ಈ ಪ್ರತಿಮೆಯನ್ನು ತಬ್ಬಿಕೊಳ್ಳುವ ಮಗು, ಮುಂದೇನಾಗುತ್ತದೆ?

Statue : ಇವರು ಬೀದಿಬದಿಯ ಪ್ರದರ್ಶನಕಾರರು. ಮಿಸುಕಾಡದಂತೆ ಇಡೀ ದಿನ ಕುಳಿತುಕೊಳ್ಳುವುದೇ ಇವರ ಕಲೆಗೆ ಇರುವ ಸವಾಲು. ಈಗಿಲ್ಲಿ ಪುಟ್ಟ ಹುಡುಗನೊಬ್ಬ ಬಂದು ತಬ್ಬುತ್ತಾನೆ. ಮುಂದೇನಾಗುತ್ತದೆ? ವಿಡಿಯೋ ನೋಡಿ.

ಈ ಪ್ರತಿಮೆಯನ್ನು ತಬ್ಬಿಕೊಳ್ಳುವ ಮಗು, ಮುಂದೇನಾಗುತ್ತದೆ?
ಏನು ಮಾಡುತ್ತಾನೆ ಈ ಮೂರ್ತಿಮಾನವ?
Updated By: ಶ್ರೀದೇವಿ ಕಳಸದ

Updated on: Oct 03, 2022 | 4:18 PM

Viral : ಮುದ್ದುಮಕ್ಕಳು ಏನು ಮಾಡಿದರೂ ಚೆಂದ. ಅವರೇನು ಮಾಡಿದರೂ ನೀವು ಕರಗಲೇಬೇಕು. ಕಲ್ಲಿನಂತೆ ಇರಬೇಕೆಂದು ಎಷ್ಟು ಪ್ರಯತ್ನಿಸಿದರೂ ನಿಮಗದು ಸಾಧ್ಯವೇ ಆಗದು. ಮಕ್ಕಳ ಆ ಮುಗ್ಧ ನೋಟ, ಸ್ಪರ್ಶ, ಭಾವದ ಮಾಂತ್ರಿಕತನವೇ ಹಾಗೆ. ಈ ವಿಡಿಯೋ ನೋಡಿ. ಫುಟ್ಪಾತ್​ ಮೇಲಿನ ಬೆಂಚ್​ ಮೇಲೆ ಈತ ಮೂರ್ತಿಯಂತೆ ಕುಳಿತಿದ್ದಾನೆ. ಅದು ಅವನ ಕೆಲಸ. ಬೀದಿಬದಿಯ ಪ್ರದರ್ಶನಕಾರರು ಹೀಗೆ ದಿನವಿಡೀ ಕುಳಿತುಕೊಳ್ಳುತ್ತಾರೆ. ಪುಟ್ಟ ಮಗು ಓಡಿ ಹೋಗಿ ತಬ್ಬಿಕೊಳ್ಳುತ್ತದೆ. ಈ ಮೂರ್ತಿಮಾನವ ಮಾನವನಾಗಲೇಬೇಕಲ್ಲ!

ಈ ವಿಡಿಯೋ 1.2  ಮಿಲಿಯನ್ ವೀಕ್ಷಣೆ ಪಡೆದಿದೆ. ಸುಮಾರು 65,000 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಪ್ರಪಂಚದಾದ್ಯಂತ ಈ ಟ್ವೀಟ್​ ಅನೇಕರು ಪ್ರತಿಕ್ರಿಯೆ ನೀಡುವ ಮೂಲಕ ಈ ಮಗುವನ್ನು ಪ್ರತಿಮೆ ಪಾತ್ರಧಾರಿಯನ್ನು ಕೊಂಡಾಡಿದ್ದಾರೆ. ಮಗುವಿನ ಬಗ್ಗೆ ರಾಶಿರಾಶಿ ಮುದ್ದು ಎಮೊಟಿಕಾನ್​, ಪ್ರತಿಕ್ರಿಯೆ ಇತ್ಯಾದಿ.

ಇಡೀ ದಿನದಲ್ಲಿ ನೋಡಿದಂಥ ಅತ್ಯಂತ ಮುದ್ಧಾದ ವಿಡಿಯೋ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮುದ್ದಾದ ಮಗುವಿನ ಅಪ್ಪುಗೆಯನ್ನು ಯಾರಾದರು ಬೇಡ ಎನ್ನಲು ಸಾಧ್ಯವೆ? ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ನಿಜ ಅಲ್ವಾ?

ಕಣ್ಣುಮುಚ್ಚಿ ಸಾಗಬೇಕು ಮಕ್ಕಳು ತೋರಿದ ದಾರಿಯಲ್ಲಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:10 pm, Mon, 3 October 22