ಹಿಂದೂ ಧರ್ಮದಲ್ಲಿ ಗೋವಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಮುಕ್ಕೋಟಿ ದೇವರುಗಳು ನೆಲೆಸಿರುವ ಈ ಗೋವನ್ನು ಕೇವಲ ಪ್ರಾಣಿಯಾಗಿ ನೋಡದೆ, ದೇವರೆಂದು ಪೂಜಿಸುವ ದೇಶ ನಮ್ಮದು. ಮನುಷ್ಯನಿಗೆ ಎರಡನೇ ತಾಯಿಯಾಗಿರುವ ಗೋವಿನಿಂದ ಹಾಲು, ಸಗಣಿ ಹಾಗೂ ಗೋಮೂತ್ರ ಪಡೆಯುತ್ತೇವೆ. ತನ್ನ ಜೀವನವನ್ನೆಲ್ಲ ತನ್ನವರಿಗಾಗಿ ಮೀಸಲಿಡುವ ಹಸುವು ಕೇಳ್ದಿದ್ದನ್ನು ಕೊಡುವ ಕಾಮಧೇನುವೇ ಸರಿ. ಇದೀಗ ಗೋಮಾತೆಯ ಅಂತಿಮ ವಿಧಿ ವಿಧಾನವನ್ನು ಮನುಷ್ಯರಿಗೆ ಮಾಡುವ ರೀತಿಯಲ್ಲೇ ಶಾಸ್ತ್ರಬದ್ಧವಾಗಿ ನೆರವೇರಿಸಲಾಗಿರುವ ವಿಡಿಯೋವೊಂದು ವೈರಲ್ ಆಗಿದೆ.
ಹೌದು, ಮಧ್ಯಪ್ರದೇಶದ ಧಾರ್‌ನ ಬಲೋಡಾ ಗ್ರಾಮದಲ್ಲಿ ಮೃತ ಗೋಮಾತೆಯನ್ನು ಶಾಸ್ತ್ರಬದ್ಧವಾಗಿ ಅಂತ್ಯ ಕ್ರಿಯೆ ಮಾಡಲಾಗಿದ್ದು, ಈ ಹೃದಯಕ್ಕೆ ಹತ್ತಿರವಾಗುವ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ನಿರ್ಮೋಹಿ ಗೋಶಾಲೆಯಲ್ಲಿ ಮೃತ ಪಟ್ಟ ಹಸುವಿಗೆ ಹೂವಿನಿಂದ ಅಲಂಕಾರ ಮಾಡಿ, ಮೆರವಣಿಗೆಯ ಮೂಲಕ ಸ್ಮಶಾನಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ಮಾಡಲಾಗಿದೆ. ಪೂಜಾ ಸಂಘವಾನ್ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಅಂತಿಮಯಾತ್ರೆಯ ವೇಳೆ ಗೋಶಾಲೆಯ ಅಧ್ಯಕ್ಷರು ಮತ್ತು ಇಡೀ ಗ್ರಾಮದ ಗ್ರಾಮಸ್ಥರು ಭಾವುಕರಾಗಿರುವುದನ್ನು ನೋಡಬಹುದು.
ಇದನ್ನೂ ಓದಿ: ಒಂದೇ ಬೈಕ್ನಲ್ಲಿ ಹದಿನೈದು ಮಕ್ಕಳು, ಇದೇನು ಬೈಕೋ, ಅಲ್ಲ ಪುಷ್ಪಕ ವಿಮಾನವೋ
Madhya Pradesh for a reason✨🤌🏻🥺
Last rituals of gaumata with full respect and emotions has been conducted by the villagers in Baloda, Dhar. pic.twitter.com/9fbiawYDty
— Pooja Sangwan 🇮🇳 (@ThePerilousGirl) June 21, 2024
ಬ್ಯಾಂಡ್ ವಾದ್ಯಗಳೊಂದಿಗೆ ಗೋಮಾತೆಯ ಮೃತ ದೇಹವು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಇತ್ತ ಗ್ರಾಮಸ್ಥರು ಕಣ್ಣೀರಿನ ಮೂಲಕ ವಿದಾಯ ಕೋರಿದ್ದಾರೆ. ಇ ಈ ವೇಳೆಯಲ್ಲಿ ಮಳೆರಾಯನು ಆಗಮನವಾಗಿದ್ದು, ಈ ಕ್ಷಣವನ್ನು ಮತ್ತಷ್ಟು ಭಾವುಕರಾಗುವಂತೆ ಮಾಡಿದೆ. ಕೊನೆಗೆ ಸ್ಮಶಾನದಲ್ಲಿ ವಿಧಿವಿಧಾನಗಳ ಮೂಲಕ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿದೆ. ಈ ವಿಡಿಯೋವು ಈಗಾಗಲೇ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದ್ದು, ‘ಗೋಶಾಲೆಯೂ ಮೃತ ಪಟ್ಟ ಗೋವನ್ನು ಸಂಸ್ಕಾರ ಮಾಡಿದ ರೀತಿಯನ್ನು ಸನಾತನ ಧರ್ಮದ ಸೊಬಗು’ ಹೀಗೆ ನಾನಾ ರೀತಿಯ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ