Viral Video: ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಮಿಂಚಿನ ಹೊಡೆತ; ಎಂಟು ತಿಂಗಳ ಮಗು ಪ್ರಾಣಾಪಾಯದಿಂದ ಪಾರು!

| Updated By: shruti hegde

Updated on: Jul 02, 2021 | 12:15 PM

ಘಟನೆ ಜೂನ್​ 25ನೇ ತಾರೀಕಿನಂದು ನಡೆದಿದೆ. ಮಿಂಚಿನ ಬಡಿತಕ್ಕೆ ಒಳಗಾದ ಕಾರಿನ ಹಿಂಬದಿಯಲ್ಲಿ ಬರುತ್ತಿದ್ದ ಜೀಪಿನಲ್ಲಿದ್ದ ಓರ್ವರು ವಿಡಿಯೋ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

Viral Video: ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಮಿಂಚಿನ ಹೊಡೆತ; ಎಂಟು ತಿಂಗಳ ಮಗು ಪ್ರಾಣಾಪಾಯದಿಂದ ಪಾರು!
ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರಿಗೆ ಮಿಂಚಿನ ಹೊಡೆತ
Follow us on

ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಮಿಂಚಿನ ಹೊಡೆತ ಬಿದ್ದ ಭಯಾನಕ ಘಟನೆಯೊಂದು ನಡೆದಿದೆ. ಕಾರು ಕನ್ಸಾಸ್​ನ ​ಹೆದ್ದಾರಿಯಲ್ಲಿ ಸಾಗುತ್ತಿತ್ತು. ಗುಡುಗು ಮಿಂಚಿನ ಆರ್ಭಟ ಜೋರಾಗಿಯೇ ಇತ್ತು. ಕಾರಿನಲ್ಲಿದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಈ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.

ಘಟನೆ ಜೂನ್​ 25ನೇ ತಾರೀಕಿನಂದು ನಡೆದಿದೆ. ಮಿಂಚಿನ ಬಡಿತಕ್ಕೆ ಒಳಗಾದ ಕಾರಿನ ಹಿಂಬದಿಯಲ್ಲಿ ಬರುತ್ತಿದ್ದ ಜೀಪಿನಲ್ಲಿದ್ದ ಓರ್ವರು ವಿಡಿಯೋ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಕಾರಿನಲ್ಲಿ 5 ಪ್ರಯಾಣಿಕರಿದ್ದರು. ಅವರಲ್ಲಿ ಎಂಟು ತಿಂಗಳ ಮಗು, ಮೂರು ವರ್ಷದ ಮಕ್ಕಳು ಹಾಗೂ ಒಂದುವರೆ ವರ್ಷದ ಮಗು ಕೂಡಾ ಇತ್ತು. ಕಾರಿನಲ್ಲಿದ್ದ ಪ್ರಯಾಣಿಕರೆಲ್ಲರೂ ಕೂಡಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ. 13 ಸೆಕೆಂಡುಗಳ ವೈರಲ್​ ಕ್ಲಿಪ್​ನಲ್ಲಿ ಗಮನಿಸುವಂತೆ ಜೋರಾಗಿ ಮಳೆ ಬರುತ್ತಿರುವುದು, ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿರುವುದು ಹಾಗೂ ಅತಿಯಾದ ಮಳೆಯಿಂದಾಗಿ ವಾತಾವರಣ ಕಪ್ಪಾಗಿರುವುದು ಗೋಚರಿಸುತ್ತಿದೆ.

ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ ಘಟನೆ ಒಮ್ಮೆಲೆ ಬೆಜ್ಜಿಬೀಳಿಸುವಂತಿದೆ. ಘಟನೆ ನಡೆದ ತಕ್ಷಣವೇ ಮಕ್ಕಳು ಸುರಕ್ಷಿತರಾಗಿದ್ದಾರೆಯೇ ಎಂದು ವಿಚಾರಿಸಿದೆವು. ಎಲ್ಲಾ ಸುರಾಕ್ಷಿತರಾಗಿದ್ದರು ಆಗ ಕೊಂಚ ಸಮಾಧಾನವಾಯಿತು ಎಂದು ಹಿಂದಿನ ಜೀಪಿನಲ್ಲಿ ಕುಳಿತು ವಿಡಿಯೋ ಮಾಡುತ್ತಿದ್ದ ಪ್ರಯಾಣಿಕ ಹೋಬಿ ಸುದ್ದಿ ಮಾಧ್ಯಮದ ಜತೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

ಸಿಡಿಲು ಬಡಿತ ಹೆಚ್ಚಾಗಿದೆ.. ಏನು ಮಾಡಬೇಕು, ಏನು ಮಾಡಬಾರದು?

Viral Video: ಮದುವೆ ದಿನ ಪತ್ನಿಯ ಜುಟ್ಟು ಹಿಡಿದು ತಲೆ ತಿರುಗಿಸಿ ಬಾಯಿಗೆ ಲಾಡು ತುರುಕಿದ ಪತಿ; ವಿಡಿಯೋ ನೋಡಿ ಕೋಪಗೊಂಡ ನೆಟ್ಟಿಗರು