ಹಿಂದೂ ಧರ್ಮದಲ್ಲಿನ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರ ಉತ್ಸವಗಳಲ್ಲಿ ಒಂದಾದ ಮಹಾ ಕುಂಭಮೇಳಕ್ಕೆ ಜನವರಿ 13 ರಂದು ಚಾಲನೆ ಸಿಕ್ಕಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಈ ಅಪರೂಪದ ಮಹಾ ಕುಂಭಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಲಕ್ಷಾಂತರ ಸಂಖ್ಯೆಯ ನಾಗ ಸಾಧುಗಳು, ಸಾಧು ಸಂತರುಗಳು ಕೂಡಾ ಆಗಮಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತೂ ಮಹಾ ಕುಂಭಮೇಳಕ್ಕೆ ಸಂಬಂಧಿಸಿದ ವಿಡಿಯೋಗಳೇ ಹರಿದಾಡುತ್ತಿದೆ. ಅದೇ ರೀತಿ ಇಲ್ಲೊಂದು ಮಹಾಕುಂಭಕ್ಕೆ ಸಂಬಂಧಿಸಿದ ದೃಶ್ಯವೊಂದು ವೈರಲ್ ಆಗುತ್ತಿದ್ದು, ನಾಗಾ ಸಾಧುವೊಬ್ಬರು ಯೂಟ್ಯೂಬರನ್ನು ಹೊಡೆದೋಡಿಸಿದ್ದಾರೆ. ಹೌದು ಆತನ ಅಸಂಬದ್ಧ ಪ್ರಶ್ನೆಗಳಿಂದ ಸಿಟ್ಟಿಗೆದ್ದ ಸಾಧು ಆತನನ್ನು ಹೊಡೆದೋಡಿಸಿದ್ದಾರೆ.
ಪ್ರಯಾಗ್ ರಾಜ್‌ನ ಮಹಾ ಕುಂಭಮೇಳದಲ್ಲಿ ಧ್ಯಾನ ಮಾಡುತ್ತಾ ಕುಳಿತಿದ್ದ ನಾಗ ಸಾಧು ಬಳಿ ಬಂದ ಯುಟ್ಯೂಬರ್ ಒಬ್ಬ ಮೈಕ್ ಹಿಡಿದು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾನೆ. ಮೊದಲಿಗೆ ಶಾಂತವಾಗಿಯೇ ಆತನ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಂತರ ಆತನ ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಆತನನ್ನು ಅಲ್ಲಿಂದ ಹೊಡೆದೋಡಿಸಿದ್ದಾರೆ.
महाकुंभ में कवरेज करने आये युट्यूबरो को मुश्किलें ज्यादा होगी!
अपने चैनल के रीच को बढ़ाने के चक्कर मे फालतू सवाल पूछेगे बाबा जी लोग चिमटे से ठोक पीट कर सही कर देंगे।🤣 pic.twitter.com/vk4WsJMRcB
— Suresh Singh (@sureshsinghj) January 12, 2025
ಸುರೇಶ್ ಸಿಂಗ್ (sureshsinghj) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು “ಮಹಾ ಕುಂಭಮೇಳವನ್ನು ಕವರ್ ಮಾಡಲು ಬರುವ ಯೂಟ್ಯೂಬರ್‌ಗಳು ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ; ನಿಮ್ಮ ಚಾನೆಲ್‌ನ ರೀಚ್ ಹೆಚ್ಚಿಸಲು ಅನುಪಯುಕ್ತ ಪ್ರಶ್ನೆಗಳನ್ನು ಕೇಳದಿರಿ” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೈಕ್ ಹಿಡಿದು ಬಂದಂತಹ ಯುಟ್ಯೂಬರ್ ಬಬ್ಬ ನಾಗ ಸಾಧು ಒಬ್ಬರ ಬಳಿ ಬಾಬಾ ನೀವು ಯಾವಾಗ ಸನ್ಯಾಸಿ ಪಂಥವನ್ನು ಸೇರಿದಿರಿ ಎಂಬ ಪ್ರಶ್ನೆಯನ್ನು ಕೇಳುವ ದೃಶ್ಯವನ್ನು ಕಾಣಬಹುದು. ಈ ಪ್ರಶ್ನೆಗೆ ಶಾಂತ ರೀತಿಯಲ್ಲೇ ಉತ್ತರಿಸಿದ ಸಾಧು, ನಂತರ ಯುಟ್ಯೂಬರ್‌ನ ಅಧಿಕ ಪ್ರಸಂಗ ಪ್ರಶ್ನೆಗಳಿಗೆ ಬೇಸತ್ತು, ಆತನನ್ನು ಅಲ್ಲಿಂದ ಹೊಡೆದೋಡಿಸಿದ್ದಾರೆ.
ಇದನ್ನೂ ಓದಿ: ಪೊಂಗಲ್ ಆಚರಣೆಗೆ ಪಂಚೆಯುಟ್ಟು ಸಖತ್ ಸ್ಟೆಪ್ಸ್ ಹಾಕಿದ ಚೆಸ್ ಚಾಂಪಿಯನ್ಸ್; ಮುದ್ದಾದ ವಿಡಿಯೋ ವೈರಲ್
ಜನವರಿ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸಾದು ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆ ಸಾಧುಗಳ ಬಗ್ಗೆ ಅಸಂಬಂದ್ಧ ಪ್ರಶ್ನೆಗಳನ್ನು ಕೇಳುವವರಿಗೆ ಹೀಗೆಯೇ ಆಗ್ಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆತನಿಗೆ ಹೀಗೆಯೇ ಆಗ್ಬೇಕಿತ್ತುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ