
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 45 ದಿನಗಳವರೆಗೆ ನಡೆದ ಮಹಾಕುಂಭ ಮೇಳ (maha kumbh) ಮುಕ್ತಾಯಗೊಂಡಿದೆ. ವೈರಲ್ ಹುಡುಗಿ ಮೊನಾಲಿಸಾ, ಐಐಟಿ ಬಾಬಾ ಸೇರಿದಂತೆ ಈ ಕುಂಭಮೇಳದಲ್ಲಿ ನಡೆದ ಕೆಲವೊಂದಿಷ್ಟು ಘಟನೆಗಳು ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಹೃದಯಸ್ಪರ್ಶಿ ಕಥೆಯ ವಿಡಿಯೋವೊಂದು ಹರಿದಾಡುತ್ತಿದ್ದು, ಅಗ್ನಿ ಶಾಮಕ ದಳದ ಅಧಿಕಾರಿ ಸಂಜೀವ್ ಕುಮಾರ್ ಸಿಂಗ್ ಎಂಬವರು ತಮ್ಮ ಕಾಲೇಜು ಸ್ನೇಹಿತೆಯನ್ನು ಬರೋಬ್ಬರಿ 37 ವರ್ಷಗಳ ಬಳಿಕ ಕುಂಭಮೇಳದಲ್ಲಿ ಭೇಟಿಯಾಗಿದ್ದಾರೆ. ಸ್ನೇಹಿತರಿಬ್ಬರ ಅನಿರೀಕ್ಷಿತ ಪುನರ್ಮಿಲನದ ದೃಶ್ಯವನ್ನು ಕಂಡು ಎಲ್ಲರೂ ಮನಸೋತಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದ ಸಂದರ್ಭದಲ್ಲಿ ಅಗ್ನಿಶಾಮಕ ಅಧಿಕಾರಿ ಸಂಜೀವ್ ಕುಮಾರ್ ಸಿಂಗ್ ಅವರಿಗೆ 37 ವರ್ಷಗಳ ನಂತರ ತಮ್ಮ ಕಾಲೇಜು ಸ್ನೇಹಿತೆ ಹಾಗೂ ಪ್ರಸ್ತುತ ಲಕ್ನೋದ ಕೆಕೆಬಿ ಪದವಿ ಕಾಲೇಜಿನ ಶಿಕ್ಷಿಯಾಗಿರುವ ರಶ್ಮಿ ಗುಪ್ತಾ ಅವರನ್ನು ಭೇಟಿಯಾಗುವ ಭಾಗ್ಯ ಸಿಕ್ಕಿದ್ದು, ಹಲವು ವರ್ಷಗಳ ನಂತರ ಒಬ್ಬರನ್ನೊಬ್ಬರು ನೋಡಿ ಸ್ನೇಹಿತರಿಬ್ಬರು ಭಾವುಕರಾಗಿದ್ದಾರೆ. 1988 ರ ಬ್ಯಾಚ್‌ನ ಸಹಪಾಠಿಗಳಾಗಿದ್ದ ಇವರು ಬರೋಬ್ಬರಿ 37 ವರ್ಷಗಳ ಬಳಿಕ ಮಹಾಕುಂಭಮೇಳದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿದ್ದಾರೆ.
Pehle log Kumbh me kho jate the.
Fire officer Sanjeev Kumar Singh 1988 ke baad MahaKumbh me apni classmate se mile.
Such a cute conversation! pic.twitter.com/WQzSa35nsd
— Swami (@Swami_65) February 26, 2025
Swami_65 ಹೆಸರಿನ ಎಕ್ಸ್ ಖಾತೆಯಲ್ಲಿ ಈ ಹೃದಯಸ್ಪರ್ಶಿ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಸಂಜೀವ್ ತನ್ನ ಕಾಲೇಜು ಸ್ನೇಹಿತೆಯನ್ನು ಪರಿಚಯಿಸುತ್ತಾ, “ಇವಳು ನನ್ನ ಡಿಗ್ರಿ ಕಾಲೇಜಿನ ಸಹಪಾಠಿ ರಶ್ಮಿ. ನಾವು 1988 ರ ಬ್ಯಾಚ್‌ನ ವಿದ್ಯಾರ್ಥಿಗಳಾಗಿದ್ದೇವೆ ಮತ್ತು 37 ವರ್ಷಗಳ ನಂತರ ಮಹಾ ಕುಂಭದಲ್ಲಿ ಇದೀಗ ಭೇಟಿಯಾದೆವು ಎಂದು ಹೇಳುತ್ತಿರುವ ದೃಶ್ಯವನ್ನು ಕಾಣಬಹುದು. ಜೊತೆಗೆ ತಮಾಷೆಮಾಡುತ್ತಾ ಈ ಇಬ್ಬರೂ ತಮ್ಮ ಕಾಲೇಜು ದಿನಗಳನ್ನು ಸಹ ನೆನೆದಿದ್ದಾರೆ.
ಇದನ್ನೂ ಓದಿ: ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿಸಿ, ಪರಾರಿಯಾದ ಮಹಿಳೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ
ಫೆಬ್ರವರಿ 26 ರಂದು ಶೇರ್ ಮಾಡಲಾದ ಈ ವಿಡಿಯೋ ಹಲವಾರು ಕಾಮೆಂಟ್ಸ್‌ಗಳನ್ನು ಸಹ ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಎಂತಹ ಮಧುರ ಭೇಟಿಯಿದುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಹಳ ಅದ್ಭುತವಾದ ದೃಶ್ಯʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಸ್ನೇಹಿತರ ಈ ಪುನರ್ಮಿಲನದ ದೃಶ್ಯವನ್ನು ಕಂಡು ಭಾವುಕರಾಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Thu, 27 February 25