Delivery Agent: ನಿಗದಿತ ಸಮಯಕ್ಕಿಂತ ತಡವಾಗಿ ಫುಡ್ ಡೆಲಿವರಿಯಾದಾಗ ಗ್ರಾಹಕರು ಅನುಮಾನದಿಂದ ಸ್ವಿಗ್ಗಿ ಡೆಲಿವರಿ ಏಜೆಂಟ್ನನ್ನು (Swiggy) ವಿಚಾರಿಸಿದ್ದಾರೆ. ಆಗ ಆತ, ಕ್ಷಮಿಸಬೇಕು, ತನ್ನ ಬಳಿ ಓಡಾಟಕ್ಕೆ ದ್ವಿಚಕ್ರವಾಹನ ಇಲ್ಲವೆಂದೂ ಮತ್ತು ತಾನು ಈ ಡೆಲಿವರಿಗಾಗಿ 3 ಕಿ.ಮೀ ನಡೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾನೆ. ಆಗ ಗ್ರಾಹಕರು ಅವನ ಬಗ್ಗೆ ಕಾಳಜಿವಹಿಸಿ ಅವನ ಪೂರ್ವಾಪರದ ಬಗ್ಗೆ ಕೇಳಿದ್ಧಾರೆ. ಅಷ್ಟೇ ಅಲ್ಲ ಹೊಸ ಉದ್ಯೋಗವನ್ನು ಪಡೆಯುವಲ್ಲಿ ಸಹಾಯವನ್ನೂ ಮಾಡಿದ್ದಾರೆ.
ಫ್ಲ್ಯಾಶ್ ಎಂಬ ಟೆಕ್ ಕಂಪೆನಿಯ ಮಾರ್ಕೆಟಿಂಗ್ ಮ್ಯಾನೇಜರ್ ಪ್ರಿಯಾಂಶಿ ಚಂದೇಲ್, ಸ್ವಿಗ್ಗಿ ಮೂಲಕ ಐಸ್ಕ್ರೀಮ್ ಆರ್ಡರ್ ಮಾಡಿದ್ದಾರೆ. ಆಗ ಡೆಲಿವರಿ ಏಜೆಂಟ್ ಸಾಹಿಲ್ ಸಿಂಗ್ ಬಹಳ ತಡವಾಗಿಯೇ ಅದನ್ನು ತಲುಪಿಸಿದಾಗ ಕಾರಣವನ್ನು ಕೇಳಿದ್ದಾರೆ. ತನ್ನ ಫ್ಲ್ಯಾಟ್ಮೇಟ್ನಿಂದಾಗಿ ನಾನು ಸಾಲಕ್ಕೆ ಬಿದ್ದು ಆರ್ಥಿಕ ಸಂಕಷ್ಟದಲ್ಲಿದ್ದೇನೆ. ಹಾಗಾಗಿ ನಾನೀಗ ನಡೆದುಕೊಂಡೇ ಫುಡ್ ಡೆಲಿವರಿ ಮಾಡುತ್ತಿದ್ದೇನೆ ಎಂದಿದ್ದಾನೆ. ಅವನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಆಕೆ, ಅವನಿಗೆ ಹೊಸ ಕೆಲಸ ಕೊಡಿಸುವ ಬಗ್ಗೆ ಆಲೋಚಿಸಿದ್ಧಾರೆ.
ಇದನ್ನೂ ಓದಿ : Viral Video: ಅಗ್ನಿಶಾಮಕ ಸಿಬ್ಬಂದಿ ಇವರನ್ನೆಲ್ಲ ಒದ್ದು ಬೀಳಿಸುತ್ತಿರುವುದು ಈ ಕಾರಣಕ್ಕೆ
‘ಬಿ.ಟೆಕ್ ಪದವೀಧರನಾದ ನಾನು ಬೈಜೂಸ್ (Byju’s) ಮತ್ತು ನಿಂಜಾಕಾರ್ಟ್ನ (Ninjacart) ಹಳೆಯ ಉದ್ಯೋಗಿ. ಅಲ್ಲಿ ಕೆಲಸ ಕಳೆದುಕೊಂಡ ನಂತರ ಸ್ವಿಗ್ಗೀ ಕಂಪೆನಿಯಲ್ಲಿ ಡೆಲಿವರಿ ಏಜೆಂಟ್ನಾಗಿ ಸೇರಿಕೊಂಡೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಒಂದು ಡೆಲಿವರಿಗೆ ರೂ. 20-25 ಕಮೀಷನ್ ಪಡೆಯುತ್ತಿದ್ದೇನೆ. ನನ್ನ ಬಳಿ ಬೈಕ್ ಕೂಡ ಇಲ್ಲ. ವಾರದಿಂದ ನಾನು ಊಟ ಮಾಡದೆ ಕೇವಲ ನೀರು ಮತ್ತು ಚಹಾದ ಮೇಲೆ ಬದುಕುತ್ತಿದ್ದೇನೆ. ಈ ಮೊದಲು ನಾನು ತಿಂಗಳಿಗೆ ರೂ. 25,000 ಗಳಿಸುತ್ತಿದ್ದೆ. ನನಗೀಗ 30 ವರ್ಷ. ನನಗೂ ವಯಸ್ಸಾದ ತಂದೆತಾಯಿಯರಿದ್ದಾರೆ. ಅವರಿಂದ ಹಣ ಕೇಳುವುದು ಸಾಧ್ಯವಿಲ್ಲ’ ಎಂದಿದ್ದಾನೆ.
ಇದನ್ನೂ ಓದಿ : Rahul Gandhi: ಅಮೆರಿಕನ್ ಟ್ರಕ್ ಯಾತ್ರಾ; ವಾಷಿಂಗ್ಟನ್ ಡಿಸಿಯಿಂದ ನ್ಯೂಯಾರ್ಕ್ಗೆ ರಾಹುಲ್ ಪ್ರಯಾಣ
ಆಗ ಪ್ರಿಯಾಂಶಿ ಸಾಹಿಲ್ಗೆ ಕುಡಿಯಲು ನೀರು ಕೊಟ್ಟು ರೂ. 500 ಕೈಗಿಟ್ಟಿದ್ದಾರೆ. ನಂತರ ಅವರು, ‘ಆಫೀಸ್ ಬಾಯ್, ಅಡ್ಮಿನ್, ಕಸ್ಟಮರ್ ಸಪೋರ್ಟ್ ಇತ್ಯಾದಿ ಕೆಲಸಗಳಿಗೆ ಅವಕಾಶವಿದ್ದರೆ ದಯವಿಟ್ಟು ಇವರಿಗೆ ಸಹಾಯ ಮಾಡಿ’ ಎಂದು ಲಿಂಕ್ಡ್ಇನ್ನಲ್ಲಿ ಪೋಸ್ಟ್ ಹಾಕಿದ್ಧಾರೆ. ಜೊತೆಗೆ, ಆತನ ಭಾವಚಿತ್ರ, ರೆಸ್ಯೂಮ್ ಮತ್ತು ಶೈಕ್ಷಣಿಕ ಅಂಕಪಟ್ಟಿಗಳ ಪುರಾವೆಗಳನ್ನೂ ಲಗತ್ತಿಸಿದ್ದಾರೆ.
ಇದನ್ನೂ ಓದಿ : Viral Video: ಸೋರುತಿಹುದು ರೈಲುಮಾಳಿಗೀ; ”ವಂದೇಭಾರತ್”ನ ಪ್ರಯಾಣಿಕರಿಗೆ ಉಚಿತ ಶವರ್
ಈ ಪೋಸ್ಟ್ಗೆ ಸುಮಾರು 14,000 ದಷ್ಟು ಪ್ರತಿಕ್ರಿಯೆಗಳು ಒದಗಿವೆ. 300ಕ್ಕೂ ಹೆಚ್ಚು ಜನರು ಈ ಪೋಸ್ಟ್ ಅನ್ನು ಮರುಹಂಚಿಕೆ ಮಾಡಿಕೊಂಡಿದ್ದಾರೆ. ನಂತರ ಸಾಹಿಲ್ಗೆ ಕೆಲಸ ಸಿಕ್ಕಿದೆ, ಸಹಾಯ ಮಾಡಿದ ಲಿಂಕ್ಡಿನ್ ಸಮುದಾಯಕ್ಕೆ ಧನ್ಯವಾದ ಎಂದು ಪ್ರಿಯಾಂಶಿ ಮತ್ತೊಂದು ಪೋಸ್ಟ್ ಅಪ್ಡೇಟ್ ಮಾಡಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:06 pm, Thu, 15 June 23