‘ಉದಯ’ ಟಿವಿಯಲ್ಲಿ ಹೊಸ ಸೀರಿಯಲ್​ ‘ಅಣ್ಣ-ತಂಗಿ’; ಯಾವಾಗಿನಿಂದ ಪ್ರಸಾರ? ಏನಿದರ ಕಥೆ?

Anna Thangi serial: ಒಡಹುಟ್ಟಿದವರ ಕಥೆ ಹೇಳಲು ‘ಉದಯ’ ಟಿವಿಯಲ್ಲಿ ‘ಅಣ್ಣ-ತಂಗಿ’ ಧಾರಾವಾಹಿ ಬರುತ್ತಿದೆ. ತಂಗಿ ತುಳಸಿ ಪಾತ್ರವನ್ನು ಅಖಿಲಾ ಪ್ರಕಾಶ್ ಮಾಡುತ್ತಿದ್ದಾರೆ. ಅಣ್ಣನ ಪಾತ್ರವನ್ನು ಮಧು ಸಾಗರ್ ನಿರ್ವಹಿಸುತ್ತಿದ್ದಾರೆ.

‘ಉದಯ’ ಟಿವಿಯಲ್ಲಿ ಹೊಸ ಸೀರಿಯಲ್​ ‘ಅಣ್ಣ-ತಂಗಿ’; ಯಾವಾಗಿನಿಂದ ಪ್ರಸಾರ? ಏನಿದರ ಕಥೆ?
ಅಣ್ಣ ತಂಗಿ ಧಾರಾವಾಹಿ
Follow us
TV9 Web
| Updated By: ಮದನ್​ ಕುಮಾರ್​

Updated on: Nov 17, 2021 | 7:42 PM

ಧಾರಾವಾಹಿಗಳ ಜಗತ್ತು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಪ್ರಸಾರ ಆಗುವ ಎಲ್ಲ ಸೀರಿಯಲ್​ಗಳ (Kannada serials) ನಡುವೆ ಸಖತ್​ ಪೈಪೋಟಿ ಇದೆ. ಒಂದು ಧಾರಾವಾಹಿಯನ್ನು ನಿರ್ಮಿಸಿ, ಅದನ್ನು ಜನಮೆಚ್ಚುವಂತೆ ಮಾಡುವುದು ಸುಲಭದ ಮಾತಲ್ಲ. ಅದೊಂದು ಸವಾಲೇ ಸರಿ. ಅಂಥ ಸವಾಲನ್ನು ಸ್ವೀಕರಿಸಿ ಹೊಸ ಹೊಸ ಧಾರಾವಾಹಿಗಳು ಪ್ರೇಕ್ಷಕರ ಎದುರು ಬರುತ್ತಿವೆ. ಉದಯ ಟಿವಿಯಲ್ಲಿ ‘ಅಣ್ಣ ತಂಗಿ’ ಶೀರ್ಷಿಕೆಯಲ್ಲಿ ಹೊಸದೊಂದು ಸೀರಿಯಲ್​ ಪ್ರಸಾರಕ್ಕೆ ಸಜ್ಜಾಗಿದೆ. ಈಗಾಗಲೇ ಪ್ರೇಕ್ಷಕರನ್ನು ರಂಜಿಸಿರುವ ಬೇರೆಲ್ಲ ಧಾರಾವಾಹಿಗಳಿಗಿಂತಲೂ ‘ಅಣ್ಣ ತಂಗಿ’ (Anna Thangi serial) ಕಥೆ ಭಿನ್ನವಾಗಿದೆ ಎನ್ನಲಾಗಿದೆ. ನ.22ರಿಂದ ಉದಯ ವಾಹಿನಿಯಲ್ಲಿ (Udaya Tv) ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 7 ಗಂಟೆಗೆ ಈ ಸೀರಿಯಲ್​ ಪ್ರಸಾರ ಆಗಲಿದೆ.

ಉದಯ ವಾಹಿನಿಯಲ್ಲಿ ಈಗಾಗಲೇ ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸ ಸೇರಿದಂತೆ ಹಲವಾರು ಧಾರಾವಾಹಿಗಳು ವೀಕ್ಷಕರಿಗೆ ಇಷ್ಟ ಆಗಿವೆ. ಈಗ ಒಡಹುಟ್ಟಿದವರ ಕಥೆಯನ್ನು ಹೇಳಲು ‘ಅಣ್ಣ-ತಂಗಿ’ ಧಾರಾವಾಹಿ ಬರುತ್ತಿದೆ. ಈ ಧಾರಾವಾಹಿಯು ಸಿನಿಮಾದಷ್ಟೇ ಗುಣಮಟ್ಟದ ಮೇಕಿಂಗ್​ ಒಳಗೊಂಡಿದೆ ಎಂದು ವಾಹಿನಿ ಹೇಳಿಕೊಂಡಿದೆ.

ಅಣ್ಣ-ತಂಗಿ ಕಥೆ ಏನು?

ತುಳಸಿ ಮತ್ತು ಶಿವರಾಜು (ಶಿವಣ್ಣ) ಈ ಧಾರಾವಾಹಿಯ ಮುಖ್ಯ ಪಾತ್ರಗಳು. ಅಪ್ಪ-ಅಮ್ಮ ಇಲ್ಲದಿರುವ ಇವರಿಬ್ಬರಿಗೆ ಇವರಿಬ್ಬರೆ ಆಸರೆ. ತುಳಸಿಗೆ ಹೆತ್ತವರ ಸ್ಥಾನದಲ್ಲಿರುವುದು ಶಿವಣ್ಣ. ಕೂಡು ಕುಟುಂಬದ ಪ್ರೀತಿ ಸಿಗದೇ ಬೆಳೆದಿರುವ ತನ್ನ ತಂಗಿಯನ್ನು ಎಲ್ಲ ಬಂಧುಗಳು ತುಂಬಿ ತುಳುಕುತ್ತಿರುವ ಒಂದು ದೊಡ್ಡ ಕುಟುಂಬಕ್ಕೆ ಮದುವೆ ಮಾಡಿಸಲು ಶಿವಣ್ಣ ಪ್ರಯತ್ನಿಸುತ್ತಾನೆ. ಆದರೆ ತಂಗಿಯ ಜಾತಕದ ಪ್ರಕಾರ ಭವಿಷ್ಯದಲ್ಲಿ ಅವಳಿಗೆ ಮದುವೆಯಾದರೆ ತನ್ನ ಅಣ್ಣನ ಸಂಬಂಧವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ!

ಅಣ್ಣನನ್ನು ಒಂಟಿ ಮಾಡಿ ಬಿಟ್ಟು ಹೋಗಲು ತಂಗಿಗೆ ಮನಸಿಲ್ಲ. ಚಿಕ್ಕ ವಯಸ್ಸಿನಿಂದ ಒಗ್ಗಟ್ಟಿನಿಂದ ಬೆಳೆದು ಬಂದ ಇವರಿಬ್ಬರ ಬಂಧನ ತುಳಸಿಗೆ ಬರುವ ಗಂಡಿನ ಕಡೆಯವರಿಂದ ಅಥವಾ ಅತ್ತಿಗೆಯ ಕುಟುಂಬದಿಂದ ಮುರಿದು ಬೀಳುತ್ತಾ ಅನ್ನೋದೇ ‘ಅಣ್ಣ ತಂಗಿ’ ಧಾರಾವಾಹಿಯ ಒನ್​ ಲೈನ್​ ಕಥೆ.

ತಂಗಿ ತುಳಸಿ ಪಾತ್ರವನ್ನು ಅಖಿಲಾ ಪ್ರಕಾಶ್ ಮಾಡುತ್ತಿದ್ದಾರೆ. ಅಣ್ಣನ ಪಾತ್ರವನ್ನು ಮಧು ಸಾಗರ್ ನಿರ್ವಹಿಸುತ್ತಿದ್ದಾರೆ. ಮಾನಸಿ ಜೋಷಿ, ರಾಜೇಶ್ ಧ್ರುವ, ಸ್ವರಾಜ್, ರೋಹಿತ್‌ ನಾಗೇಶ್, ಶರ್ಮಿತಾ, ರಾಧಾ ರಾಮಚಂದ್ರ, ಗಿರೀಶ್ ಜತ್ತಿ, ತನುಜಾ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ.

ಚೈತನ್ಯ ಹರಿದಾಸ್ ಸಿನಿಮಾಸ್ ಮೂಲಕ ಈ ಧಾರಾವಾಹಿ ನಿರ್ಮಾಣ ಆಗುತ್ತಿದೆ.  ಥ್ರಿಲ್ಲರ್​ ಕಥಾಹಂದರ ಹೊಂದಿದ್ದ ‘ಆಕೃತಿ’ ಧಾರಾವಾಹಿಯನ್ನು ನಿರ್ದೇಶಿಸಿದ್ದ ಕೆ.ಎಂ, ಚೈತನ್ಯ ಮತ್ತು ಹರಿದಾಸ್ ಕೆಜಿಎಫ್ ಅವರು ಇದನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶನ ಮತ್ತು ಛಾಯಗ್ರಾಹಣವನ್ನು ಎಂ. ಕುಮಾರ್ ಮಾಡುತ್ತಿದ್ದಾರೆ. ರಾಘವ ದ್ವಾರ್ಕಿಯವರ ಚಿತ್ರಕಥೆ, ತುರುವೆಕರೆ ಪ್ರಸಾದ್ ಸಂಭಾಷಣೆ, ಗುರುರಾಜ್ ಬಿ.ಕೆ. ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ:

ವಿವಾಹ ಪೂರ್ವ ಅತ್ಯಾಚಾರ ಆರೋಪ; ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಕಿರುತೆರೆ ನಟಿ

ಮುದ್ದಿಸುವ, ತಬ್ಬಿಕೊಳ್ಳುವ ದೃಶ್ಯಗಳನ್ನು ಟಿವಿಯಲ್ಲಿ ತೋರಿಸುವಂತಿಲ್ಲ; ಪಾಕಿಸ್ತಾನಿ ಕಿರುತೆರೆಗೆ ಸೆನ್ಸಾರ್​ ಬರೆ

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ