Video: ಆಧಾರ್‌ ಕಾರ್ಡ್​ಗೆ ಫೋಟೋ ಕ್ಲಿಕ್ಕಿಸುವಾಗ ಮಾಡೆಲ್‌ಗಳಂತೆ ಮುದ್ದು ಮುದ್ದಾಗಿ ಪೋಸ್‌ ನೀಡಿದ ಪುಟ್ಟ ಪೋರಿ

ಸೋಷಿಯಲ್‌ ಮೀಡಿಯಾದಲ್ಲಿ ದಿನನಿತ್ಯ ಹಲವಾರು ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅದರಲ್ಲಿ ಕೆಲವು ವಿಡಿಯೋ ದೃಶ್ಯಾವಳಿಗಳು ಮನಸ್ಸಿಗೆ ಬಹಳ ಖುಷಿ ಕೊಡುತ್ತವೆ. ಅದರಲ್ಲೂ ಈ ಪುಟಾಣಿ ಮಕ್ಕಳ ವಿಡಿಯೋಗಳನ್ನು ನೋಡುವುದೇ ಚೆಂದ. ಇದೀಗ ಅಂತಹದೇ ವಿಡಿಯೋವೊಂದು ವೈರಲ್‌ ಆಗಿದ್ದು, ಆಧಾರ್‌ ಕಾರ್ಡ್‌ ಫೋಟೋ ಕ್ಲಿಕ್ಕಿಸುವಾಗ ಪುಟಾಣಿ ಬಾಲೆ ಮಾಡೆಲ್‌ಗಳೆಂತೆ ಪೋಸ್‌ ನೀಡಿದ ಪರಿಗೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

Video: ಆಧಾರ್‌ ಕಾರ್ಡ್​ಗೆ ಫೋಟೋ ಕ್ಲಿಕ್ಕಿಸುವಾಗ ಮಾಡೆಲ್‌ಗಳಂತೆ ಮುದ್ದು ಮುದ್ದಾಗಿ ಪೋಸ್‌ ನೀಡಿದ ಪುಟ್ಟ ಪೋರಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 04, 2024 | 5:47 PM

ಪುಟಾಣಿ ಮಕ್ಕಳನ್ನು ಸಂಭಾಳಿಸುವುದೇ ಕಷ್ಟ. ಅದರಲ್ಲೂ ತಮ್ಮದೇ ಲೋಕದಲ್ಲಿ ತೇಲಾಡುತ್ತಾ ತುಂಟಾಟವಾಡುವ ಈ ಪುಟಾಣಿಗಳ ಮುದ್ದು ಫೋಟೋಗಳನ್ನು ಕ್ಲಿಕ್ಕಿಸಲು ಹರ ಸಾಹಸವನ್ನೇ ಪಡಬೇಕಾಗುತ್ತದೆ. ಅಂತದ್ರಲ್ಲಿ ಇಲ್ಲೊಂದು ಪುಟಾಣಿ ಮಗು ಮಾತ್ರ ಆಧಾರ್‌ ಕಾರ್ಡ್‌ ಫೋಟೋಗೂ ಮಾಡೆಲ್‌ಗಳಂತೆ ಮುದ್ದಾಗಿ ಬಗೆಬಗೆಯ ಪೋಸ್‌ ನೀಡಿದ್ದು, ಈ ಮಗುವನ್ನು ಎಲ್ಲೂ ಅಲುಗಾಡದೆ ಒಂದು ಕಡೆ ಹಿಡಿದು ನಿಲ್ಲಿಸಲು ಹೆತ್ತವರು ಹರ ಸಾಹಸವನ್ನೇ ಪಟ್ಟಿದ್ದಾರೆ. ಈ ಮುದ್ದಾದ ವಿಡಿಯೋ ಇದೀಗ ಸಖತ್‌ ವೈರಲ್‌ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.

ಈ ಕುರಿತ ಪೋಸ್ಟ್‌ ಒಂದನ್ನು gungun_and_mom ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಪುಟಾಣಿ ಹೆಣ್ಣು ಮಗುವೊಂದು ಆಧಾರ್‌ ಕಾರ್ಡ್‌ ಫೋಟೋಗೆ ಸ್ಟೈಲ್‌ ಆಗಿ ಪೋಸ್‌ ನೀಡುತ್ತಿರುವ ಮುದ್ದಾದ ದೃಶ್ಯವನ್ನು ಕಾಣಬಹುದು. ಇಲ್ಲಿ ನನ್ನ ಫೋಟೋ ಶೂಟ್‌ ನಡೆಯುತ್ತಿರುವುದು ಎಂದು ಭಾವಿಸಿದ ಈ ಬಾಲೆ ಆಧಾರ್‌ ಕಾರ್ಡ್‌ ಫೋಟೋಗೂ ತರಹೇವಾರಿ ಪೋಸ್‌ಗಳನ್ನು ನೀಡಿದ್ದು, ಈ ಪುಟಾಣಿಯ ಒಂದು ಫೋಟೋ ತೆಗೆಯಲು ಹರಸಾಹಸವನ್ನೇ ಪಡಬೇಕಾಯಿತು.

ಇದನ್ನೂ ಓದಿ: ಇದೆಂಥಾ ಫುಟ್ಬಾಲ್‌ ಪ್ರೇಮ; ಸಾವಿನ ಮನೆಯಲ್ಲಿ ಶವದ ಮುಂದೆ ಫುಟ್ಬಾಲ್‌ ಮ್ಯಾಚ್‌ ವೀಕ್ಷಿಸಿದ ಕುಟುಂಬಸ್ಥರು

ವೈರಲ್​​ ವಿಡಿಯೋ ಇಲ್ಲಿದೆ ( ಇನ್​​ಸ್ಟಾ ವಿಡಿಯೋ)

View this post on Instagram

A post shared by BabyNaysha (@gungun_and_mom)

ಜೂನ್‌ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 17.6 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ಅಯ್ಯಯ್ಯೋ ಈ ಮಗು ಎಷ್ಟು ಮುದ್ದಾಗಿದೆ ಎಂದು ಕಾಮೆಂಟ್ಸ್‌ ಮಾಡಿದರೆ ಇನ್ನೂ ಕೆಲವರು ಇದೆಲ್ಲಾ ಇನ್‌ಸ್ಟಾಗ್ರಾಮ್‌ ರೀಲ್ಸ್‌ನ ಅಡ್ಡ ಪರಿಣಾಮ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ