Dog : ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳಿಗಾಗಿಯೇ ಮೀಸಲಿಟ್ಟ ಮಿಲಿಯನ್ಗಟ್ಟಲೆ ಖಾತೆಗಳಿವೆ. ಇವುಗಳನ್ನು ನೋಡುವುದೇ ಒಂದು ರೀತಿ ಮೂಡ್ ಬೂಸ್ಟರ್. ಇನ್‌ಸ್ಟಾಗ್ರಾಮ್‌ನಲ್ಲಿ ಟೆಡ್ ಎಂಬ ನಾಯಿಮರಿಗೆ ಮೀಸಲಾಗಿರುವ ಖಾತೆ @teddy_thegoldendood4 ಇದೀಗ ವೈರಲ್ ಆಗಿರುವ ಪೋಸ್ಟ್ನ ಮೂಲ ಕೂಡ ಇದೇ. ಈ ವಿಡಿಯೋದಲ್ಲಿ ಟೆಡ್ ಟಿವಿ ನೋಡಿ, ಅದರಲ್ಲಿರುವ ನಾಯಿಯನ್ನು ಉತ್ಸಾಹದಿಂದ ಅನುಕರಣೆ ಮಾಡುತ್ತಿದೆ. ಬಾಲ ಅಲ್ಲಾಡಿಸುತ್ತ ಟಿವಿ ಮುಂದೆ ಅತ್ತಿಂದಿತ್ತ ಇತ್ತಿಂದಿತ್ತ ಕುಣಿಯುವ ಛಂದವೇನು!
ಜುಲೈ 31 ರಂದು ಇ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ ಆರು ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಕರನ್ನು ಇದು ಸೆಳೆದಿದೆ. ಟೆಡ್ ಗೋಲ್ಡನ್ ಡೂಡಲ್ ತಳಿಯ ನಾಯಿ ಹೈದರಾಬಾದ್ ಇದರ ಮೂಲ. ಈ ವಿಡಿಯೋ ನೋಡಿದ ಅನೇಕರು ಮುದ್ದಿನಿಂದ ಪ್ರತಿಕ್ರಿಯಿಸಿದ್ದಾರೆ.
‘ಅಯ್ಯೋ, ಎಂಥ ಮುದ್ದಾಗಿದೆ ಇದು ನನಗೂ ಬೇಕು ಇಂಥದೊಂದು’ ಎಂದಿದ್ದಾರೆ ನೆಟ್ಟಿಗರೊಬ್ಬರು. ‘ಅವನ ಬಾಲ ನೋಡಿ ಎಷ್ಟು ಲಯಬದ್ಧವಾಗಿ ಅಲ್ಲಾಡುತ್ತಿದೆ’ ಎಂದು ಮತ್ತೊಬ್ಬರು. ಇವನು ಮನುಷ್ಯರನ್ನೂ ಮೀರಿಸುತ್ತಾನೆ ಅನುಕರಣೆಯಲ್ಲಿ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಮಕ್ಕಳಿಗೆ ಕೊಟ್ಟಂತೆ ನಾಯಿ, ಬೆಕ್ಕುಗಳಿಗೂ ಗ್ಯಾಡ್ಜೆಟ್ ಕೊಟ್ಟು ಕೂರಿಸುವುದನ್ನು ಅವುಗಳ ಪೋಷಕರು ಅಭ್ಯಾ ಮಾಡಿಸಿದ್ದಾರೆ. ಮೊಬೈಲ್, ಐಫೋನ್, ಲ್ಯಾಪ್ಟಾಪ್, ಟಿವಿ… ಈಗ ಇದೆಲ್ಲ ನೋಡಿ ಮಕ್ಕಳು ಅನುಕರಣಾಶೂರರು ಆಗಿದ್ದಾಯಿತು. ಇನ್ನು ಇವುಗಳ ಸರಣಿ! ಅಲ್ಲಿಗೆ…
ಮತ್ತಷ್ಟು ವೈರಲ್ ನ್ಯೂಸ್ಗಳಿಗಾಗಿ ಕ್ಲಿಕ್ ಮಾಡಿ
Published On - 12:09 pm, Mon, 3 October 22