Viral Video: 10, 20, 30, 40 …ಕೂಕ್​? ನಾಯಿಯೊಂದಿಗೆ ಕಣ್ಣುಮುಚ್ಚಾಲೆಯಾಟ

| Updated By: ಶ್ರೀದೇವಿ ಕಳಸದ

Updated on: Aug 11, 2022 | 4:17 PM

Hide and Seek : ಆಟವಾಡುವಾಗ ಇರುವ ಸಹಕಾರ ಮನೋಭಾವ ಇದೆಯಲ್ಲ, ಅದನ್ನು ಈ ವಿಡಿಯೋದಲ್ಲಿ ಕಾಣಬಹುದು. ನಾಯಿಯ ಎಕ್ಸ್​ಪ್ರೆಷನ್​ ನಿಮ್ಮ ಮನಸ್ಸನ್ನು ಕದಿಯದಿದ್ದರೆ ಹೇಳಿ.

Viral Video: 10, 20, 30, 40 ...ಕೂಕ್​? ನಾಯಿಯೊಂದಿಗೆ ಕಣ್ಣುಮುಚ್ಚಾಲೆಯಾಟ
ಆಡೋಣ ಬಾ
Follow us on

Viral : ಸಾಕುಪ್ರಾಣಿಗಳೊಂದಿಗೆ ಮಕ್ಕಳು ಆಡುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದನ್ನು ನೋಡುತ್ತಲೇ ಇರುತ್ತೀರಿ. ಆದರೆ ಇಲ್ಲಿರುವ ವಿಡಿಯೋ ಮಾತ್ರ ಬಹಳ ವಿಶಿಷ್ಟವಾಗಿದೆ. ಇಲ್ಲಿರುವ ಪುಟ್ಟ ಹುಡುಗಿ ತನ್ನ ನಾಯಿಯೊಂದಿಗೆ ಮನೆಯ ಒಳಾಂಗಣದಲ್ಲಿ ಕಣ್ಣುಮುಚ್ಚಾಲೆಯಾಟ ಆಡುತ್ತಿದ್ದಾಳೆ. ಆಟದಲ್ಲಿ ಅವಳು ಹೇಳುವ ಮಾತುಗಳನ್ನು ಕೇಳಿಸಿಕೊಂಡು ತಕ್ಷಣವೇ ಅದನ್ನು ಪಾಲಿಸುತ್ತದೆ ಈ ಮುದ್ದಾದ ನಾಯಿ. ಗೋಡೆ ಎಂದರೆ ಗೋಡೆಗೆ ಹೋಗಿ ಮುಖ ಅವಿತಿಟ್ಟುಕೊಳ್ಳುವುದು, ಕೋಣೆ ಎಂದರೆ ಕೋಣೆಗೆ ಹೋಗಿ ಅಡಗುವುದು. ಹೀಗೆ…

ತನ್ಸು ವೆಗೆನ್​ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋ ನೋಡಿ

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಅವಳ ಕರೆಯನ್ನೇ ಕಾಯುತ್ತ ತನ್ನ ಮುಖವನ್ನು ಗೋಡೆಗೆ ಅವಿತಿಟ್ಟುಕೊಂಡ ನಾಯಿ ಮಧ್ಯೆ ಒಮ್ಮೆ ಹೊರಳಿ ಅವಳನ್ನು ನೋಡುತ್ತದೆ. ಮತ್ತೆ ಅವಳ ಕರೆ ಬರುವ ತನಕ ಗೋಡೆಗೆ ಮುಖ ಅವಿತುಕೊಂಡು ನಿಲ್ಲುತ್ತದೆ.  ಎಂಥ ಮುದ್ದಾದ ವಿಡಿಯೋ ಅಲ್ಲವಾ ಇದು? ಈ ಮಧ್ಯಾಹ್ನದಲ್ಲಿ ನಿಮ್ಮ ನಿದ್ದೆ ಹಾರಿಹೋಗುವುದು ಗ್ಯಾರಂಟಿ!

1.8 ಮಿಲಿಯನ್ ವೀಕ್ಷಣೆ, ಸುಮಾರು 52 ಸಾವಿರ ಲೈಕ್ಸ್​ ಹೊಂದುವ ಮೂಲಕ ನೆಟ್ಟಿಗರ ಮನ ಕದ್ದಿದೆ. ಆಡುವಾಗ ಅನುಸರಿಸುವ ಸಹಕಾರ ಮನೋಭಾವ ಇದೆಯಲ್ಲ. ಅದನ್ನು ಬಹಳ ನೆಟ್ಟಿಗರು ಮೆಚ್ಚಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 4:15 pm, Thu, 11 August 22