Viral Video : ಎರಡು ಸಿಂಹಗಳು ಆರಾಮಾಗಿ ರಸ್ತೆ ಮೇಲೆ ಮಲಗಿ ವಿರಮಿಸುತ್ತಿವೆ. ಇನ್ನೊಂದು ಸಿಂಹ ಎಂಥ ಲೀಲಾಜಾಲವಾಗಿ ಬಂದು ಅವುಗಳೊಂದಿಗೆ ಮಲಗುತ್ತದೆ ನೋಡಿ. ಜೀಪುಗಳಲ್ಲಿರುವ ಮಂದಿಗೆ ಇಂಥ ರೋಚಕವಾದ ದೃಶ್ಯ ನೋಡುವುದು ಹಬ್ಬವಲ್ಲದೆ ಇನ್ನೇನು!? ತುಪ್ಪವು ತಟ್ಟೆಗೇ ಬಂದು ಬಿದ್ದಂತೆ. ವನ್ಯಜೀವಿ ಪ್ರಿಯರಾದ ನೀವು ಇಂಥ ವಿಡಿಯೋಗಳಿಗಾಗಿ ಕಾಯುತ್ತಿರುತ್ತೀರಿ ಎಂದು ನಮಗೆ ಗೊತ್ತು! ನೋಡಿ ಹೇಗಿದೆ ಹೇಳಿ.
Roadblock in Tanzania.. pic.twitter.com/vhZXIyiCn6
ಇದನ್ನೂ ಓದಿ— Buitengebieden (@buitengebieden) October 30, 2022
ಈ ವಿಡಿಯೋ ಅನ್ನು @buitengebieden ಎಂಬ ಖಾತೆಯು ಟ್ವೀಟ್ ಮಾಡಿದೆ. ಮಣ್ಣಿನ ರಸ್ತೆಯಲ್ಲಿ ಥಣ್ಣಗೆ ತಮ್ಮ ಪಾಡಿಗೆ ಮಲಗಿವೆ ಈ ಸಿಂಹಗಳು. ಪ್ರವಾಸಿಗರು ಅಚ್ಚರಿ ಭಯ ಖುಷಿಯಿಂದ ಸ್ವಲ್ಪೇ ದೂರದಲ್ಲಿ ನಿಂತು ನೋಡುತ್ತಿದ್ದಾರೆ. ಇದನ್ನು ತಾಂಜಾನಿಯಾದಲ್ಲಿ ಚಿತ್ರೀಕರಿಸಲಾಗಿದೆ. ಈಗಾಗಲೇ ಈ ವಿಡಿಯೋ 11 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಇದು ಪಡೆದುಕೊಂಡಿದೆ. ನೆಟ್ಟಿಗರು ಇದನ್ನು ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ.
ಎಂಥ ಅದ್ಭುತ ದೃಶ್ಯ ಇದು. ಈ ತನಕ ನಾನು ನೋಡಿರಲೇ ಇಲ್ಲ ಎಂದಿದ್ದಾರೆ ಒಬ್ಬರು. ಅಮೆರಿಕಾ, ಆಫ್ರಿಕಾ ಮುಂತಾದೆಡೆ ರಸ್ತೆಗಳ ಮೇಲೆ ಹೀಗೆ ಮಲಗಿ ವಿರಮಿಸುತ್ತಿರುವ ಸಿಂಹಗಳ ಫೋಟೋ, ವಿಡಿಯೋಗಳನ್ನು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
ಹೀಗೆ ಜಗತ್ತಿನ ಪರಿವೆ ಇಲ್ಲದೆ ವಿರಮಿಸಲು ಎಲ್ಲರಿಗೂ ಸಾಧ್ಯವಾಗುವುದೆ? ್
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:29 pm, Tue, 1 November 22