ಒಲಿಂಪಿಕ್ಸ್ನಲ್ಲಿ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಛಲದಿಂದ ಸ್ಪರ್ಧಿಸಿದ ಎಲ್ಲಾ ಆಟಗಾರರಿಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಆಟಗಾರ್ತಿಯರಂತೆ ಮುನ್ನಗ್ಗಬೇಕು ಎಂಬುದು ಅದೆಷ್ಟೋ ಪುಟ್ಟ ಬಾಲಕಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ. ಮನೆಯ ಟಿವಿಯಲ್ಲಿ ಆಟವನ್ನು ನೋಡುತ್ತ ಅವರಂತೆಯೇ ಆಗುವ ಕನಸು ಹೊತ್ತಿದ್ದಾರೆ ಪುಟ್ಟ ಬಾಲಕಿಯರು. ಈಗಿನಿಂದಲೇ ಆ ಗುರಿಯತ್ತ ಸಾಗಲು ಪ್ರಯತ್ನಿಸುತ್ತಿರುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಅಂಥಹುದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಅಮೆರಿಕದ ಜಿಮ್ನಾಸ್ಟಿಕ್ ಆಲಿ ರೈಸ್ಮಾನ್ರಂತೆ ಪುಟ್ಟ ಬಾಲಕಿ ನಕಲಿಸುತ್ತಿದೆ. ಅವಳಿಗೆ ತಂದೆ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಆಟಗಾರ್ತಿ ಜಿಮ್ನಾಸ್ಟ್ ಆಲಿ ರೈಸ್ಮಾನ್ರಂತೆ ಪುಟ್ಟ ಬಾಲಕಿ ನಕಲಿಸುತ್ತಿದ್ದಾಳೆ. ಮಂಚದ ಮೇಲೆ ನಿಂತು ಟಿವಿ ನೋಡುತ್ತಾ ಅವರಂತೆಯೇ ವರ್ತಿಸುತ್ತಾಳೆ. ಪಲ್ಟಿ ಹೊಡೆಯುತ್ತಾ ತನ್ನ ಪ್ರತಿಭೆಯನ್ನು ತೋರಿಸುತ್ತಿದ್ದಾಳೆ.
ಪುಟ್ಟ ಬಾಲಕಿಯ ಹೆಸರು ರಾಕೆಲ್ ಅರುಡಾ. ವಿಡಿಯೋವನ್ನು ಟ್ವಿಟರ್, ಇನ್ಸ್ಟಾಗ್ರಾಂ ಸೇರಿದಂತೆ ಇತರ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪಲ್ಟಿ ಹೊಡೆಯಲು ತಂದೆ ಸಹಾಯ ಮಾಡುತ್ತಿದ್ದು, ಬಾಲಕಿಯ ಪ್ರತಿಭೆಗೆ ನೆಟ್ಟಿಗರು ಶ್ಲಾಘಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೆಯೇ ಜಿಮ್ನಾಸ್ಟ್ ಆಗುವ ಬಾಲಕಿಯ ಯೋಚನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:
Tokyo Olympics: ಚಿನ್ನದ ಪದಕ ಹಂಚಿಕೊಂಡು ಇಡೀ ವಿಶ್ವದ ಪ್ರೀತಿ ಗೆದ್ದ..!
Tokyo Olympics: ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸಿದ ಪೂಜಾ ರಾಣಿ; ಚೊಚ್ಚಲ ಪದಕ ಗೆಲ್ಲುವ ಕನಸು ನುಚ್ಚುನೂರು
Published On - 10:24 am, Thu, 5 August 21