Viral: ರೈಲಿನ ಶೌಚಾಲಯದೊಳಗೆ ನಿಂತು ಸ್ನೇಹಿತೆಯರೊಂದಿಗೆ ಕುಂಭಮೇಳಕ್ಕೆ ಹೊರಟ ಯುವತಿ

ಕೆಲ ಜನರು ತಾವು ದಿನನಿತ್ಯ ಏನೆಲ್ಲಾ ಮಾಡುತ್ತಿರುತ್ತೇವೆ ಎಂಬುದನ್ನು ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ತಾನು ಸ್ನೇಹಿತೆಯ ಜೊತೆ ರೈಲಿನ ಶೌಚಾಲಯದಲ್ಲಿ ನಿಂತು ಮಹಾಕುಂಭಮೇಳಕ್ಕೆ ಹೊರಟಿರುವ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾಳೆ. ರೈಲಿನಲ್ಲಿ ನೂಕು ನುಗ್ಗಲನ್ನು ತಪ್ಪಿಸಲು ಈ ಸ್ನೇಹಿತೆಯರ ಗುಂಪು ಶೌಚಾಲಯದಲ್ಲಿ ನಿಂತು ಪ್ರಯಾಣ ಬೆಳೆಸಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

Viral: ರೈಲಿನ ಶೌಚಾಲಯದೊಳಗೆ ನಿಂತು ಸ್ನೇಹಿತೆಯರೊಂದಿಗೆ ಕುಂಭಮೇಳಕ್ಕೆ ಹೊರಟ ಯುವತಿ
ಸಾಂದರ್ಭಿಕ ಚಿತ್ರ
Edited By:

Updated on: Feb 07, 2025 | 4:33 PM

ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಮಹಾಕುಂಭಮೇಳ ನಡೆಯುತ್ತಿದ್ದು, ದೇಶದ ಮೂಲೆ ಮೂಲೆಗಳಿಂದ ಪ್ರತಿನಿತ್ಯ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಇಲ್ಲಿಗೆ ಆಗಮಿಸುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಸ್ನೇಹಿತೆಯ ತಂಡ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಕುಂಭಮೇಳಕ್ಕೆ ಹೊರಟಿದ್ದು, ಈ ಯುವತಿಯರು ರೈಲಿನಲ್ಲಿ ನೂಕುನುಗ್ಗಲನ್ನು ತಪ್ಪಿಸಲು ಟ್ರೈನ್‌ನ ಶೌಚಾಲಯದೊಳಗೆ ನಿಂತು ಪ್ರಯಾಣಿಸಿದ್ದಾರೆ. ಪ್ರಯಾಗ್‌ರಾಜ್‌ಗೆ ಹೊರಟಿರುವ ರೈಲಿನಲ್ಲಿ ಪ್ರಯಾಣಿಕರು ತುಂಬಿ ತುಳುಕಿದ್ದು, ಅಲ್ಲಿ ನೂಕುನುಗ್ಗಲನ್ನು ತಪ್ಪಿಸಲು, ಸ್ನೇಹಿತೆಯರ ತಂಡ ಶೌಚಾಲಯದೊಳಗೆ ನಿಂತೇ ಪ್ರಯಾಣಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

ರೈಲಿನಲ್ಲಿ ಪ್ರಯಾಣಿಕರು ತುಂಬಿಕೊಂಡಿದ್ದಾರೆ ಎಂದು ಸ್ನೇಹಿತೆಯರ ತಂಡವೊಂದು ರೈಲಿನ ಶೌಚಾಲಯದಲ್ಲಿ ನಿಂತು ಕುಂಭಮೇಳಕ್ಕೆ ಹೊರಟಿದ್ದಾರೆ. ಈ ಕುರಿತ ವಿಡಿಯೋವನ್ನು mammam5645 ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವತಿಯೊಬ್ಬಳು, ಸ್ನೇಹಿತರೇ ನಾವು ರೈಲಿನ ಶೌಚಾಲಯದಲ್ಲಿದ್ದೇವೆ, ಮತ್ತು ಕುಂಭಮೇಳಕ್ಕೆ ಹೊರಟಿದ್ದೇವೆ ಎಂದು ಹೇಳುತ್ತಾ ವಿಡಿಯೋ ಶೂಟ್‌ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ರೈಲಿನಲ್ಲಿ ಪ್ರಯಾಣಿಕರು ತುಂಬಿ ಹೋಗಿದ್ದಾರೆ. ಈ ಜನ ಸಂದಣಿಯನ್ನು ತಪ್ಪಿಸಲು ನಾವು ಶೌಚಾಲಯದೊಳಗೆ ನಿಂತು ಪ್ರಯಾಣಿಸುತ್ತಿದ್ದೇವೆ ಎಂದು ಹೇಳುತ್ತಾ ಸ್ನೇಹಿತೆಯರೊಂದಿಗೆ ತಮಾಷೆ ಮಾಡಿದ್ದಾಳೆ.

ಇದನ್ನೂ ಓದಿ: ಹಣ್ಣಿನಂಗಡಿಯ ಬಿಲ್‌ ರಶೀದಿಯಲ್ಲಿ ದಾಳಿಂಬೆ ಬದಲು ಅನಾರ್‌ ಪದ ಬಳಕೆ; ಗರಂ ಆದ ಕನ್ನಡಿಗ

ಜನವರಿ 28 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7.8 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೀಗೆ ಶೌಚಾಲಯದೊಳಗೆ ನಿಂತು ಪ್ರಯಾಣಿಸುವುದು ಸರಿಯೇ, ಇವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಿʼ ಎಂದು ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼನೀವು ಹೀಗೆ ಇಲ್ಲಿ ನಿಂತು ಪ್ರಯಾಣಿಸಿದರೆ, ಇತರೆ ಪ್ರಯಾಣಿಕರಿಗೆ ತೊಂದರೆ ಆಗಲ್ವಾʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಓ ದೇವರೆ ಇದೆಲ್ಲಾ ನಿಮ್ಗೆ ಬೇಕಿತ್ತಾʼ ಎಂದು ಕೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ