ಚಿರತೆ ಮತ್ತು ಬೆಕ್ಕಿನ ನಡುವೆ ಜಟಾಪಟಿ; ಬುದ್ಧಿವಂತಿಕೆಯಿಂದ ಚಿರತೆಯನ್ನು ಬಾವಿಗೆ ನೂಕಿದ ಬೆಕ್ಕಿನ ಶೌರ್ಯವನ್ನು ವಿಡಿಯೋದಲ್ಲೇ ನೋಡಿ

Viral Video: ಚಿರತೆ ಮತ್ತು ಬೆಕ್ಕಿನ ನಡುವಿನ ಜಟಾಪಟಿಯ ವಿಡಿಯೋ ನೋಡಲು ಮಜವಾಗಿದೆ. ನೋಡಲು ಚಿಕ್ಕದಾಗಿದ್ದರೂ ಸಹ ಯಾವುದಕ್ಕೂ ಕಮ್ಮಿಯಿಲ್ಲ ಎನ್ನುವ ಬೆಕ್ಕೊಂದು ಚಿರತೆಯೊಂದಿಗೆ ಮುಖಾಮುಖಿಯಾಗಿದೆ.

ಚಿರತೆ ಮತ್ತು ಬೆಕ್ಕಿನ ನಡುವೆ ಜಟಾಪಟಿ; ಬುದ್ಧಿವಂತಿಕೆಯಿಂದ ಚಿರತೆಯನ್ನು ಬಾವಿಗೆ ನೂಕಿದ ಬೆಕ್ಕಿನ ಶೌರ್ಯವನ್ನು ವಿಡಿಯೋದಲ್ಲೇ ನೋಡಿ
ಚಿರತೆ ಮತ್ತು ಬೆಕ್ಕಿನ ನಡುವೆ ಜಟಾಪಟಿ
Edited By:

Updated on: Sep 07, 2021 | 1:51 PM

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ನಗು ತರಿಸುವ ವಿಡಿಯೋಗಳು ಹೆಚ್ಚು ಮನಗೆಲ್ಲುತ್ತವೆ. ನಿಜವಾಗಿಯೂ ಆಶ್ಚರ್ಯಚಕಿತರಾಗಿ ನೋಡುವಂತಹ ವಿಡಿಯೋಗಳು ಅಚ್ಚರಿ ಮೂಡಿಸುತ್ತವೆ. ಪ್ರಾಣಿಗಳ ನಡುವಿನ ತುಂಟಾಟ, ಕೀಟಲೆ ಜತೆಗೆ ಹಾಸ್ಯದ ಕೆಲವು ಪ್ರಸಂಗಗಳು ಜನರಿಗೆ ಹೆಚ್ಚು ಇಷ್ಟವಾಗುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಚಿರತೆ ಮತ್ತು ಬೆಕ್ಕಿನ ನಡುವಿನ ಜಟಾಪಟಿಯ ವಿಡಿಯೋ ನೋಡಲು ಮಜವಾಗಿದೆ. ನೋಡಲು ಚಿಕ್ಕದಾಗಿದ್ದರೂ ಸಹ ಯಾವುದಕ್ಕೂ ಕಮ್ಮಿಯಿಲ್ಲ ಎನ್ನುವ ಬೆಕ್ಕೊಂದು ಚಿರತೆಯೊಂದಿಗೆ ಮುಖಾಮುಖಿಯಾಗಿದೆ. ಭರ್ಜರಿ ಫಯಟ್ ನಡೆಯುತ್ತಿದೆ. ಬಾವಿಯ ಅಂಚಿನಲ್ಲಿ ನಡೆಯುತ್ತಿರುವ ಬೆಕ್ಕು, ಚಿರತೆಯ ಫೈಟ್ನಲ್ಲಿ ಯಾರು ಗೆಲ್ಲುತ್ತಾರೆ ಎಬುದು ಕುತೂಹಲ ಕೆರಳಿಸುವಂತಿದೆ. ವಿಡಿಯೋ ಇದೆ ನೀವೂ ನೋಡಿ.

ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಚಿರತೆಯನ್ನು ವಿಡಿಯೋದಲ್ಲಿ ನೋಡಬಹುದು. ಚಾಲಾಕಿ ಬೆಕ್ಕು ದೈತ್ಯಾಕಾರದ ಚಿರತೆಯನ್ನೇ ಬಾವಿಗೆ ಬೀಳಿಸಿದೆ. ಚುರುಕುತನದಿಂದ ಹಾರಿ ತಪ್ಪಿಸಿಕೊಳ್ಳುತ್ತಿರುವ ಬೆಕ್ಕಿನ ಬುದ್ಧಿವಂತಿಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಮಹಾರಾಷ್ಟ್ರದ ನಾಸಿಕ್​ನಲ್ಲಿ ನಡೆದಿದೆ. ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಚಿರತೆ ಬಾವಿಯಲ್ಲಿ ಬಿದ್ದಿತು. ನಂತರ ಚಿರತೆಯನ್ನು ರಕ್ಷಿಸಲಾಗಿದೆ. ಅದರ ವಾಸಸ್ಥಾನಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ ಎಂದು ನಾಸಿಕ್ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಂಕಜ್ ಎಎನ್ಐ ಸುದ್ದಿ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು 1 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬೆಕ್ಕಿನ ಶೌರ್ಯಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ. ಬೆಕ್ಕು ಮನುಷ್ಯರಿಗಿಂತಲೂ ಧೈರ್ಯಶಾಲಿ ಎಂದು ಓರ್ವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

Viral Video: ಬಾಲಕಿಯ ಸ್ಟಂಟ್​ ನೋಡಿ ಮೂಳೆ ಇದೆಯೋ? ಇಲ್ಲವೋ ಎಂದು ಪ್ರಶ್ನಿಸಿದ ನೆಟ್ಟಿಗರು; ವಿಡಿಯೋ ನೋಡಿ

Viral Video: ಚಿಟ್ಟೆಗಳ ಜತೆ ಮುದ್ದು ನಾಯಿಮರಿಯ ಆಟ; ಜನ ಮೆಚ್ಚಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್

( Leopard chasing cat and falls into well video goes viral )