Viral: ಟ್ರಾಫಿಕ್‌ ಜಾಮ್‌ ಸಮಸ್ಯೆ; ಪ್ಯಾರಾಗ್ಲೈಡ್‌ ಮಾಡಿ ಎಕ್ಸಾಂ ಹಾಲ್‌ ತಲುಪಿದ ವಿದ್ಯಾರ್ಥಿ

ಮನಸ್ಸಿದ್ದರೆ ಮಾರ್ಗ, ಮನಸ್ಸು ಮಾಡಿದರೆ ಎಂತಹ ಅಡತಡೆಗಳನ್ನು ಮೆಟ್ಟಿ ನಿಲ್ಲಬಹುದು ಎಂದು ಹೇಳುತ್ತಾರೆ. ಈ ಮಾತಿಗೆ ಉತ್ತಮ ನಿದರ್ಶನದಂತಿರುವ ಘಟನೆಯೊಂದು ನಡೆದಿದ್ದು, ಟ್ರಾಫಿಕ್‌ ಇರುವುದರಿಂದ ರಸ್ತೆ ಮಾರ್ಗದ ಮೂಲಕ ಹೋದ್ರೆ ಎಕ್ಸಾಂಗೆ ತಡವಾಗುತ್ತೆ ಎಂದು ವಿದ್ಯಾರ್ಥಿಯೊಬ್ಬ ಪ್ಯಾರಾಗ್ಲೈಡಿಂಗ್‌ ಮಾಡುತ್ತಾ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗಿದ್ದು, ವಿದ್ಯಾರ್ಥಿಯ ಕಲಿಕಾ ಉತ್ಸಾಹಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

Viral: ಟ್ರಾಫಿಕ್‌ ಜಾಮ್‌ ಸಮಸ್ಯೆ; ಪ್ಯಾರಾಗ್ಲೈಡ್‌ ಮಾಡಿ ಎಕ್ಸಾಂ ಹಾಲ್‌ ತಲುಪಿದ ವಿದ್ಯಾರ್ಥಿ
Trending News (18)
Edited By:

Updated on: Feb 19, 2025 | 2:16 PM

ಚೆನ್ನಾಗಿ ಓದ್ಬೇಕು, ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಬೇಕು, ಒಂದೊಳ್ಳೆ ಜೀವನವನ್ನು ರೂಪಿಸಿಕೊಳ್ಳಬೇಕು ಎನ್ನುವ ತುಡಿತ ಇರುವವರು ಎಲ್ಲಾ ಅಡೆತಡೆಗಳನ್ನು ಮೀರಿ ತಮ್ಮ ಗುರಿಯತ್ತ ಸಾಗುವ ಪ್ರಯತ್ನವನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಎಕ್ಸಾಂಗೆ ತಡವಾಗಿದೆ, ರಸ್ತೆ ಮಾರ್ಗ ಮೂಲಕ ಹೋದ್ರೆ ಖಂಡಿತವಾಗಿಯೂ ಸಮಯಕ್ಕೆ ಸರಿಯಾಗಿ ನಾನು ಪರೀಕ್ಷಾ ಕೇಂದ್ರವನ್ನು ತಲುಪಲು ಸಾಧ್ಯವಿಲ್ಲ ಎಂದು ಸರಿಯಾದ ಸಮಯಕ್ಕೆ ಪರೀಕ್ಷೆಗೆ ಹಾಜರಾಗಲು ಪ್ಯಾರಾಗ್ಲೈಡಿಂಗ್‌ ಮೂಲಕ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾನೆ. ಈತನ ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗಿದ್ದು, ವಿದ್ಯಾರ್ಥಿಯ ಸೃಜನಶೀಲತೆ ಮತ್ತು ಕಲಿಕಾ ಉತ್ಸಾಹಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಮಹಾರಾಷ್ಟ್ರದ ಸತಾರಾದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯೋರ್ವ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಲು ಪ್ಯಾರಾಗ್ಲೈಡಿಂಗ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾನೆ. ನಗರದಲ್ಲಿ ಭಾರೀ ಸಂಚಾರ ದಟ್ಟಣೆ ಇದ್ದ ಕಾರಣ ವಿದ್ಯಾರ್ಥಿ ಈ ವಿನೂತನ ಕ್ರಮ ಕೈಗೊಂಡಿದ್ದಾನೆ.

ಪ್ಯಾರಾಗ್ಲೈಡಿಂಗ್ ಮೂಲಕ ಪರೀಕ್ಷಾ ಕೇಂದ್ರವನ್ನು ತಲುಪಿದ ವಿದ್ಯಾರ್ಥಿ ಸಮರ್ಥ್ ಮಹಾಂಗ್ಡೆ ಸತಾರಾ ಜಿಲ್ಲೆಯ ವಾಯ್ ತಾಲೂಕಿನ ಪಸ್ರಾನಿ ಗ್ರಾಮದ ನಿವಾಸಿ. ಆತ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಬೇಕಾಗಿತ್ತು, ಆದ್ರೆ ಒಂದೆಡೆ ಪರೀಕ್ಷೆಗೆ ಕೇವಲ ಇದ್ದ ಕಾರಣ ಹಾಗೂ ರಸ್ತೆಯಲ್ಲಿ ಭಾರೀ ಟ್ರಾಫಿಕ್‌ ಜಾಮ್‌ ಇದ್ದ ಆತನಿಗೆ ಸಮಯಕ್ಕೆ ಸರಿಯಾಗಿ ಎಕ್ಸಾಂ ಹಾಲ್‌ ತಲುಪೋದು ಕಷ್ಟಕರವಾಗಿತ್ತು. ಆಗ ಆತ ಪ್ಯಾರಾಗ್ಲೈಡಿಂಗ್‌ ಮಾಡಿ ಕಾಲೇಜು ತಲುಪಿದ್ದಾನೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ :

ಮಾಧ್ಯಮ ವರದಿಗಳ ಪ್ರಕಾರ, ಸಮರ್ಥ್ ಮಹಾಂಗ್ಡೆ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿ. ಅವನಿಗೆ ಪರೀಕ್ಷೆ ಇದ್ದ ದಿನ, ಅವನು ಪಂಚಗಣಿಯಲ್ಲಿದ್ದನು ಮತ್ತು ವಾರಾಂತ್ಯದ ಕಾರಣ, ಆತ ಜ್ಯೂಸ್ ಸ್ಟಾಲ್‌ನಲ್ಲಿ ಕೆಲಸ ಮಾಡ್ತಿದ್ದ. ಆತ ಕಾಲೇಜಿಗೆ ಬಾರದೇ ಇದ್ದಿದ್ದನ್ನು ಕಂಡು ಸ್ನೇಹಿತರು ಕರೆ ಮಾಡಿ ಪರೀಕ್ಷೆ ತಡವಾಗ್ತಿದೆ ನೀನು ಎಲ್ಲಿದ್ದೀಯಾ ಎಂದು ಕೇಳಿದ್ದಾರೆ. ಇದರಿಂದ ಶಾಕ್‌ ಆದ ಆ ಯುವಕ ಪರೀಕ್ಷೆಗೆ ಕೇವಲ 20 ನಿಮಿಷ ಮಾತ್ರ ಉಳಿದಿದೆ. ರಸ್ತೆ ಮೂಲಕ ಹೋದ್ರೆ ಖಂಡಿತವಾಗಿಯೂ ಪರೀಕ್ಷೆಗೆ ತಡವಾಗುತ್ತೆ ಎಂದು ಪ್ಯಾರಗ್ಲೈಡಿಂಗ ಮಾಡುವ ಯೋಜನೆ ಮಾಡ್ತಾನೆ. ನಂತರ ಆತ ಜಿಪಿ ಅಡ್ವೆಂಚರ್ಸ್‌ನ ಸಾಹಸ ಕ್ರೀಡಾ ತಜ್ಞ ಗೋವಿಂದ್‌ ಯೆವಾಲೆ ಸಹಾಯದಿಂದ ಪ್ಯಾರಾಗ್ಲೈಡಿಂಗ್‌ ಮಾಡುತ್ತಾ ಎಕ್ಸಾಂ ಹಾಲ್‌ ತಲುಪಿದ್ದಾನೆ.

ಇದನ್ನೂ ಓದಿ: ಐದಲ್ಲ… ಹತ್ತಲ್ಲ… ಬರೋಬ್ಬರಿ 19 ಪ್ರಯಾಣಿಕರನ್ನು ಒಂದೇ ಬಾರಿಗೆ ಆಟೋದಲ್ಲಿ ಹೊತ್ತೊಯ್ದ ಚಾಲಕ; ವಿಡಿಯೋ ವೈರಲ್‌

SunnySunnypawan ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾದ ಈ ವಿಡಿಯೋದಲ್ಲಿ ವಿದ್ಯಾರ್ಥಿ ಪ್ಯಾರಾಗ್ಲೈಡಿಂಗ್‌ ಮಾಡುತ್ತಾ ಎಕ್ಸಾಂ ಹಾಲ್‌ಗೆ ತೆರಳುತ್ತಿರುವ ದೃಶ್ಯವನ್ನು ಕಾಣಬಹುದು. ಈ ದೃಶ್ಯ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ವಿದ್ಯಾರ್ಥಿಯ ಈ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​​ ಮಾಡಿ

Published On - 12:22 pm, Wed, 19 February 25