ಪಶ್ಚಿಮ ಬಂಗಾಳದ ಹಬ್ರಾ ರೈಲ್ವೆ ಸ್ಟೇಷನ್ನಲ್ಲಿರುವ ಎಮ್ಎ ಇಂಗ್ಲೀಷ್ ಚಾಯ್ವಾಲಿ ಟೀ ಸ್ಟಾಲ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ಸುದ್ದಿಯಲ್ಲಿದೆ. 26 ವರ್ಷದ ಯುವತಿಯೋರ್ವಳು ಸ್ವಾವಲಂಬಿಯಾಗಿ ಬದುಕಲು ತಾನು ಕೂಡಿಟ್ಟ ಹಣದಲ್ಲಿ ಟೀ ಸ್ಟಾಲ್ ತೆರೆದಿದ್ದಾಳೆ. ಅದೇ ಎಮ್ಎ ಇಂಗ್ಲೀಷ್ ಚಾಯ್ವಾಲಿ ಟೀ ಸ್ಟಾಲ್. ಯುವತಿಯ ಯಶಸ್ಸಿನ ಹಾದಿಯ ಕಥೆ ಹೇಳುವ ಈ ಟೀ ಸ್ಟಾಲ್ ಅಂಗಡಿಯ ವಿಶೇಷತೆ ಏನು ಎಂಬ ಕುತೂಹಲ ಕೆರಳಿರಬೇಕಲ್ಲವೇ? ಯುವತಿ ಟುಕಟುಕಿ ದಾಸ್ ಟೀ ಸ್ಟಾಲ್ ಅಂಗಡಿ ಇದೀಗ ಫುಲ್ ಫೇಮಸ್. ಯುವತಿಯ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಶ್ರಮಿಸುತ್ತಿರುವ ಪ್ರೇರಣಾದಾಯಿ ಕತೆಯನ್ನ ಓದಿ.
ತನ್ನ ಟೀ ಸ್ಟಾಲ್ ಅಂಗಡಿಯ ಬಗ್ಗೆ ಹೇಳಿದ ಯುವತಿ, ನಾನು ಯಾವಾಗಲೂ ನನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತೇನೆ. ನನ್ನಲ್ಲಿರುವ ಒಂದಿಷ್ಟು ಬಂಡವಾಳದೊಂದಿಗೆ ನನ್ನ ಸ್ವಂತ ಅಂಗಡಿಯನ್ನು ತೆರೆದಿದ್ದೇನೆ. ನನ್ನ ಕನಸನ್ನು ನನಸು ಮಾಡಲು ಅತ್ಯುತ್ತಮ ಆಯ್ಕೆ ಇದಾಗಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಲಲ್ಲಿ ಮಕ್ಕಳು ಯಾವಾಗಲೂ ಕಷ್ಟಪಟ್ಟು ಓದುತ್ತಾರೆ. ಬಳಿಕ ಪೋಷಕರು ಮಕ್ಕಳಿಗೆ ಸರ್ಕಾರಿ ಉದ್ಯೋಗವನ್ನು ಪಡೆಯಲು ಹೆಚ್ಚು ಪ್ರೋತ್ಸಾಹಿಸುತ್ತಾರೆ. ನನಗೂ ಕೂಡಾ ಯಾವುದೇ ಭಿನ್ನವಿರಲಿಲ್ಲ. ಆದರೆ ಸ್ವಾಲಂಬಿಯಾಗಿ ಬದುಕಲು ಹೆಚ್ಚು ಇಷ್ಟಪಡುತ್ತಿದ್ದೆ. ಎಷ್ಟೂ ಕಷ್ಟವಾದರೂ ಪರವಾಗಿಲ್ಲ ಎಂದು ಯುವ ಉದ್ಯಮಿ ದಾಸ್ ಹೇಳಿದ್ದಾರೆ. 2020ರಲ್ಲಿ ರವೀಂದ್ರ ಭಾರತಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಬಳಿಕವೇ ದಾಸ್ ಅವರು, ಆಸ್ಟ್ರೇಲಿಯಾದ ಎಮ್ಬಿಬಿಎಸ್ ಚಾಯ್ವಾಲಾ ಪ್ರಫುಲ್ ಬಿಲ್ಲೋರ್ ಮತ್ತು ಉಪ್ಪಮಾ ವಿರ್ದಿ ಅವರ ಯಶಸ್ಸಿನ ಕಥೆಗಳಿಂದ ಪ್ರೇರಿತರಾಗಿದ್ದೇನೆ ಎಂದು ಮನದಾಳದ ಮಾತನ್ನು ಹೇಳಿದ್ದಾರೆ.
ನಾನು ಒಂದು ವರ್ಷದಿಂದ ಮಕ್ಕಳಿಗೆ ಟ್ಯೂಷನ್ ಹೇಳುತ್ತಿದ್ದೆ. ಅದರಲ್ಲಿ ಸ್ವಲ್ಪ ಮಟ್ಟಿಗೆ ಹಣ ಉಳಿಸುತ್ತಿದೆ. ಬೋಧನೆ ಮಾಡುವುದನ್ನು ನಾನು ಇಷ್ಟಪಟ್ಟಿದ್ದರೂ ಹೆಚ್ಚಿನ ಸಂಬಳಕ್ಕಾಗಿ ನಿರೀಕ್ಷೆ ಇತ್ತು. ಸ್ವಾವಲಂಬನೆಯ ಜೀವನ ನಡೆಸುವುದರ ಜೊತೆಗೆ ಒಂದಿಷ್ಟು ಗಳಿಗೆ ಮಾಡಬೇಕೆಂಬ ಆಸೆ ಇತ್ತು. ಕಡೆಯದಾಗಿ 10,000 ಬಂಡವಾಳದೊಂದಿಗೆ ಈ ವರ್ಷದ ನವೆಂಬರ್ 1ರಂದು ಟೀ ಸ್ಟಾಲ್ ತೆರೆದಿದ್ದೇನೆ ಎಂದು ಹೇಳಿದ್ದಾರೆ.
ರೈಲ್ವೇ ನಿಲ್ದಾಣದಲ್ಲಿ ಸ್ಟಾಲ್ ತೆರೆಯುವುದು ಇಷ್ಟು ದೊಡ್ಡ ಮಟ್ಟದ ವ್ಯವಹಾರ ಎಂದು ನಾನು ತಿಳಿದಿರಲಿಲ್ಲ. ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುವುದು ಅಂದಾಕ್ಷಣ ಇದು ಕೀಳು ಕೆಲಸ ಎಂದು ಜನರು ಭಾವಿಸುತ್ತಾರೆ. ಈ ವಿಷಯವು ನನಗೆ ಪ್ರಾಮಾಣಿಕವಾಗಿ ನೋವುಂಟು ಮಾಡಿತು. ಎಲ್ಲಾ ಉದ್ಯೋಗಗಳೂ ಸಹ ಅರ್ಹವಾದ ಗೌರವವನ್ನು ಪಡೆಯಬೇಕು ಏಕೆಂದರೆ ಎಲ್ಲಾ ಕೆಲಸವನ್ನೂ ಶ್ರಮವಹಿಸಿ ಮಾಡಬೇಕಾಗುತ್ತದೆ ಎಂದು ದಾಸ್ ಹೇಳುತ್ತಾರೆ.
ಸ್ಟಾಲ್ ಎಲ್ಲಿ ತೆರೆಯೋದು ಎಂಬ ವಿಷಯ ಬಂದಾಗ ಮೂರು ಸ್ಥಳಗಳ ಆಯ್ಕೆ ನನ್ನದಾಗಿತ್ತು. ಆಸ್ಪತ್ರೆ, ಕಾಲೇಜು ಮತ್ತು ರೈಲು ನಿಲ್ದಾಣ. ಸಾಂಕ್ರಾಮಿಕ ರೋಗದಿಂದಾಗಿ ಕಾಲೇಜಿನ ಬಾಗಿಲುಗಳೆಲ್ಲಾ ಮುಚ್ಚಲ್ಪಟ್ಟಿದ್ದರಿಂದ ಆ ಆಯ್ಕೆಯನ್ನು ಬಿಡಲಾಯಿತು. ಹತ್ತಿರದ ಆಸ್ಪತ್ರೆಯಲ್ಲಿ ಟೀ ಸ್ಟಾಲ್ ತೆರೆಯುವಿಕೆಗೆ ಅವಕಾಶವಿರಲಿಲ್ಲ. ಆದ್ದರಿಂದ ರೈಲ್ವೆ ನಿಲ್ದಾಣದಲ್ಲಿ ಟೀ ಸ್ಟಾಲ್ ತೆರೆಯಲು ನಿರ್ಧರಿಸಿದರು.
ದೇವರ ದಯೆಯಿಂದ ವ್ಯಾಪಾರವು ಉತ್ತಮ ಸ್ಥಿತಿಯಲ್ಲಿದೆ. ನನ್ನ ಟೀ ಸ್ಟಾಲ್ಗೆ ಜನ ಬರುತ್ತಿದ್ದಾರೆ. ಜನರು ರೈಲ್ವೆ ನಿಲ್ದಾಣದಲ್ಲಿ ಎರಡು ಗಂಟೆಗಳ ಕಾಲ ಸಮಯ ತೆಗೆದುಕೊಳ್ಳಬೇಕಾಗುತ್ತದೆ. ಆ ವೇಳೆ ಚಹಾ ಸವಿಯುತ್ತಾರೆ. ಯಾವುದೇ ಕೆಲಸವಾಗಲಿ ಇತರರ ಸಹಾಯದಿಂದ ನಾನು ಗೆದ್ದಿದ್ದೇನೆ ಎಂಬ ಮಾತನ್ನು ಕೇಳಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಹಾಗಾಗಿ ನಾನು ಯಾರೊಂದಿಗೂ ಸಹಾಯಕ್ಕಾಗಿ ಅಂಗಲಾಚುವುದಿಲ್ಲ. ನಾನು ನನ್ನನ್ನು ಸ್ವಂತವಾಗಿ ಎದುರಿಸಲು ಬಯಸುತ್ತೇನೆ ಎಂದು ದಾಸ್ ಹೇಳಿದ್ದಾರೆ.
ಸ್ಟಾಲ್ ತೆರೆದ ಮೊದಲನೇ ದಿನ ದಾಸ್, 2 ಗಂಟೆಗಳ ಕಾಲ ಉಚಿತ ಟೀ ನೀಡಿದರು. ಗ್ರಾಹಕರಿಗೆ ಇಷ್ಟವಾಗುವಂತೆ ರುಚಿಯಾದ ಚಹಾ ನೀಡುವುದು ನನ್ನ ಗುರಿಯಾಗಿದೆ. ಒಂದಲ್ಲಾ ಒಂದು ದಿನ ನನ್ನ ಉದ್ಯಮ ದೊಡ್ಡದಾಗಿ ಬೆಳೆಯುತ್ತದೆ ಎಂಬ ಕನಸನ್ನು ಹೊತ್ತಿದ್ದಾರೆ.
ಇದನ್ನೂ ಓದಿ:
‘ಉದಯ’ ಟಿವಿಯಲ್ಲಿ ಹೊಸ ಸೀರಿಯಲ್ ‘ಅಣ್ಣ-ತಂಗಿ’; ಯಾವಾಗಿನಿಂದ ಪ್ರಸಾರ? ಏನಿದರ ಕಥೆ?
‘100’ ಚಿತ್ರದಲ್ಲಿ ಸೈಬರ್ ಕ್ರೈಂ ಕಥೆ; ತೆರೆ ಹಿಂದೆಯೂ, ತೆರೆ ಮೇಲೂ ರಮೇಶ್ ಅರವಿಂದ್ ಕಸುಬುದಾರಿಕೆ
Published On - 5:02 pm, Fri, 19 November 21