Video: ಕೊನೆಗೂ ಸ್ವಾತಂತ್ರ್ಯ ಸಿಕ್ತು; ನದಿ ದಾಟಿ ಓಡುತ್ತಾ ಕಾಡು ಸೇರಿದ ಚಿರತೆ

ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯ ಭಯಾನಕವಾಗಿದ್ದರೆ, ಇನ್ನೂ ಕೆಲವು ವಿಡಿಯೋ ತುಂಬಾನೇ ಸುಂದರವಾಗಿರುತ್ತದೆ. ಅಂತಹದ್ದೊಂದು ದೃಶ್ಯ ಇದೀಗ ವೈರಲ್‌ ಆಗಿದೆ ರಕ್ಷಿಸಲ್ಪಟ್ಟ ಚಿರತೆಯೊಂದು ಕೊನೆಗೂ ಸ್ವಾತಂತ್ರ್ಯ ಸಿಕ್ಕಿತೆಂದು ಈಜುತ್ತಾ ನದಿ ದಾಟಿ ಖುಷಿಖುಷಿಯಾಗಿ ಓಡುತ್ತಾ ಕಾಡು ಸೇರಿದ್ದು, ಈ ಅದ್ಭುತ ದೃಶ್ಯ ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Video: ಕೊನೆಗೂ ಸ್ವಾತಂತ್ರ್ಯ ಸಿಕ್ತು; ನದಿ ದಾಟಿ ಓಡುತ್ತಾ ಕಾಡು ಸೇರಿದ ಚಿರತೆ
ನದಿಯಲ್ಲಿ ಈಜುತ್ತಾ ದಡ ಸೇರಿದ ಚಿರತೆ

Updated on: Jul 17, 2025 | 12:17 PM

ಪ್ರಾಣಿಗಳ, ಅದರಲ್ಲೂ ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಚಿರತೆ (Leopard), ಆನೆ, ಹುಲಿ, ಸಿಂಹ ಹೀಗೆ ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಕಾಣ ಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಅದ್ಭುತ ದೃಶ್ಯವೊಂದು ವೈರಲ್‌ ಆಗಿದ್ದು, ರಕ್ಷಿಸಲ್ಪಟ್ಟ ಚಿರತೆಯೊಂದು ಕೊನೆಗೂ ಸ್ವಾತಂತ್ರ್ಯ ಸಿಕ್ಕಿತೆಂದು ನದಿಯನ್ನು ಈಜುತ್ತಾ, ದಡ ಸೇರಿ ಖುಷಿಯಲ್ಲಿ ಕಾಡು ಸೇರಿದೆ. ಈ ಅದ್ಭುತ ದೃಶ್ಯವನ್ನು ಭಾರತೀಯ ಅರಣ್ಯಾಧಿಕಾರಿ ಪರ್ವೀನ್‌ ಕಸ್ವಾನ್‌ (Parveen Kaswan, IFS)  ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈಜುತ್ತಾ ದಡ ಸೇರಿ ಕಾಡಿನ ಕಡೆಗೆ ಓಡಿ ಹೋದ ಚಿರತೆ:

ರಕ್ಷಿಸಲ್ಪಟ್ಟಿದ್ದ ಚಿರತೆಯೊಂದನ್ನು ಬಿಡುಗಡೆಗೊಳಿಸಿದ ಬಳಿಕ ಅದು ತನಗೆ ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿ ಈಜುತ್ತಾ ನದಿ ದಾಟಿ, ದಡವನ್ನು ಸೇರಿ ಓಡುತ್ತಾ  ಕಾಡು ಸೇರಿದ್ದು, ಈ ಅದ್ಭುತ ದೃಶ್ಯ ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ
ಬೆಕ್ಕು ಎಂದುಕೊಂಡು ಚಿರತೆ ಮೇಲೆ ನಾಯಿಗಳ ದಾಳಿ!
ಮರಳಿ ಅಮ್ಮನ ಮಡಿಲು ಸೇರಿದ ಮರಿಯಾನೆಯ ಖುಷಿ ನೋಡಿ
ಸಾವಿನಿಂದ ತಪ್ಪಿಸಿಕೊಳ್ಳಲು ಹಾವಿನ ತಲೆಯ ಮೇಲೆ ಕುಳಿತ ಇಲಿ
ಉದ್ಯಾನವನಕ್ಕೆ ಭೇಟಿ ನೀಡಿದ ಮಹಿಳೆಯ ಕೆನ್ನೆಗೆ ಚುಂಬಿಸಿದ ಮರಿಯಾನೆ

ಚಿರತೆ ಕಾಡಿನ ಕಡೆಗೆ ಸರಿಯಾಗಿ ಹೋಗುತ್ತಿದೆಯೇ ಎಂದು ಮೇಲ್ವಿಚಾರಣೆ ಮಾಡಲು ಡ್ರೋನ್‌ ಕ್ಯಾಮೆರಾವನ್ನು ಬಳಸಲಾಗಿದ್ದು, ಈ ಕ್ಯಾಮೆರಾದಲ್ಲಿ ಚಿರತೆ ಖುಷಿ ಖುಷಿಯಾಗಿ ತನ್ನ ಗೂಡು ಸೇರುವ ಅದ್ಭುತ ದೃಶ್ಯವನ್ನು ಕಾಣಬಹುದು.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಈ ದೃಶ್ಯವನ್ನು ಭಾರತೀಯ ಅರಣ್ಯಾಧಿಕಾರಿ ಪರ್ವೀನ್‌ ಕಸ್ವಾನ್‌ (Parveen Kaswan, IFS) ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಚಿರತೆಯೊಂದು ನದಿಯಲ್ಲಿ ಈಜುತ್ತಾ ದಡ ಸೇರುವ ದೃಶ್ಯವನ್ನು ಕಾಣಬಹುದು. ರಕ್ಷಿಸಲ್ಪಟ್ಟಿದ ಚಿರತೆಯನ್ನು ಬಿಡುಗಡೆಗೊಳಿಸಿದ ಬಳಿಕ ಅದು ನದಿ ದಾಟಿ ಖುಷಿಯಲ್ಲಿ ಓಡುತ್ತಾ ಕಾಡನ್ನು ಸೇರಿದೆ.

ಇದನ್ನೂ ಓದಿ: ಬೆಕ್ಕು ಎಂದುಕೊಂಡು ಚಿರತೆ ಮೇಲೆ ನಾಯಿಗಳ ದಾಳಿ!

ಜುಲೈ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಚಿರತೆ ಡ್ರೋನ್‌ನಿಂದ ಭಯಭೀತವಾಗಿರುವಂತೆ ಕಾಣುತ್ತಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹುಲಿ ಹಾಗೂ ಜಾಗ್ವಾರ್‌ಗಳಂತೆ ಚಿರತೆಗಳು ಅಷ್ಟಾಗಿ ಈಜುವುದಿಲ್ಲ. ಅನಿವಾರ್ಯವಿದ್ದರೆ ಮಾತ್ರ ಅವು ಈಜುತ್ತವೆ, ಈ ಅದ್ಭುತ ದೃಶ್ಯವನ್ನು ನೋಡಿ ಖುಷಿಯಾಯಿತುʼ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ