Viral: ಮೋದಿ ಅಥವಾ ಮುಖೇಶ್ ಅಂಬಾನಿ; ರ‍್ಯಾಪಿಡ್ ಫೈರ್ ರೌಂಡ್‌ನಲ್ಲಿ ನೀತಾ ಅಂಬಾನಿ ಕೊಟ್ಟ ಆನ್ಸರ್ ಫುಲ್ ವೈರಲ್
ಅಂಬಾನಿ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ವಿಡಿಯೋಗಳು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಹಾರ್ವರ್ಡ್ ಇಂಡಿಯಾ ಸಮ್ಮೇಳನ 2025 ರಲ್ಲಿ ಭಾಗವಹಿಸಿದ್ದ ನೀತಾ ಅಂಬಾನಿಯವರಿಗೆ ಸಂದರ್ಶನದಲ್ಲಿ ರ‍್ಯಾಪಿಡ್ ಫೈರ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಅದರಲ್ಲಿ ಅವರು ಮೋದಿ ಅಥವಾ ಮುಖೇಶ್ ಅಂಬಾನಿ ನಿಮ್ಮ ಆಯ್ಕೆ ಯಾರು? ಎಂದು ಕೇಳಿದ ಪ್ರಶ್ನೆಗೆ ನೀಡಿದ ಹಾಸ್ಯಮಯ ಹಾಗೂ ಬುದ್ಧಿವಂತ ಉತ್ತರಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಇತ್ತೀಚಿಗೆ ಹಾರ್ವರ್ಡ್ ಇಂಡಿಯನ್ ಕಾನ್ಫರೆನ್ಸ್ 2025 ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಷಣವನ್ನು ಮಾಡಿದ ನಂತರ ಕ್ಷಿಪ್ರ ಸಂದರ್ಶನದಲ್ಲಿಯೂ ಭಾಗವಹಿಸಿದ್ದರು. ಈ ಸಂದರ್ಶನದ ರ‍್ಯಾಪಿಡ್ ಫೈರ್ ರೌಂಡ್‌ನಲ್ಲಿ ಸಂದರ್ಶಕ ಕೇಳಿದ ಜಟಿಲ ಪ್ರಶ್ನೆಗೆ ಕ್ಷಣಾರ್ಧದಲ್ಲಿ ಬುದ್ಧಿವಂತಿಕೆಯಿಂದ ಆನ್ಸರ್ ಮಾಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ. ಮೋದಿ ಅಥವಾ ಮುಖೇಶ್ ಅಂಬಾನಿ ನಿಮ್ಮ ಆಯ್ಕೆ ಯಾರು? ಎಂದು ಕೇಳಿದ ಪ್ರಶ್ನೆಗೆ ನೀತಾ ಅಂಬಾನಿ ನೀಡಿದ ಹಾಸ್ಯಮಯ ಹಾಗೂ ಬುದ್ಧಿವಂತ ಉತ್ತರಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಸಂದರ್ಶಕರು ರ‍್ಯಾಪಿಡ್ ಫೈರ್ ರೌಂಡ್‌ನಲ್ಲಿ ನೀತಾ ಅಂಬಾನಿ ಬಳಿ ಮೋದಿ ಅಥವಾ ಮುಖೇಶ್ ಅಂಬಾನಿ ನಿಮ್ಮ ಆಯ್ಕೆ ಯಾರು? ಎಂಬ ಪ್ರಶ್ನೆಗೆ “ಪ್ರಧಾನಿ ಮೋದಿ ದೇಶಕ್ಕೆ ಒಳ್ಳೆಯದು ಮಾಡಿದರೆ ನನ್ನ ಪತಿ ಮುಖೇಶ್ ನಮ್ಮ ಮನೆಗೆ ಒಳ್ಳೆಯದನ್ನು ಮಾಡುತ್ತಾರೆ” ಎಂಬ ತಮಾಷೆಯ ಹಾಗೂ ಬುದ್ಧಿವಂತಿಕೆಯ ಉತ್ತರವನ್ನು ನೀಡಿದ್ದಾರೆ. ಅಲ್ಲಿ ನೆರೆದಿದ್ದ ಪ್ರೇಕ್ಷಕರು ನೀತಾ ಅಂಬಾನಿಯ ಉತ್ತರವನ್ನು ಕೇಳಿ ಚಪ್ಪಾಳೆ ತಟ್ಟಿದ್ದಾರೆ.
ಈ ಕುರಿತ ವಿಡಿಯೋವನ್ನು varindertchawla ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಂದರ್ಶಕರು ರ‍್ಯಾಪಿಡ್ ಫೈರ್ ರೌಂಡ್‌ನಲ್ಲಿ ನೀತಾ ಅಂಬಾನಿ ಬಳಿ ಮೋದಿ ಅಥವಾ ಮುಖೇಶ್ ಅಂಬಾನಿ ನಿಮ್ಮ ಆಯ್ಕೆ ಯಾರು? ಎಂಬ ಪ್ರಶ್ನೆಗೆ “ಪ್ರಧಾನಿ ಮೋದಿ ದೇಶಕ್ಕೆ ಒಳ್ಳೆಯದು ಮಾಡಿದರೆ ನನ್ನ ಪತಿ ಮುಖೇಶ್ ನಮ್ಮ ಮನೆಗೆ ಒಳ್ಳೆಯದನ್ನು ಮಾಡುತ್ತಾರೆ” ಎಂದು ಹೇಳುತ್ತಿರುವ ದೃಶ್ಯವನ್ನು ಕಾಣಬಹುದು.
View this post on Instagram
ಇದನ್ನೂ ಓದಿ: ಕೋಳಿ ಸಾಗಾಟದ ಪಿಕಪ್ ಟ್ರಕ್ ಪಲ್ಟಿ; ವಾಹನದಿಂದ ಬಿದ್ದ ಕೋಳಿಗಳಿಗಾಗಿ ಮುಗಿಬಿದ್ದ ಚಿಕನ್ ಪ್ರಿಯರು
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.6 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಎಂತಹ ಬ್ರಿಲಿಯೆಂಟ್ ಉತ್ತರ ನೀಡಿದ್ದಾರೆ ಅಲ್ವಾʼ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬ್ಯೂಟಿ ವಿಥ್ ಬ್ರೈನ್ʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ನೀತಾ ಅಂಬಾನಿ ನೀಡಿದ ಉತ್ತರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




