ್ಲಿ ಇದೆಯೇ ಅಂತ ಬಹಳಷ್ಟು ಹುಡುಕಾಡಿದೆ, ಆದರೆ ಒಂದೇ ಒಂದು ನಿದರ್ಶನ ಸಿಗಲಿಲ್ಲ,’ ಎಂದು ಕ್ಷಮಾ ಹೇಳಿದರು. ಹಾಗಾಗಿ ಭಾರತ ದೇಶದಲ್ಲಿ ತನ್ನದು ‘ಸ್ವಂತ ಮದುವೆಯ’ ಮೊದಲ ಪ್ರಕರಣವಾಗಿ ಗುರುತಿಸಿಕೊಳ್ಳಲಿದೆ ಮತ್ತು ಇದನ್ನು ಆರಂಭಿಸಿದ ಹಿರಿಮೆ ನನಗೆ ದಕ್ಕುತ್ತದೆ ಎಂದು ಅವರು ಹೇಳಿದ್ದಾರೆ.

ಸೊಲೊಗ್ಯಾಮಿಯ ಮಹತ್ತರವನ್ನು ವಿವರಿಸಿದ ಕ್ಷಮಾ ಇದು ತಮ್ಮೆಡೆಗಿನ ಬದ್ಧತೆ ಮತ್ತು ತಮ್ಮನ್ನು ತಾವು ಅಂಗೀಕರಿಸಿಕೊಳ್ಳವುದರ ದ್ಯೋತಕವಾಗಿದೆ ಎಂದರು. ತಮ್ಮ ಮದುವೆ ಇತರ ಮದುವೆಗಳಿಗಿಂತ ಭಿನ್ನವಾಗಿಲ್ಲ ಎಂದು ಹೇಳುವ ಅವರು ಜನ ಯಾರದಾದರೂ ಪ್ರೀತಿಯಲ್ಲಿ ಬೀಳುವ ಹಾಗೆ ನಾನು ಸಹ ನನ್ನ ಪ್ರೀತಿ ಪಾಶದಲ್ಲಿ ಸಿಲುಕಿದ್ದೇನೆ ಎಂದರು. ನನ್ನ ಪ್ರೇಮಪಾಶದಲ್ಲಿ ನಾನು ಸಿಲುಕಿರುವುದು ಅಸಂಬದ್ಧ ಅಂತ ಕೆಲವರಿಗೆ ಅನಿಸಬಹುದು ಅಂತ ಕ್ಷಮಾ ಹೇಳಿದರು.

ದೇವಸ್ಥಾನವೊಂದರಲ್ಲಿ ಮದುವೆಯಾದರೆ ಗಲಾಟೆಯಾಗಬಹುದೆನ್ನುವ ಕಾರಣಕ್ಕೆ ಆ ಯೋಚನೆ ಕೈ ಬಿಟ್ಟನೆಂದು ಕ್ಷಮಾ ಹೇಳುತ್ತಾರೆ. ಅವರ ಸ್ನೇಹಿತೆ ಯೆಶಾ ಚೋಕ್ಸಿ ಅನ್ನುವವರು, ‘ಆಕೆಯ ಧೈರ್ಯ ನಿಜಕ್ಕೂ ಶ್ಲಾಘನೀಯ,’ ಎಂದು ಹೇಳಿದರು.
ಮುಕ್ತ ಮನಸ್ಸಿನವರಾಗಿರುವ ತಂದೆ ತಾಯಿಗಳು ತನಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಕ್ಷಮಾ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 6:33 pm, Thu, 9 June 22