ಇದು ಜಗತ್ತಿನ ಶ್ರೀಮಂತ ಗ್ರಾಮ; ಈ ಹಳ್ಳಿಯ ಪ್ರತಿ ಮನೆಯಲ್ಲೂ ಮಿಲಿಯನೇರ್‌ಗಳಿದ್ದಾರಂತೆ

ಸಾಮಾನ್ಯವಾಗಿ ಹಳ್ಳಿ ಎಂದಾಕ್ಷಣ ಎಲ್ಲರ ಕಲ್ಪನೆಗೆ ಬರುವಂತಹದ್ದು, ಗುಡಿಸಲು, ಹೆಂಚಿನ ಮನೆ, ಮಧ್ಯಮ ವರ್ಗದ ಜನ, ಸರಳ ಜೀವನ. ಆದ್ರೆ ಈ ಒಂದು ಗ್ರಾಮದಲ್ಲಿ ಬರೀ ಶ್ರೀಮಂತರೇ ಇರೋದಂತೆ. ಹೌದು ಇಲ್ಲಿನ ಪ್ರತಿಯೊಂದು ಮನೆಯಲ್ಲೂ ಮಿಲಿಯನೇರ್‌ಗಳಿದ್ದು, ಇದು ವಿಶ್ವದ ಅತ್ಯಂತ ಶ್ರೀಮಂತ ಗ್ರಾಮವಾಗಿದೆ. ಭಾರತದಲ್ಲಿನ ಈ ಗ್ರಾಮ ಯಾವ ರಾಜ್ಯದಲ್ಲಿದೆ ಎಂಬ ಕುತೂಹಲಕಾರಿ ಸಂಗತಿಯನ್ನು ತಿಳಿಯಿರಿ.

ಇದು ಜಗತ್ತಿನ ಶ್ರೀಮಂತ ಗ್ರಾಮ; ಈ ಹಳ್ಳಿಯ ಪ್ರತಿ ಮನೆಯಲ್ಲೂ ಮಿಲಿಯನೇರ್‌ಗಳಿದ್ದಾರಂತೆ
ಜಗತ್ತಿನ ಶ್ರೀಮಂತ ಗ್ರಾಮ
Image Credit source: Social Media

Updated on: Aug 16, 2025 | 11:54 AM

ಇಂದಿಗೂ ಅದೆಷ್ಟೋ ಹಳ್ಳಿಗಳಲ್ಲಿ (Village) ಮೂಲ ಸೌಕರ್ಯಗಳ ಕೊರತೆ ಬಹಳಷ್ಟಿದೆ. ನಗರಗಳಷ್ಟು ಹಳ್ಳಿಗಳು  ಅಭಿವೃದ್ಧಿ ಕೂಡ ಹೊಂದಿಲ್ಲ. ಇನ್ನೂ ಹಳ್ಳಿ, ಗ್ರಾಮ ಎಂದಾಕ್ಷಣ ಪ್ರತಿಯೊಬ್ಬರ ಕಲ್ಪನೆಗೆ ಬರುವಂತಹದ್ದು, ಗುಡಿಸಲು, ಹೆಂಚಿನ ಮನೆ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು, ಸಾಮಾನ್ಯ ಸರಳ ಜೀವನ. ಆದರೆ ನಮ್ಮ ಭಾರತದಲ್ಲೊಂದು ಹಳ್ಳಿಯಿದೆ, ಈ ಹಳ್ಳಿಯ ಚಿತ್ರಣ ಬೇರೆ ಹಳ್ಳಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಏಕೆಂದರೆ ಈ ಹಳ್ಳಿ ನಗರಗಳಂತೆ ಆಧುನಿಕ ಸೌಕರ್ಯಗಳನ್ನು ಹೊಂದಿರುವುದು ಮಾತ್ರವಲ್ಲದೆ, ಈ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಮಿಲಿಯನೇರ್‌ಗಳಿದ್ದಾರೆ. ಇದೇ ಕಾರಣದಿಂದ ಈ ಗ್ರಾಮ ವಿಶ್ವದ ಅತ್ಯಂತ ಶ್ರೀಮಂತ ಗ್ರಾಮ (World Richest Village) ಎಂಬ ಬಿರುದನ್ನು ಪಡೆದಿದೆ. ಗುಜರಾತ್‌ನಲ್ಲಿರುವ ಈ ಗ್ರಾಮದ ಇನ್ನಷ್ಟು ಕುತೂಹಲಕಾರಿ ಮಾಹಿತಿಯನ್ನು ತಿಳಿಯಿರಿ.

ಭಾರದತದಲ್ಲಿರುವ ವಿಶ್ವದ ಅತ್ಯಂತ ಶ್ರೀಮಂತ ಗ್ರಾಮ:

ಗುಜರಾತ್‌ನ ಕಚ್‌ ಜಿಲ್ಲೆಯಲ್ಲಿರುವ ಮಧಾಪರ್  ಎಂಬ ಗ್ರಾಮ ವಿಶ್ವದ ಅತ್ಯಂತ ಶ್ರೀಮಂತ ಗ್ರಾಮವಾಗಿದೆ. ಒಂದು ಕಾಲದಲ್ಲಿ ಈ ಗ್ರಾಮದ ಜನರು ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿದ್ದರು, ಆದರೆ ಇಂದು ಪ್ರತಿಯೊಬ್ಬರೂ ತಮ್ಮದೇ ಆದ ಬಂಗಲೆಗಳು ಮತ್ತು ದೊಡ್ಡ ದೊಡ್ಡ ಮನೆಗಳನ್ನು ಹೊಂದಿದ್ದಾರೆ. ಈ ಹಳ್ಳಿಯ ಪ್ರತಿಯೊಬ್ಬರೂ ಕೂಡ ಲಕ್ಷಾಧಿಪತಿ, ಕೋಟ್ಯಾಧಿಪತಿಗಳು. ಈ ಗ್ರಾಮದ ಜನಸಂಖ್ಯೆ ಸುಮಾರು 92 ಸಾವಿರ. ಇಲ್ಲಿ 7,600 ಕುಟುಂಬಗಳಿದ್ದು, ಇಲ್ಲಿ ಒಟ್ಟು 17 ಬ್ಯಾಂಕ್‌ಗಳಿವೆ. ಈ  ಬ್ಯಾಂಕುಗಳು 5,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಠೇವಣಿಗಳನ್ನು ಹೊಂದಿವೆ. ಇದು ಮಧ್ಯಮ ಗಾತ್ರದ ನಗರದ ಆರ್ಥಿಕತೆಗೆ ಸಮಾನವಾಗಿದೆ.

ಇದನ್ನೂ ಓದಿ
3 ತಿಂಗಳು ಭಾರತದಲ್ಲಿ ಸುತ್ತಾಟ, ಶಾಶ್ವತವಾಗಿ ಉಳಿದ ವಿದೇಶಿ ದಂಪತಿ
ಶಾಲಾ ವಿದ್ಯಾರ್ಥಿಗಳಿಗೆ ಶೌಚಾಲಯ ಕಟ್ಟಿದ ವಿದೇಶಿಗರು
1 ತಿಂಗಳ ಕಸವನ್ನು 15 ಸೆಕೆಂಡುಗಳಲ್ಲಿ ಸ್ವಚ್ಛಗೊಳಿಸಿದ ವಿದೇಶಿಗ
ಭಾರತಕ್ಕೆ ಹೋಲಿಸಿದ್ರೆ ಕೆನಡಾದಲ್ಲಿ ದಿನಸಿ ವಸ್ತುಗಳು ದುಬಾರಿ

ಈ ಗ್ರಾಮ ಇಷ್ಟೊಂದು ಶ್ರೀಮಂತವಾದದ್ದು ಹೇಗೆ?

ಮಧಾಪರ್‌ ಗ್ರಾಮದ ಪ್ರತಿ ಕುಟುಂಬದ ಸದಸ್ಯರು ಸಹ ವಿದೇಶಗಳಲ್ಲಿ, ವಿಶೇಷವಾಗಿ ಇಂಗ್ಲೇಂಡ್‌, ಅಮೆರಿಕ, ಕೆನಡಾ, ಆಫ್ರಿಕಾ ಮತ್ತು ಗಲ್ಫ್ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಅನಿವಾಸಿ ಭಾರತೀಯರು ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ಗಣನೀಯ ಸಂಪತ್ತು ಮತ್ತು ಶ್ರೀಮಂತಿಕೆಯನ್ನು ಗಳಿಸಿದ್ದಾರೆ. ಇವರುಗಳು ತಮ್ಮ ಮನೆಗಳಿಗೆ ಮಾತ್ರವಲ್ಲದೆ ಗ್ರಾಮದ ಅಭಿವೃದ್ಧಿಗೂ ಕೂಡ ಸಾಕಷ್ಟು ಹಣ ಕಳುಹಿಸುತ್ತಲೇ ಇರುತ್ತಾರೆ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಮತ್ತು ಸಮುದಾಯ ಕಲ್ಯಾಣಕ್ಕೆ ಸಕ್ರಿಯವಾಗಿ ಕೊಡುಗೆ ನೀಡುತ್ತಲೇ ಇದ್ದು, ಮಧಾಪರ್ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಸಹಾಯ ಮಾಡುತ್ತಿದ್ದಾರೆ.

ವೈರಲ್‌  ಪೋಸ್ಟ್ ಇಲ್ಲಿದೆ ನೋಡಿ:

 

ಇದನ್ನೂ ಓದಿ: ಮೂರು ತಿಂಗಳು ಭಾರತದಲ್ಲಿ ಸುತ್ತಾಟ, ಇಲ್ಲಿಯೇ ಶಾಶ್ವತವಾಗಿ ಉಳಿದ ವಿದೇಶಿ ದಂಪತಿ

ಗ್ರಾಮೀಣ ಪರಿಸರದಲ್ಲಿ ನಗರದಂತಹ ಸೌಲಭ್ಯಗಳು:

ಮಾಧಾಪರ್ ಗ್ರಾಮ ಇತರ ಗ್ರಾಮಗಳಿಗಿಂತ ತುಂಬಾನೇ ಭಿನ್ನವಾಗಿದ್ದು, ಇದು ಗ್ರಾಮೀಣ ಪ್ರದೇಶವಾದರೂ ಇಲ್ಲಿ ನಗರಗಳಲ್ಲಿರುವಂತಹ ಸೌಲಭ್ಯಗಳಿವೆ. ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಬ್ಯಾಂಕುಗಳು, ಉದ್ಯಾನವನಗಳು ಮತ್ತು ಉತ್ತಮ ರಸ್ತೆಗಳಿವೆ. ಅಷ್ಟೇ ಅಲ್ಲದೆ ಒಂದು ಶಾಪಿಂಗ್‌ ಮಾಲ್‌ ಸಹ ಇದೆ. ಇಲ್ಲಿನ ಜನರ ಜೀವನ ಮಟ್ಟವು ಉನ್ನತವಾಗಿದೆ. ಹೀಗೆ ಈ ಗ್ರಾಮದ ಜನರ ಕಠಿಣ ಪರಿಶ್ರಮದಿಂದ ಇದು ವಿಶ್ವದ ಅತ್ಯಂತ ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ಗ್ರಾಮವೆಂದು ಗುರುತಿಸಿಕೊಂಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ