Football : ನಿನ್ನೆಯಷ್ಟೇ ರಾಜಸ್ಥಾನದ ಅಮಿತ ಸುತಾರ್ ಏಕಕಾಲಕ್ಕೆ ಏಳು ಫುಟ್ಬಾಲ್ಗಳನ್ನು ಪೆನ್ಸಿಲ್ ತುದಿಯ ಮೇಲೆ ತಿರುಗಿಸುವ ಕೌಶಲವನ್ನು ನೋಡಿದಿರಿ. ಇದೀಗ ಫ್ರೀಸ್ಟೈಲ್ ಫುಟ್ಬಾಲ್ ಆಟಗಾರ್ತಿ ಲಿವ್ ಕುಕ್ (Liv Cooke) ಬಾರ್ಸಿಲೋನಾದಲ್ಲಿ ಫುಟ್ಬಾಲ್ ಕೌಶಲ ಪ್ರದರ್ಶನದಿಂದ ಗಿನ್ನೀಸ್ ವಿಶ್ವ ದಾಖಲೆ (GWR) ಮಾಡಿರುವ ವಿಡಿಯೋ ನೋಡಿ. ಬ್ರಿಟಿಷ್ ಮೂಲದ ಈಕೆ 30 ಸೆಕೆಂಡುಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಸಿಟ್ಡೌನ್ 76 ಕ್ರಾಸ್ಓವರ್ಗಳನ್ನು ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಬಾರ್ಸಿಲೋನಾದ ಡಿಆರ್ವಿ ಪಿಎನ್ಕೆ (DRV PNK) ಸ್ಟೇಡಿಯಂನಲ್ಲಿ 2021ರಲ್ಲಿ ವೆನೆಜುವೆಲಾದ ಲಾರಾ ಬಯೊಂಡೋ ಮಾಡಿದ 62 ಸಿಟ್ಡೌನ್ ಕ್ರಾಸ್ಓವರ್ ದಾಖಲೆಯನ್ನು ಲಿವ್ ಮುರಿದಿದ್ದಾರೆ. ಲಿವ್, ‘ಇಡೀ ಜಗತ್ತಿನಲ್ಲಿ ನಾನು ಅತ್ಯುತ್ತಮ ಫ್ರೀಸ್ಟೈಲ್ ಫುಟ್ಬಾಲ್ ಆಟಗಾರಳೆಂದು ನನಗೆ ಗೊತ್ತಿದೆ. ಕೇವಲ ಹೆಣ್ಣುಮಕ್ಕಳ ವಿಭಾಗದಲ್ಲಿ ನಾನು ದಾಖಲೆ ನಿರ್ಮಿಸದೆ ಒಟ್ಟಾರೆಯಾಗಿ ವಿಶ್ವದಾಖಲೆ ನಿರ್ಮಿಸಲು ಬಯಸುತ್ತೇನೆ’ ಎಂದು ಆಕೆ ಹೇಳಿದ್ದಾರೆ.
ಇದನ್ನೂ ಓದಿ : Viral Video: ‘ಲೈಕ್ಸ್, ಶೇರ್, ಕಮೆಂಟ್ಗಾಗಿ ಇಷ್ಟೊಂದು ಅಪಾಯಕ್ಕೆ ಒಡ್ಡಿಕೊಳ್ಳಬೇಡ’ ನೆಟ್ಟಿಗರ ಮನವಿ
‘ಬೆನ್ನಿಗಾದ ಗಾಯದಿಂದಾಗಿ ಏಳು ತಿಂಗಳ ಕಾಲ ನಾನು ಫುಟ್ಬಾಲ್ ಕ್ರೀಡೆಯಿಂದ ದೂರ ಉಳಿಯಬೇಕಾಯಿತು. ಆಗ ಗಾರ್ಡನ್ನಲ್ಲಿಯೇ ಕುಳಿತು, ಬೆನ್ನಿಗೆ ನೋವಾಗದಂತೆ ಫ್ರೀಸ್ಟೈಲ್ ಫುಟ್ಬಾಲ್ನಲ್ಲಿ ತೊಡಗಿಕೊಂಡೆ. ಹೀಗೆ ನನ್ನ ಈ ಪ್ರಯಾಣ ಶುರುವಾಯಿತು. ಅಚ್ಚರಿ ಎಂದರೆ ಆಗ ನಾನು ಫ್ರೀಸ್ಟೈಲ್ ಫುಟ್ಬಾಲ್ ಆಟವಾಡುತ್ತಿದ್ದೇನೆ ಎಂದು ನನಗೇ ತಿಳಿದಿರಲಿಲ್ಲ. ಫುಟ್ಬಾಲ್ ನನಗೆ ಗೀಳು, ಹಾಗಾಗಿ ಬೇಗ ಆಟಕ್ಕೆ ಮರಳಬೇಕು ಎಂದುಕೊಳ್ಳುತ್ತಿದ್ದೆ. ಆದರೆ ಫ್ರೀಸ್ಟೈಲ್ ಪ್ರ್ಯಾಕ್ಟೀಸ್ ಮಾಡುತ್ತಾ ನಾನು ಸಂಪೂರ್ಣ ಫುಟ್ಬಾಲ್ನೊಂದಿಗೆ ಪ್ರೀತಿಯಲ್ಲಿ ಬಿದ್ದೆ’ ಎಂದಿದ್ಧಾರೆ ಲಿವ್.
ಇದನ್ನೂ ಓದಿ : Viral Video: ಮಹಾರಾಷ್ಟ್ರ; 45 ದಿನಗಳ ಮರಿಚಿರತೆ ಮರಳಿ ಅಮ್ಮನ ಮಡಿಲು ಸೇರಿದಾಗ
ನಾಲ್ಕು ದಿನಗಳ ಹಿಂದೆ ಹಂಚಿಕೊಂಡ ಈ ಇನ್ಸ್ಟಾ ಪೋಸ್ಟ್ ಅನ್ನು ಈತನಕ 8 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 60,000 ಜನ ಇದನ್ನು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಲಿವ್ ಸಾಧನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:41 am, Tue, 11 July 23