Viral Video: ಜಗಳವಾಡೋದನ್ನು ಮಾತ್ರ ಇಲ್ಲಿ ಉಚಿತವಾಗಿ ಕಲಿಸಿಕೊಡಲಾಗುವುದು

Attitude: ನಮ್ಮ ಗುರಿ ಸ್ಪಷ್ಟವಾಗಿದ್ದಾಗ ಆ್ಯಟಿಟ್ಯೂಡ್ ಅನ್ನೋದು ತಾನಾಗಿಯೇ ಮೈಗೂಡುತ್ತದೆ. ಈ ಕೆಂಪು ಫ್ರಾಕ್ ಹುಡುಗಿಯನ್ನು ಗಮನಿಸಿದರೆ ಹೇಗೆ ಅನ್ನೋದು ಖಂಡಿತ ನಿಮಗೆ ತಿಳಿಯುತ್ತದೆ! ನೋಡಿ ವಿಡಿಯೋ.

Viral Video: ಜಗಳವಾಡೋದನ್ನು ಮಾತ್ರ ಇಲ್ಲಿ ಉಚಿತವಾಗಿ ಕಲಿಸಿಕೊಡಲಾಗುವುದು
ನೀನಷ್ಟೇನಾ ನಾನೂ ಮುಂದೆ ಬರಬೇಕು...
Updated By: ಶ್ರೀದೇವಿ ಕಳಸದ

Updated on: May 27, 2023 | 10:07 AM

Attitude : ಈ ಕೆಂಪು ಫ್ರಾಕ್​ ಹಾಕಿಕೊಂಡಿರುವವಳು ನಾನೇ ನಾನೇ. ಇವಳ ಹಾಗೆ ಇರುವುದೇ ಸುಖಜೀವನದ ಗುಟ್ಟು, ನಾನಂತೂ ಹೀಗೆಯೇ ಇದ್ದೇನೆ. ಇವಳ ಆ್ಯಟಿಟ್ಯೂಡ್ (Attitude)​ ಮಾತ್ರ ಬೊಂಬಾಟ್​. ನನ್ನ ಒಡಹುಟ್ಟಿದವರು ಹೀಗೆಯೇ ಜಗಳಾಡಿಕೊಂಡಿರುತ್ತಾರೆ ನಾ ಮಾತ್ರ ಇವಳಂತೆಯೇ ಇರುತ್ತೇನೆ. ನಾನು ಮನೆಯಲ್ಲಿಯೂ ಆಫೀಸಿನಲ್ಲಿಯೂ ಹೀಗೆಯೇ ಇರುತ್ತೇನೆ, ಯಾರು ಏನಾದರೂ ಕಿತ್ತಾಡಿಕೊಳ್ಳಲಿ ನಾನಂತೂ ಈ ಕೆಂಪುಟಾಣಿಯ ಹಾಗೆಯೇ! ಹೀಗೆ ನೆಟ್ಟಿಗರೆಲ್ಲ ಈ ವಿಡಿಯೋಗೆ ಪ್ರತಿಕ್ರಿಯಿಸುತ್ತಿದ್ದಾರೆ.

ನೀವಷ್ಟೇ ಏನು? ನಾನೂ ಮುಂದೆ ಬಂದು ಡ್ಯಾನ್ಸ್ ಮಾಡಬೇಕು ಎಂದು ಮಧ್ಯದ ಮಗು ಮುಂದೆ ಬರುತ್ತದೆ. ನೀನ್ಯಾಕೆ ನಮ್ಮ ಮಧ್ಯೆ ಬಂದೆ ಎಂದು ಬಲಬದಿಯ ಮಗು ಅದನ್ನು ತಳ್ಳುತ್ತದೆ. ನಂತರ ಎರಡೂ ಹೊಡೆದಾಡಿಕೊಂಡು ಕಿವಿ ಕೂದಲು ಜಗ್ಗಾಡಿಕೊಂಡು ಜಗಳಾಡಲು ಶುರು ಮಾಡುತ್ತವೆ. ಆದರೆ ಈ ಕೆಂಪು ಫ್ರಾಕ್ ಹಾಕಿಕೊಂಡ ಮಗುವಿನ ಗುರಿ ಮಾತ್ರ ತಾನಾಯಿತು ಡ್ಯಾನ್ಸಾಯಿತು ಎದುರಿನ ಕ್ಯಾಮೆರಾಆಯಿತು.

ಇದನ್ನೂ ಓದಿ : Viral Video: ‘ಸೆರಗನ್ನು ಮೇಲೇರಿಸಿಕೊಳ್ಳಿ!’ ನೈತಿಕ ಶಿಕ್ಷಕರಿಗೆ ಗಾಯಕಿಯ​ ಮಾತಿನಚಾಟಿ, ನೋಡಿ ವಿಡಿಯೋ

ಮೇ 25ರಂದು ಈ ವಿಡಿಯೋ ಟ್ವೀಟ್ ಮಾಡಲಾಗಿದೆ. ಹೆಣ್ಣುಮಕ್ಕಳು ಯಾವ ವಯಸ್ಸಿನಲ್ಲಿಯೂ ಹೀಗೇನೇ, ಹಿಂದೆ ಇರಲು ಇಷ್ಟಪಡುವುದಿಲ್ಲ! ಎಂಬ ಒಕ್ಕಣೆ ಈ ಟ್ವೀಟ್​ಗೆ ಇದೆ. ಆದರೆ ಹೆಣ್ಣು ಸಹನಾಮಯಿ, ದಯಾಮಯೀ, ಕರುಣಾಮಯೀ, ತ್ಯಾಗಮಯೀ, ಕ್ಷಮಯಾಧರಿತ್ರೀ ಅಂತೆಲ್ಲ ಹೇಳಿದ್ದೆಲ್ಲ ಎಲ್ಲಿ ಹೋಯಿತು ಮತ್ತೆ?

ಇದನ್ನೂ ಓದಿ : Viral:’ಸರಳ’ ಸಜ್ಜನಿಕೆಯ ಸುಧಾ ಮೂರ್ತಿ ಟ್ರೋಲ್ ಆಗುತ್ತಿರುವುದೇಕೆ? ಆ್ಯನ್ಸರ್ ಈಸ್ ಸೋ ಸಿಂಪಲ್!

ಹುಟ್ಟುತ್ತ ಮಕ್ಕಳು ಮಕ್ಕಳೇ. ಬೆಳೆಸುತ್ತ ನೀ ಹೆಣ್ಣು, ನೀ ಗಂಡು ಎಂದು ಬೇರೆ ಬೇರೆ ಅಚ್ಚಿನಲ್ಲಿ ಹಾಕುವುದು ನಾವೇ ಅಲ್ಲವೆ? ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಎಂದು ಹೇಳಿದ ದಾಸಿಮಯ್ಯ ಈ ವಿಡಿಯೋದ ಒಕ್ಕಣೆ ನೋಡಿದ್ದರೆ ಮತ್ತಿನೇನು ವಚನ ಬರೆಯುತ್ತಿದ್ದನೋ. ನೆಟ್ಟಿಗರಂತೂ ಇಂಥ ಒಣವಾದಕ್ಕೆ ಬೀಳದೆ ಆ್ಯಟಿಟ್ಯೂಡ್!​ ಎಂದು ಸಂಭ್ರಮಿಸುತ್ತಿದ್ದಾರೆ.

ಏನಂತೀರಿ ನೀವು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 9:56 am, Sat, 27 May 23