‘ಇಲಿ ನುಂಗಿ ನುಂಗಿ ಮಲಗಿದ್ದು ಸಾಕು ಟ್ರೆಡ್​ಮಿಲ್​ ಮಾಡು ಬಾ’ ಅಕ್ಕನ ಮಾತು ಕೇಳಿದ ಬೆಕ್ಕು

Cat : ನಮ್ಮ ಭಾರತೀಯ ಮನೆಯ ಬೆಕ್ಕುಗಳಾದರೆ ಕಾಂಪೌಂಡಿಂದ ಹಾರಿ, ಮಹಡಿಯಿಂದ ಮಹಡಿಗೆ ನುಗ್ಗಿ, ಬೀದಿಯಿಂದ ಬೀದಿಗೆ ಸುತ್ತಿ ಬರುತ್ತವೆ. ಆದರೆ ಈ ಫಾರಿನ್​ ಬೆಕ್ಕುಗಳಿಗೆ... ನೋಡಿ ಟ್ರೆಡ್​ಮಿಲ್ ಪಾಠ.

‘ಇಲಿ ನುಂಗಿ ನುಂಗಿ ಮಲಗಿದ್ದು ಸಾಕು ಟ್ರೆಡ್​ಮಿಲ್​ ಮಾಡು ಬಾ’ ಅಕ್ಕನ ಮಾತು ಕೇಳಿದ ಬೆಕ್ಕು
Little girl teaches her pet cat how to use a treadmill
Edited By:

Updated on: Nov 02, 2022 | 3:59 PM

Viral Video : ಇಂಡಿಯನ್​ ಬೆಕ್ಕುಗಳಾದರೆ ಹೇಳೋವ್ರು ಕೇಳೋವ್ರು ಬೇಡ. ತಮ್ಮ ಪಾಡಿಗೆ ತಾವು ಅಂಗಳದಲ್ಲೋ, ಟೆರೇಸಿನಲ್ಲೋ, ಬೀದಿಯಲ್ಲೋ ಓಡಾಡಿಕೊಂಡು ಬರುತ್ತವೆ. ಆದರೆ ಫಾರಿನ್​ ಬೆಕ್ಕುಗಳ ಕಥೆ ಹಾಗಲ್ಲ. ಬೆಕ್ಕುಗಳಷ್ಟೇ ಏಕೆ ಒಟ್ಟಾರೆ ಸಾಕುಪ್ರಾಣಿಗಳೆಂದರೆ ಮಕ್ಕಳ ಸಮಾನ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಬೆಕ್ಕಿನ ಅಕ್ಕ ಟ್ರೆಡ್​ಮಿಲ್ ಮಾಡುತ್ತಿದ್ದಾಳೆ. ಹೇಳಿಕೇಳಿ ಬೆಕ್ಕು, ಬಾಲಂಗೋಸಿಯೇ. ತಾನೂ ಹೋಗಿ ಕುಳಿತಿದೆ. ಅದಕ್ಕೂ ಟ್ರೆಡ್​ ಮಿಲ್​ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದಾಳೆ.

6 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋ ನೋಡಿದ್ದಾರೆ. ಮೊದಲು ಕಾಲಿಟ್ಟು ನೋಡುತ್ತದೆ. ಆಮೇಲೆ ಹತ್ತಲು ನೋಡುತ್ತದೆ. ಕೊನೆಗೆ ಅದರ ಅಕ್ಕ ಅದನ್ನು ಟ್ರೆಡ್​ ಮಿಲ್ ಮೇಲೆ ಹತ್ತಿಸುತ್ತಾಳೆ. ನಂತರ ತಾನೂ ಅಕ್ಕನಂತೆ ಟ್ರೆಡ್ ಮಿಲ್​ ಮಾಡುತ್ತದೆ. 49 ಸೆಕೆಂಡುಗಳ ಈ ವಿಡಿಯೋ ನಿಮ್ಮನ್ನು ಉಲ್ಲಾಸಗೊಳಿಸುವುದು ಖಂಡಿತ.

ಈ ಪುಟ್ಟಿ ಫಿಟ್ನೆಸ್ ಗುರು ಆಗುತ್ತಾಳೆ ಎಂದಿದ್ದಾರೆ ಒಬ್ಬರು. ಇಂಥ ಅಧಿಕಪ್ರಸಂಗತನ ಸಾಕು ಪಾಪ ಅದು ಬೆಕ್ಕು. ಏನಾದರೂ ಆದರೆ? ಎಂದಿದ್ದಾರೆ ಮತ್ತೊಬ್ಬರು. ಮಕ್ಕಳು ಮಕ್ಕಳು ಆಡಿಕೊಳ್ಳುತ್ತಿವೆ ಮಧ್ಯೆ ನಿಮಗೇನು ಕಷ್ಟ? ಎಂದಿದ್ದಾರೆ ಅವರಿಗೆ ಪ್ರತಿಯಾಗಿ. ಪ್ರಾಣಿಗಳು ಹೆಚ್ಚು ಜಾಗರೂಕವಾಗಿರುತ್ತವೆ ತಮ್ಮ ಜೀವನದ ಬಗ್ಗೆ ಯೋಚಿಸಬೇಡಿ ಎಂದಿದ್ದಾರೆ ಮತ್ತೊಬ್ಬರು.

ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 3:53 pm, Wed, 2 November 22